Category: ಇತರೆ

ಇತರೆ

ಗುರುವಿನ ಗರಿಮೆ

ಲೇಖನ ಗುರುವಿನ ಗರಿಮೆ ನೂತನ ದೋಶೆಟ್ಟಿ ಬಾಲ್ಯದಲ್ಲಿ ಶಿಕ್ಷಣವೆಂದರೆ ಶಿಕ್ಷೆ  ಯೌವನದಲ್ಲಿ ಶಿಕ್ಷಣವೆಂದರೆ ಪರೀಕ್ಷೆಗಳು ಹಾಗೂ ಮೋಜು, ಆನಂತರದಲ್ಲಿ ಅದೇ ಶಿಕ್ಷಣ ವೃತ್ತಿಗೆ ರಹದಾರಿ.ಈ ರೀತಿಯಾಗಿ ಶಿಕ್ಷಣವನ್ನು ಸರಳೀಕರಿಸಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಸರಳ ಸೂತ್ರಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.  ಶಿಕ್ಷಣ= ಶಿಕ್ಷಣ ಸಂಸ್ಥೆ+ ವಿದ್ಯಾರ್ಥಿ ಉದ್ಯೋಗ= ಮಾರ್ಕ್ಸ+ ವಶೀಲಿ ಈ ಎರಡು ಸೂತ್ರಗಳನ್ನು ಇಟ್ಟುಕೊಂಡು ಇಂದಿನ ಶಿಕ್ಷಣದ ಬಗ್ಗೆ ನೋಡೋಣ. ಮೊದಲ ಸೂತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಬಹು ಮುಖ್ಯವಾಗುತ್ತವೆ. ಉನ್ನತ ಶಿಕ್ಷಣದಲ್ಲಿ ಈ […]

ಶಿಶುತನದ ಹದನದೊಳು ಬದುಕಲೆಳಸಿ…

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ… ಲಕ್ಷ್ಮಿ ನಾರಾಯಣಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ […]

ನಾನು,ನನ್ನ ಅನುವಾದವೂ

ಅನುಭವ ನಾನು,ನನ್ನ ಅನುವಾದವೂ ಸಮತಾ ಆರ್. ಒಂದು ದಿನ ಸಂಜೆ ಹೀಗೇ ಸುಮ್ಮನೆ ಕುಳಿತಿರುವಾಗ ಗೆಳತಿ ಸ್ಮಿತಾಳ ಫೋನ್ ಕರೆ ಬಂತು,”ನೋಡೆ,ನನ್ನದೊಂದು ಕವನ ಇಂಗ್ಲಿಷ್ ಗೆ ಅನುವಾದ ಮಾಡಿಸಿದ್ದೇನೆ,ಓದಿ ಹೇಗಿದೆ ಹೇಳು”ಎಂದು ಹೇಳಿ ಹಿಂದೆಯೇ ವಾಟ್ಸಾಪ್ ನಲ್ಲಿ ಕನ್ನಡ ಇಂಗ್ಲಿಷ್ ಎರಡೂ ಪದ್ಯ ಕಳುಹಿಸಿದಳು.ಓದಿದಾಗ ಕನ್ನಡ ಪದ್ಯ ಇಂಗ್ಲಿಷ್  ಅನುವಾದದಲ್ಲಿ ಓದಲು ಚಂದವೆನಿಸಿ  ,ಅವಳಿಗೆ ಕರೆ ಮಾಡಿ ಹೇಳಿದೆ,ಅವಳು ಕೇಳಿ ,ತಮಾಶೆಗೆ,”ಹಾಗಾದರೆ ನನ್ನದೊಂದು ಪದ್ಯ ಕಳಿಸುವೆ, ನೀನೂ ಅನುವಾದಿಸಿ ಖುಷಿ ಪಡು”ಅಂತ ಹೇಳುವುದೇ!! ನಾನೂ ಏನೋ ಒಂದು […]

