ಶಾಂತಲಾ ಮಧು ಬಹುಮುಖ ಪ್ರತಿಭೆ

ಶಾಂತಲಾ ಮಧು

ಬಹುಮುಖ ಪ್ರತಿಭೆ

ಶಾಂತಲಾ ಮಧು ಅವರ ಪರಿಚಯ

ಶಾಂತಲಾ ಮಧು ಅವರು ಅಂತಾರಾಷ್ಟ್ರೀಯ ಯೋಗ ಗುರುವಾಗಿ ಕೆಲಸ ಮಾಡುತ್ತಿದ್ದಾರೆ. ಉಸ್ತಾದ್ ಬಾಲೇಖಾನ್ ಶಿಷ್ಯೆಯಾಗಿ ಸಿತಾರ್ ವಾದನ ಕಲಿತಿದ್ದಾರೆ. ಬಯಲು ಕವನ ಸಂಕಲನ ಪ್ರಕಟಿಸಿದ್ದಾರೆ. ಚಿತ್ರಕಲಾವಿದೆ ಸಹ . ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ . ಪತಿ ಮಧು ಅವರು ಯಾರ್ಡ್ಲಿ ಸಂಸ್ಥೆಯ ಉಪಾಧ್ಯಕ್ಷರು. ಪುತ್ರಿ ರಶ್ಮಿ ಅವರು ವೈದ್ಯೆ . ಮಗ ಗೌತಮ್ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ

ಶಾಂತಲಾ ಅವರು ಕನ್ನಡ ಸಾಹಿತ್ಯ ಸ್ನಾತಕೋತ್ತರ ಪದವೀಧರೆ . ಕುವೆಂಪು ವಿಶ್ವವಿದ್ಯಾನಿಲಯದ ಎಲ್. ಬಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿರುವ ಇವರು ‘ಬಯಲು’ ಎಂಬ ಕವನ ಸಂಗ್ರಹವನ್ನು ಪ್ರಕಟಿಸಿದ್ದಾರೆ .

  • ೨೦ ವರ್ಷಕ್ಕೂ ಮೇಲ್ಪಟ್ಟು ಯೋಗ ಗುರುಗಳಾಗಿ ಅನುಭವ ಹಾಗೂ ಭಾರತ ಮತ್ತು ಅಮೆರಿಕ ಸೇರಿದಂತೆ ಸಾವಿರಕ್ಕೂ ಹೆಚ್ಚು ಜನಕ್ಕೆ ಯೋಗ ಕಲಿಸಿದ್ದಾರೆ .
  • ಭಾರತ ಸರ್ಕಾರ ಅನುಮೋದಿತ ರಾಷ್ಟ್ರಮಟ್ಟದ ಯೋಗ ಶಿಕ್ಷಕ ಪ್ರಮಾಣಪತ್ರ ಗಳಿಕೆ.
  • ” ಶ್ರೀ ಯೋಗ ಸೆಂಟರ್” ನ ಡೈರೆಕ್ಟರ್__ ಹದಿನೈದು ವರ್ಷಗಳಿಂದ
  • ಬಿಎಂ ವೇರ್ ನಲ್ಲಿ ಎಂಟು ವರ್ಷದಿಂದ ಯೋಗ ಶಿಕ್ಷಣ ನೀಡಿಕೆ .
  • ಹಲವಾರು ಯೋಗ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರಗಳ ನಿರ್ವಹಣೆ .
  • “ಮಿಸೆಸ್ ಇಂಡಿಯಾ ಮೈ ಐಡೆಂಟಿಟಿ” ೨೦೧೯ ರಲ್ಲಿ ಸಾಮಾಜಿಕ ಪ್ರಭಾವ …. ಕಿರೀಟ…
  • ” ಸಮಾಧಾನ ಸಲಹಾ ಕೇಂದ್ರದಲ್ಲಿ ಪ್ರಮಾಣೀಕೃತ ಸಲಹೆಗಾರ್ತಿ
  • ರಾಷ್ಟ್ರಮಟ್ಟದ ಚಿತ್ರಕಲೆಗಾರ್ತಿ
  • ವಿಪಸ್ಯನಾ ಧ್ಯಾನ ಪರಿಣತೆ
  • ಸಿತಾರ್ ವಾದ್ಯಗಾರ್ತಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ಯಾರ್ಥಿನಿ .

