Category: ಇತರೆ

ಇತರೆ

ಪಾತ್ರೆಗಳ ಲೋಕದಲ್ಲಿ..

ಲಲಿತ ಪ್ರಬಂಧ ಪಾತ್ರೆಗಳ ಲೋಕದಲ್ಲಿ.. ಜ್ಯೋತಿ ಡಿ.ಬೊಮ್ಮಾ. ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ. ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ […]

ಖುಷಿ ನಮ್ಮಲ್ಲೇ!!!

ಲೇಖನ ಖುಷಿ ನಮ್ಮಲ್ಲೇ!!! ಮಾಲಾ ಅಕ್ಕಿಶೆಟ್ಟಿ  ಕೈಯಲ್ಲಿ10 ರ ನೋಟು ಹಿಡಿದುಕೊಂಡು ಬಡ ಹುಡುಗ ರೋಡ್ ಮೇಲೆ ಇರುವ ಭಜಿ ಅಂಗಡಿಗೆ ಬಂದಿದ್ದ. ಆಸೆ ಕಂಗಳಿಂದ ಮೂರು ತರಹದ ಭಜಿ, ‌ಅಂದರೆ ‌ಕಾಂದಾ, ‌ಮಿರ್ಚಿ ‌ಮತ್ತು ‌ಮೈಸೂರ ‌ಭಜಿಯನ್ನು ‌‌ಒಂದೇ ‌ಸಮನೇ ನೋಡಿದ. ‌ಆ ‌ಅಂಗಡಿಯಲ್ಲಿ 4 ‌ಭಜಿಗಳ ‌ಪ್ಲೇಟ್ಗೆ 20 ‌ರೂಪಾಯಿ.ಒಂದು ಭಜಿಯನ್ನು ಕೊಡುವ ಸೌಲಭ್ಯವಿರುವದರಿಂದ 5ರೂಪಾಯಿಗೆ ‌ಯಾವುದಾದರು ‌ಭಜಿ ‌ತಿನ್ನಬಹುದು.ಆತ ‌ಡಿಸೈಡ್ ‌ಮಾಡಿ 5 ರೂ ‌ಕೊಟ್ಟು ‌ಮಿರ್ಚಿ ‌ಭಜಿಯನ್ನು ಸವಿದ.ಬಸಿಯಾಕಾರದಲ್ಲಿ ಕಣ್ಣು ತೆರೆದು, […]

ನಾವು ಕನ್ನಡಿಗರು’ – ಜಾಗತಿಕ ಸರಪಳಿಯ ಒಂದು ಕೊಂಡಿ

ಲೇಖನ ನಾವು ಕನ್ನಡಿಗರು’ ಜಾಗತಿಕ ಸರಪಳಿಯ ಒಂದು ಕೊಂಡಿ ಗಣೇಶ ಭಟ್ಟ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಉದ್ದೇಶದಿಂದ ಭಾಷೆ , ಸಂಸ್ಕೃತಿ, ಪರಂಪರೆಯ ಭಾವಧಾರೆಯನ್ನು ಬಳಸಿಕೊಂಡು ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನು ಪ್ರಾದೇಶಿಕತೆಯನ್ನು ಪ್ರೋತ್ಸಾಹಿಸಿ, ದೇಶವನ್ನು ದುರ್ಬಲಗೊಳಿಸುವ ಕಾರ್ಯವೆಂದು ಕೆಲವರು ಅಕ್ಷೇಪಿಸುತ್ತಾರೆ. ಹಲವು ವಿಧದ ಹೂವುಗಳನ್ನು ಬಳಸಿ ಹಾರ ತಯಾರಿಸಿದಾಗ ಅದರ ಸೌಂದರ್ಯ ಹಾಳಾಗುತ್ತದೆಂದು ಗೊಣಗುವುದು ಸಮಂಜಸವೆನಿಸಲಾರದು. ಪ್ರತಿಯೊಂದು ಹೂವಿಗೂ ಅದರದ್ದೇ ಆದ ಸ್ವರೂಪ, ವೈಶಿಷ್ಟತೆ, ಸೌಂದರ್ಯ ಇದ್ದರೂ ಎಲ್ಲಾ ವಿಧದ ಹೂಗಳನ್ನು ಸಮರ್ಪಕವಾಗಿ ಪೋಣಿಸಿ ಹಾರವನ್ನು ಸುಂದರವಾಗಿಸಲು […]