ಪ್ರೇಕ್ಷಕ ಪರಂಪರೆಯ ಅನ್ನದಾತರು

ಲೇಖನ ಪ್ರೇಕ್ಷಕ ಪರಂಪರೆಯ ಅನ್ನದಾತರು ಮಲ್ಲಿಕಾರ್ಜುನ ಕಡಕೋಳ ಯಶಸ್ವಿ ನಾಟಕವೊಂದರ ಕುರಿತು ಮಾತಾಡುವಾಗ ಎಂಥವರಿಗೂ ಆಧುನಿಕ ರಂಗಭೂಮಿ ಸಂದರ್ಭದಲ್ಲಿ ನಿರ್ದೇಶಕ ಪರಂಪರೆಯತ್ತ ಆದ್ಯಗಮನ. ಹಾಗೇನೆ ವೃತ್ತಿರಂಗಭೂಮಿ ಸಂದರ್ಭದಲ್ಲಿ ನಟನ ಪರಂಪರೆಯದು ಧುತ್ತನೆ ನೆರವಿಗೆ ನಿಲ್ಲುವ ನಿಲುವು. ನಮ್ಮ ಪ್ರೊಸಿನಿಯಮ್ ಥಿಯೇಟರ್ ಪ್ರದರ್ಶನಗಳು ಪ್ರೇಕ್ಷಕರೆಂಬ ಐಕಾನ್ ಗಳ ಮೂಲಕವೇ ಸಾಂಸ್ಕೃತಿಕ ಮೌಲ್ಯ ಗಳಿಸಿವೆಯೆಂಬ ದ್ಯಾಸವೇ ಇರಲ್ಲ. ಅಷ್ಟು ಮಾತ್ರವಲ್ಲದೇ ರಂಗಸಂಸ್ಕೃತಿಯ ಅಭಿವೃದ್ಧಿ ಹಾಗೂ ವಿಕಾಸದ ಸಾಧ್ಯತೆಯ ಕ್ಷಿತಿಜ ವಿಸ್ತಾರಗೊಳ್ಳುವುದೇ ಪ್ರೇಕ್ಷಕ ಪ್ರಭುಗಳಿಂದ. ಇಂತಹ ಮಹತ್ತರ ಸಂಗತಿಗಳನ್ನೇ ನೇಪಥ್ಯಕ್ಕೆ ಜರುಗಿಸುವ […]

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಜೊಸೆಫ್ ಸಿದ್ದಕಟ್ಟೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಗ್ರಾಮದ ಶ್ರೀ ಜೊಸೆಫ್ ಸಿದ್ದಕಟ್ಟೆಯವರು ಮಂಗಳೂರಿನ ಕಾರ್ಮೆಲ್ ಚರ್ಚಿನ ಫಾದರ್ ಆಗಿ ಸೇವೆ ಸಲ್ಲಿಸುತಿದ್ದಾರೆ. ಬಹಳ ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಕೊಂಕಣಿಯ ಯುವ ಕವಿ ಜೊಸಿ ಸಿದ್ದಕಟ್ಟೆ ಎಂಬ ಕಾವ್ಯನಾಮದಿಂದ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ. ಕಿಟಾಳ್ ಪತ್ರಿಕೆಯ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ “ಕಿಟಾಳ್ ಯುವ ಪರಸ್ಕಾರ್” 2011 ರಲ್ಲಿ, ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ್, 2013 […]

ಚಂಸು ಪಾಟೀಲ ಎಂಬ ‘ರೈತಕವಿ’

ಚಂಸು ಪಾಟೀಲ ಎಂಬ ‘ರೈತಕವಿ’ ಚಂಸು ಪಾಟೀಲ ಎಂಬ ‘ಪತ್ರಕರ್ತ’, ‘ರೈತಕವಿ’ಯೂ..!ಮತ್ತವನ ‘ಬೇಸಾಯದ ಕತಿ’ಯೂ.!! ನನ್ನ ಪ್ರೀತಿಯ ಗೆಳೆಯ ಚಂಸು ಪಾಟೀಲ ಮೊನ್ನೆ ಭೇಟಿಯಾಗಿದ್ದ ಹಾವೇರಿಯಲ್ಲಿ. ಚಂಸು ತನ್ನ ಇತ್ತೀಚಿನ ಪುಸ್ತಕವಾದ ‘ಬೇಸಾಯದ ಕತೆ’ ಓದಲು ನನಗೆ ಕೊಟ್ಟ. ನನಗೆ ಈ ‘ಬೇಸಾಯದ ಕತಿ’ ಓದುತ್ತಿದಂತೆ ಇದರ ಬಗೆಗೇನೆ ಒಂದು ಬರಹ ಮಾಡೋಣವೆನಿಸಿ ಒಂದು ಈ ಬರಹವನ್ನು ಮಾಡಿದೆ.ಈ ಚಂಸು ‘ರೈತಕವಿ’ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.ಅಷ್ಟೇ ಅಲ್ಲ ಈ ಚಂಸು ಪತ್ರಕರ್ತನೂ ಹೌದು. ಈ […]

ಕಸಾಪಗೆ ಮಹಿಳಾ ಅಧ್ಯಕ್ಷರು

ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಇವತ್ತಿನ ಚರ್ಚೆಯಲ್ಲಿಅನಿಸಿಕೆ ತಿಳಿಸಿರುವವರು ಸುಧಾ ಆಡುಕಳ ಕ. ಸಾ. ಪ. ಕ್ಕೆ ,ಮಹಿಳಾ ಅಧ್ಯಕ್ಷರು ಯಾಕಿಲ್ಲ!!? ಕ. ಸಾ. ಪ. ಕ್ಕೆ ,       ಮಹಿಳಾ ಅಧ್ಯಕ್ಷರು ಯಾಕಿಲ್ಲ!!? ಸ್ಥಾಪನೆಯಾಗಿ ಶತಮಾನಗಳಾದರೂ ಇನ್ನೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ!?          ಇಂಥದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚರ್ಚೆಯನ್ನಾರಂಭಿಸಿದ ಸಂಗಾತಿ ಪತ್ರಿಕೆಯ ನಿಲುವನ್ನು ತುಂಬು ಹೃದಯದಿಂದ ವಂದಿಸುತ್ತಲೇ, ನನ್ನ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಬಯಸುತ್ತೇನೆ. ಸಮಾನತೆಯೆಂಬುದು ಸುಲಭವಾಗಿ ರೂಢಿಸಿಕೊಳ್ಳುವ ವಿಷಯವಾಗಿದ್ದರೆ ಮಾನವ ಜನಾಂಗ […]