ವಿವರಗಳು

ಶಾಂತಲಾ ಅವರು ಬಾಲ್ಯದಿಂದ ಹಠಯೋಗ ಅಭ್ಯಸಿಸುತ್ತಿದ್ದಾರೆ . ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಯೋಗದಲ್ಲಿ ಪ್ರಾಥಮಿಕ ಶಿಕ್ಷಣ. ನಂತರ ಪುಣೆಯಲ್ಲಿ ಬಿ.ಕೆ.ಎಸ್ ಅಯ್ಯಂಗಾರ್ ಸಂಸ್ಥೆಯಲ್ಲಿ ಪರಿಣತ ಯೋಗಾಭ್ಯಾಸ . ಈಗ ಸುಮಾರು ಇಪ್ಪತ್ತು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಯೋಗ ಶಿಕ್ಷಕಿಯಾಗಿ ಭಾರತ ಮತ್ತು ಅಮೆರಿಕದಲ್ಲಿ ಯೋಗ ಕಲಿಸುತ್ತಿದ್ದಾರೆ.

ಏಷಿಯನ್ ಫೆಸ್ಟಿವಲ್ (ಓಹಿಯೋ ) A. T. & T ಬೆಲ್ ಲ್ಯಾಬ್ಸ್ (ಕೊಲಂಬಿಯಾ) ಭಾರತೀಯ ಸಾಂಸ್ಕೃತಿಕ ಉತ್ಸವಗಳು ಮುಂತಾದ ಅಮೆರಿಕದ ಪ್ರತಿಷ್ಠಿತ ಸಂಸ್ಥೆ ಸಮಾರಂಭಗಳಲ್ಲಿ ಯೋಗ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ . ಭಾರತದಲ್ಲಿ ಪುಣೆ ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಬೆಂಗಳೂರಿನಲ್ಲಿ ೧೫ ವರ್ಷಗಳ ಹಿಂದೆ ಶ್ರೀ ಯೋಗ ಸೆಂಟರ್ ಸ್ಥಾಪಿಸಿದ್ದಾರೆ. ಅದರ ಮೂಲಕ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಯೋಗದ ಮೂಲಕ ಆರ್ಥೈಟಿಸ್ ಮಧುಮೇಹ ರಕ್ತದ ಒತ್ತಡ ಸಂತಾನಹೀನತೆ ಅಸಿಡಿಟಿ ಅಸ್ತಮಾ ಬೆನ್ನುನೋವು ತಲೆನೋವು ಮೈಗ್ರೇನ್ ಇನ್ನೂ ಮುಂತಾದ ಕಾಯಿಲೆಗಳಿಂದ ನರಳುವ ರೋಗಿಗಳಿಗೆ ಗುಣಮುಖರಾಗಲು ನೆರವು ನೀಡಿದ್ದಾರೆ. ಯೋಗ ಮತ್ತು ಒತ್ತಡ ನಿವಾರಣೆಯ ಕ್ರಮಗಳಾದ ಪ್ರಾಣಾಯಾಮ ಮತ್ತು ಧ್ಯಾನಗಳನ್ನು ವಿ.ಎಂ .ವೇರ್ ಮೊದಲಾದ ಸಾಫ್ಟ್ವೇರ್ ಕಂಪನಿಗಳಲ್ಲಿ ಬೋಧಿಸಿದ್ದಾರೆ.