ಸಂತೆಯಲ್ಲಿ ನಿಂತ ಅವಳು

ಲೇಖನ ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು)             ಪ್ರಾಚೀನ ಕಾಲದಿಂದ ಇಂದಿನವರೆಗೂ ಮಾರುಕಟ್ಟೆಗೆ ಒಂದು ಆರೋಗ್ಯಕರವಾದ ನೀತಿ ಸಂಹಿತೆಯನ್ನು ರೂಪಿಸುವ ವಿವೇಕ ಮತ್ತು ವ್ಯವಧಾನ ಸಾಮುದಾಯಿಕ ಜವಾಬ್ದಾರಿಯಾಗಿ ಯಾವ ಕಾಲದಲ್ಲಿ ಯಾರಲ್ಲಿಯೂ ಕಾಣಿಸಿಕೊಂಡಿಲ್ಲ. ಆರೋಗ್ಯಕರ ಸಮಾಜಕ್ಕೆ ಲಾಭಗಳಿಕೆಯ ವ್ಯವಹಾರಿಕತೆಯನ್ನು ನಿಯಂತ್ರಿಸುವ ಶಕ್ತಿಯಿಲ್ಲದಿದ್ದರೆ ಇಡೀ ವ್ಯವಸ್ಥೆಯೇ ನರಳಬೇಕಾಗುತ್ತದೆ. ಮಾರುಕಟ್ಟೆ ಸಂಸ್ಕೃತಿ ಗಳಿಕೆಯ ತೂಗು ಕತ್ತಿಯನ್ನು ನಿರಂತರ ಗ್ರಾಹಕನ ಮೇಲೆ ಬೀಸುತ್ತಿರುತ್ತದೆ. ಇದರಿಂದ ವ್ಯಕ್ತಿ […]

ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ

ಲಹರಿ ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ ಸ್ಮಿತಾ ಭಟ್ ತವರು ಎನ್ನುವದು ಮುಗಿಯಲಾರದ ಸೆಳೆತ ಮತ್ತದು ಹೆಣ್ಮಕ್ಕಳಿಗೆ ಮಾತ್ರ ಸೀಮಿತ. ತಲೆ ತಲಾಂತರಗಳಿಂದಲೂ ತವರು ಮತ್ತು ಹೆಣ್ಣು ಸಯಾಮಿಯಂತೆ ಬದುಕುತ್ತ ಬಂದಿದ್ದಾರೆ. ಹೆಣ್ಣಿನೊಳಗೆ ತವರಿನ ಸೆಳೆತ,ಪುಳಕ,ಅಪ್ಯಾಯ ಭಾವಗಳು ಶುರುವಾಗುವದೇ ಮದುವೆಯೆಂಬ ಬಂಧನದಲಿ,ಭಾವದಲಿ,ಸಿಲುಕಿ ತವರ ತೊರೆದು ಹೊರನಡೆದಾಗಲೇ. ಅಲ್ಲಿಯವರೆಗೆ ಸುಪ್ತವಾಗಿದ್ದ ನಯ ನಾಜೂಕಿನ ಭಾವನೆಗಳೆಲ್ಲ ಕಟ್ಟೆಯೊಡೆದು ಹೃದಯವನ್ನು ತಲ್ಲಣಗೊಳಿಸಿಬಿಡುತ್ತವೆ. ಎಂತಹ ಐಶಾರಾಮಿ ಗಂಡನಮನೆಯೇ ಸಿಗಲಿ ತವರಿನಿಂದ ಬರುವ ಪುಟ್ಟ ಉಡುಗೊರೆಗಾಗಿ  ಹೆಣ್ಣು ಕಾತರದಿಂದ ಕಾಯುತ್ತಾಳೆ. ತವರೂರಿನ ಹೆಸರು […]