ಶಾಂತಲಾ ಅವರದು ಬಹುಮುಖ ಪ್ರತಿಭೆ. ಚಿಕ್ಕಂದಿನಿಂದಲೇ ಕಲೆಯ ಹಲವಾರು ಪ್ರಕಾರಗಳಲ್ಲಿ ಅವರಿಗೆ ಆಸಕ್ತಿ.ಚಿತ್ರಕಲೆಯ ಸಾಂಪ್ರದಾಯಿಕ ಶಿಕ್ಷಣವನ್ನು ಪ್ರತಿಷ್ಠಿತ ಸಂಸ್ಥೆ ಮತ್ತು ವ್ಯಕ್ತಿಗಳಲ್ಲಿ ಪಡೆದಿದ್ದಾರೆ . ಮಿ. ಕೂಪರ್ ಸ್ಕೂಲ್ ಆಫ್ ಆರ್ಟ್ಸ್ ಓಹಿಯೋ ಯುಎಸ್ಎ (ಲ್ಯಾಂಡ್ಸ್ಕೇಪ್ ಮತ್ತು
ಪೋರ್ಟ್ರೈಟ್) ಶ್ರೀಮತಿ ಕಾರ್ಲೆ ಪುಣೆ (ಮಿನಿಯೇಚರ್ ಮತ್ತು ಮೊಘಲ್ ಕಲೆ) ಮಿ. ಶಂಸುದ್ದೀನ್ (ಮ್ಯೂರಲ್)
ತೈಲ ಚಿತ್ರ ಸೆರಾಮಿಕ್ ಪೆಂಟಿಂಗ್ ಮೊದಲಾದ ಪ್ರಕಾರಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಶಾಂತಲಾ ಅವರ ಕಲಾಕೃತಿಗಳು ಜಮ್ಮು ಕಾಶ್ಮೀರ ರಾಜಸ್ಥಾನ ಹೈದರಾಬಾದ್ (ಚಿತ್ರಮಯಿ ಆರ್ಟ್ ಗ್ಯಾಲರಿ) ಪಂಜಾಬ್ ಬೆಂಗಳೂರು (ಚಿತ್ರಕಲಾ ಪರಿಷತ್) ಮತ್ತು ಯುಎಸ್ಎ ನಲ್ಲಿನ ಪ್ರತಿಷ್ಠಿತ ಆರ್ಟ್ ಗ್ಯಾಲರಿಗಳಲ್ಲಿ ಪ್ರದರ್ಶಿತವಾಗಿದೆ

ಶಾಂತಲಾ ಅವರಿಗೆ ಪ್ರಕೃತಿಯೇ ಸ್ಫೂರ್ತಿ. ಉದ್ಯಾನವನಗಳು ಸಮುದ್ರ ತೀರ ಹಾಗೂ ಕಾಡುಗಳಿಗೆ ಭೇಟಿ ಕೊಟ್ಟು ಅಲ್ಲಿನ ದೃಶ್ಯಗಳನ್ನು ಕ್ಯಾನ್ವಾಸ್ಗೆ ತರಲು ಇಷ್ಟಪಡುತ್ತಾರೆ. ದೇವನ ಸೃಷ್ಟಿಯದು ಅತ್ಯದ್ಭುತ ಹಾಗೂ ತಾನು ಅದನ್ನು ಚಿತ್ರಿಸುವುದು ಮೆಚ್ಚುಗೆಯ ಒಂದು ವಿನಯಶೀಲ ಪ್ರಯತ್ನ ಮಾತ್ರ ಎನ್ನುತ್ತಾರೆ.

ಶಾಂತಲಾ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ಸಿತಾರ್ ವಾದನವನ್ನು ಧಾರವಾಡದ ಉಸ್ತಾದ್ ಬಾಲೆ ಖಾನ್ ಅವರ ಬಳಿ ಅಭ್ಯಸಿಸಿದ್ದಾರೆ .


ಶಾಂತಲಾರವರೊಂದಿಗೆ ಸಂಗಾತಿ ಮಾತಾಡಿದಾಗ

ಸಂಗಾತಿ-ನಮಸ್ಕಾರ,ಸಂಗೀತ,ಚಿತ್ರಕಲೆ,ಯೋಗ,ಸಾಹಿತ್ಯ ಈ ನಾಲ್ಕೂ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಿಮಗೆ ಮೂಲಸ್ಪೂರ್ತಿ ಯಾರು?

ಮಲೆನಾಡಿನ ಮಗಳಾದ ನನಗೆ -ಪ್ರಕೃತಿ ಮೂಲ ಪ್ರೇರಣೆ ಮತ್ತು ಸ್ಪೂರ್ತಿ

ಸಂಗಾತಿ -ಮೇಲಿನ ನಾಲ್ಕು ಕ್ಷೇತ್ರಗಳಲ್ಲಿನಿಮ್ಮ ಹೃದಯಕ್ಕೆ ಹತ್ತಿರವಾದದು ಯಾವುದು?

ಯೋಗ ಮತ್ತು ಧ್ಯಾನ

ಸಂಗಾತಿ-ಸದ್ಯ ಯಾವ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದೀರಿ?


೧ ಯೋಗ ( I am teaching also) ೨ ಚಿತ್ರಕಲೆ ( I am participating online exhibition s)೩ ಸಿತಾರ್ ೪ ಬರಹ .


ಸಂಗಾತಿ-ಈಗ ನಿಮ್ಮ ಮುಂದಿರುವ ಹೊಸ ಯೋಜನೆಗಳೇನು?


ನನ್ನ ಯೋಗ ಮತ್ತು Counselling ಕಲೆಯ ಮೂಲಕ ಇನ್ನು ಹೆಚ್ಚು ಸಮಾಜ ಸೆೇವೆಗೆ ನನ್ನನ್ನು ನಾನು ತೊಡಗಿಸಿ ಕೊಳ್ಳಬೇಕು
೨ ಇನ್ನು ಹೆಚ್ಚು ಓದುವ ಮೂಲಕ ನನ್ನ ಬರಹ ಶಕ್ತಿ ಹೆಚ್ಚಿಸಿ ಕೊಳ್ಳಬೇಕು
ಕಥೆ ಬರೆಯುವ ಕನಸೂ ಇದೆ.
೩ ಸಿತಾರ್ ಮತ್ತು ಚಿತ್ರಕಲೆ ಯ ಅಭ್ಯಾಸ ನಿದಾನವಾಗಿ ಸಾಗುತ್ತಲೆ ಬರುತ್ತಿದೆ.

ಸಂಗಾತಿ-ಕೊನೆಯ ಪ್ರಶ್ನೆ ನಿಮ್ಮ ಸಾದನೆಗಳು ನಿಮಗೆ ತೃಪ್ತಿತಂದಿವೆಯಾ?

ಇಲ್ಲ ಸಾರ್
ಆದರೆ ಅದಕ್ಕಾಗಿ ಶೋಕಿಸುವುದು ಬಿಟ್ಟಿರುವೆ, ಕೆಲವೊಮ್ಮೆ ಅನ್ನಿಸುತ್ತದೆ ಯಾವುದಾದರು ಒಂದೇ ಕಲೆ ಯ ಪ್ರಕಾರ ಇಟ್ಟು ಕೊಳ್ಳ ಬೇಕಿತ್ತು ಸಾಧನೆಗೆ ಎಂದು
ಆದರೆ ನನಗೆ ಎಲ್ಲವೂ ಅತ್ಯಂತ ಪ್ರಿಯ ಅವು ನನ್ನ ಜೀವನ ಸಂಗಾತಿಗಳು

ನಾನು Vipasana Meditation ಅಭ್ಯಾಸ ಮಾಡುತ್ತಿರುವೆ ‘ ಅನಿಚ್ಚ’
ಎನ್ನುವುದು ನನ್ನ ಮಂತ್ರ ಈ ಕ್ಷಣದ ಬದುಕು
ಯನ್ನು ನಂಬುತ್ತೆನೆ,


ಶಾಂತಲಾ ಮಧುರವರ ಚಿತ್ರಗಳು

ಶಾಂತಲಾ ಮಧುರವರ ಪುಸ್ತಕ

************************************************************************

One thought on “ಶಾಂತಲಾ ಮಧು ಬಹುಮುಖ ಪ್ರತಿಭೆ

  1. ಶಾಂತಲಾ ಮದುರವರು ಬಹುಮುಖ ಪ್ರತಿಭೆ ಗಳನ್ನು ಹೊಂದಿರುವ ಆದರ್ಶ ವ್ಯಕ್ತಿ.

Leave a Reply

Back To Top