ಶಾಂತಲಾ ಮಧು ಬಹುಮುಖ ಪ್ರತಿಭೆ

ಶಾಂತಲಾ ಮಧು ಬಹುಮುಖ ಪ್ರತಿಭೆ ಶಾಂತಲಾ ಮಧು ಅವರ ಪರಿಚಯ ಶಾಂತಲಾ ಮಧು ಅವರು ಅಂತಾರಾಷ್ಟ್ರೀಯ ಯೋಗ ಗುರುವಾಗಿ ಕೆಲಸ ಮಾಡುತ್ತಿದ್ದಾರೆ. ಉಸ್ತಾದ್ ಬಾಲೇಖಾನ್ ಶಿಷ್ಯೆಯಾಗಿ ಸಿತಾರ್ ವಾದನ ಕಲಿತಿದ್ದಾರೆ. ಬಯಲು ಕವನ ಸಂಕಲನ ಪ್ರಕಟಿಸಿದ್ದಾರೆ. ಚಿತ್ರಕಲಾವಿದೆ ಸಹ . ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ . ಪತಿ ಮಧು ಅವರು ಯಾರ್ಡ್ಲಿ ಸಂಸ್ಥೆಯ ಉಪಾಧ್ಯಕ್ಷರು. ಪುತ್ರಿ ರಶ್ಮಿ ಅವರು ವೈದ್ಯೆ . ಮಗ ಗೌತಮ್ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಶಾಂತಲಾ ಅವರು ಕನ್ನಡ ಸಾಹಿತ್ಯ ಸ್ನಾತಕೋತ್ತರ ಪದವೀಧರೆ […]

ಹುಯಿಲಗೋಳ ನಾರಾಯಣರಾಯ..!

ಲೇಖನ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ವಿನ ಹುಯಿಲಗೋಳ ನಾರಾಯಣರಾಯ..! ಇಂದು ಹುಯಿಲಗೋಳ ನಾರಾಯಣರಾಯರ ಜನ್ಮದಿನ. ಆ ನೆನಪಲ್ಲಿ ಈ ಬರಹ… ಹುಯಿಲಗೋಳ ನಾರಾಯಣರಾಯರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯನ್ನು ರಚಿಸಿದವರು. ೧೮೮೪ ಅಕ್ಟೋಬರ್ ೪ ರಂದು ಗದಗದಲ್ಲಿ ಜನಿಸಿದವರು. ಇವರ ತಂದೆ ಕೃಷ್ಣರಾಯರು, ತಾಯಿ ರಾಧಾಬಾಯಿ(ಬಹಿಣಕ್ಕ). ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗೂ ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ […]

ಯಾಕೆ ನೆಗೆಟಿವಿಟಿ?

ಲೇಖನ ಯಾಕೆ ನೆಗೆಟಿವಿಟಿ? ಮಾಲಾ.ಮ. ಅಕ್ಕಿಶೆಟ್ಟಿ.  “ಆಕೆ ಯಾವಾಗಲೂ ಹಾಗೆಯೇ ಬಿಡಿ. ಏನ್ ಹೇಳಿದ್ರು ನೆಗೆಟಿವ್ ಆಗಿ ಯೋಚಿಸಿ, ಅದರಲ್ಲೇ ಮುಳುಗಿರುತ್ತಾಳೆ. ಇದ್ದ ಗಳಿಗೆಯನ್ನು ಆನಂದಿಸಲು ಬರಲ್ಲ. ಬರೀ ನೆಗೆಟಿವ್. ಜೀವನವನ್ನು ಆನಂದಿಸುವುದೂ ಒಂದು ಕಲೆ. ಅದು ಆಕೆಗೆ ಗೊತ್ತಿಲ್ಲ. ಎಲ್ಲರದೂ ಒಂದೊಂದು ಸಮಸ್ಯೆ ಇದ್ದೇ ಇರುತ್ತೆ. ಯಾರಿಗೂ ಸಮಸ್ಯೆ ತಪ್ಪಿದ್ದಿಲ್ಲ. ಜೀವನ ಇದ್ದ ಹಾಗೆ ನಡೆದುಕೊಂಡು ಹೋಗಬೇಕು. ಅದು ಬಿಟ್ಟು ಸತತ ಇಪ್ಪತ್ತನಾಲ್ಕು ಗಂಟೆಯೂ ನಕಾರಾತ್ಮಕವಾಗಿ ಯೋಚಿಸಿದರೆ ಹೇಗೆ? ಅದೇನೊ ಅಂತಾರಲ್ಲ ಪ್ರತಿ ಪರಿಹಾರಕ್ಕೂ ಇಂಥವರು […]

‘ಜೈ ಜವಾನ್, ಜೈ ಕಿಸಾನ್’

ಲೇಖನ ‘ಜೈ ಜವಾನ್, ಜೈ ಕಿಸಾನ್’ ಜಯಘೋಷದ ಲಾಲ್ ಬಹಾದ್ದೂರ್ ಶಾಸ್ತ್ರಿ ಇಂದು ಮಹಾತ್ಮ ಗಾಂಧಿ ಹುಟ್ಟಿದ ದಿನವೂ ಹೌದು. ಹಾಗೆಯೇ ಲಾಲ್ ಬಹಾದ್ದೂರ್ ಶಾಸ್ತ್ರೀಯ ಹುಟ್ಟು ಹಬ್ಬವೂ ಹೌದು. ಗಾಂಧಿ ಸ್ಮರೀಸಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸ್ಮರಣೆ ಮಾಡದೇ ಬಿಟ್ಟರೆ ಅದು ಮಹಾ ತಪ್ಪಾಗುತ್ತದೆ. ಇಬ್ಬರೂ ರಾಷ್ಟ್ರದ ಹಿತ ಚಿಂತಕರು, ಆ ಕಾರಣಕ್ಕೆ ಈ ಇಬ್ಬರ ಒಂದೇ ದಿನದ ಹುಟ್ಟು ಹಬ್ಬದ ಸ್ಮರಣೆಯನ್ನು ಮಾಡೋಣ… ಇತರರಿಗೆ ಹೋಲಿಸಿದರೆ, ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಹೊಸಬರಾಗಿದ್ದರೂ ಸಹ, 1965ರಲ್ಲಿ […]

ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ :

ಲೇಖನ ಮಹಾತ್ಮಾಗಾಂಧೀಜಿಯವರ  ಚಿಂತನೆಗಳ ಪ್ರಸ್ತುತತೆ : “ಹಸಿದ ಹೊಟ್ಟೆಯವನಿಗೆ ಯಾವ ಉಪದೇಶವೂ ಮುಖ್ಯವಲ್ಲ” ಪಾಪವನ್ನು ದ್ವೇಷಿಸಿ ಪಾಪಿಯನ್ನಲ್ಲ” ಇವು ನಮ್ಮ ನೆಚ್ಚಿನ ಬಾಪೂಜಿಯವರ ನುಡಿಮುತ್ತುಗಳು.”ಅಯ್ಯಾ ನೀನೇನು ದೇವರಲ್ಲ, ಆದರೆ ದೇವರನ್ನು ಬಲವಾಗಿ ನಂಬಿದವನು, ದಂತವಿಲ್ಲದಿದ್ದರೂ ಬದುಕಿದ್ದ ಕಾಲದಲ್ಲೇ ದಂತಕಥೆಯಾದವನು” ಇವು  ಮಹಾತ್ಮಾ ಗಾಂಧೀಜಿಯವರ ಕುರಿತು ಕವಿ ಸಿ.ಪಿ.ಕೆ.ತಮ್ಮ ವಂದನೆ ಕವಿತೆಯಲ್ಲಿ ಮನೋಜ್ಞವಾಗಿ ಮೂಡಿಸಿದ ಸಾಲುಗಳು. ಮೋಹನದಾಸ ಕರಮಚಂದ ಗಾಂಧಿ ಎಂಬ ಬಾಲಕ ಯಾರಿಗೂ ನಿಲುಕದ ಅತಿಮಾನವನೇನೂ ಆಗಿರಲಿಲ್ಲ. ಎಲ್ಲರಂತೆಯೇ ಹುಟ್ಟಿ ಬೆಳೆದ ಒಬ್ಬ ಸಾಮಾನ್ಯ ಮಗು. ಅವರ […]

Back To Top