ವಿವಾಹ ವ್ಯವಸ್ಥೆ- ಒಂದು ಚರ್ಚೆ

ಚರ್ಚೆ ವಿವಾಹ ವ್ಯವಸ್ಥೆ- ಒಂದು ಚರ್ಚೆ ಚಂದಕಚರ್ಲ ರಮೇಶ ಬಾಬು ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ. ನಮಗೆ ಕಾಣುವ ಹಾಗೆ ವಿವಾಹಗಳಲ್ಲಿ ಎರಡು ರೀತಿಯ ಪ್ರಭಾಗಗಳು ಕಾಣುತ್ತವೆ. ಗಂಡು ಹೆಣ್ಣು ಪ್ರೀತಿಸಿ ತಾವೇ ನಿರ್ಣಯಿಸಿಕೊಂಡು ಮದುವೆ ಯಾಗುವುದು (ಪ್ರೇಮ ವಿವಾಹ)  ಮತ್ತೊಂದು ಸಾಂಪ್ರದಾಯಿಕವಾಗಿ ನಡೆದು ಬಂದ ರೀತಿಯಲ್ಲಿ ಮನೆಗೆ ದೊಡ್ಡವರು ಹೆಣ್ಣು ನೋಡಿ ನಿಶ್ಚಯಿಸಿ ಮದುವೆ ಮಾಡುವುದು ( ಅರೇಂಜ್ಡ್ ಮ್ಯಾರೇಜ್) […]

ಅಮ್ಮನ ಸೆರಗ ಬಿಡಿಸಿದ ಬೆರಳುಗಳು

ಅಮ್ಮನ ಸೆರಗ ಬಿಡಿಸಿದ ಬೆರಳುಗಳು ಶಿಶುವಿಹಾರ ಮತ್ತು ಅಂಗನವಾಡಿಗಳ ಅಮ್ಮನಂತಹ ಶಿಕ್ಷಕಿಯರಿಗೊಂದು ಸೆಲ್ಯೂಟ್ ಪ್ರಜ್ಞಾ ಮತ್ತಿಹಳ್ಳಿ ಎಳೆಬಿಸಿಲು ಹಾಕಿದ ರಂಗೋಲಿಯ ಚಿತ್ತಾರಗಳು ಅಂಗಳ ತುಂಬಿದ ಹೂಬಳ್ಳಿಗಳೊಂದಿಗೆ ಪೈಪೋಟಿಗಿಳಿದಿದ್ದಾವೆ. ಎಸಳು ಮೊಗ್ಗಿನಂತಹ ಪುಟಾಣಿಗಳ ದಂಡೊಂದು ಗೇಟಿನ ಬಳಿ ಬಂದು ರಾಗವಾಗಿ ಕರೆಯುತ್ತಿದೆ. “ಪುಟ್ಟೂ ಶಾಲೀಗ್ ಬಾ” ನಿದ್ದೆ ಬಿಟ್ಟೇಳದ ಕಣ್ಣಿನ ಮಗುವೊಂದನ್ನು ಅಳುವಿನ ರಾಗಾಲಾಪದ ಹಿನ್ನೆಲೆ ಸಂಗೀತದೊಂದಿಗೆ ಎತ್ತಿಕೊಂಡು ತಂದರು. “ಯಾಕೆ ಅಳೂದ್ಯಾಕೆ? ಜಾಣಲ್ಲ ನೀನು” ಎನ್ನುತ್ತ ಅಮ್ಮನ ಸೆರಗ ಬಿಗಿಯಾಗಿ ಹಿಡಿದುಕೊಂಡ ಬೆರಳುಗಳ ಮೆತ್ತಗೆ ಬಿಡಿಸುತ್ತ ಪುಸಲಾಯಿಸುವ […]

ಭರವಸೆಯ ಹೊರತು ಬೇರೇನೂ ಉಳಿದಿಲ್ಲ’

ಲಹರಿ ಭರವಸೆಯ ಹೊರತು ಬೇರೇನೂ ಉಳಿದಿಲ್ಲ’ ವಸುಂಧರಾ ಕದಲೂರು                             ಕವಚಿ ಹಾಕಿದ್ದ ಖಾಲಿ ಮಂಕರಿಯನ್ನು ಬೋರಲಾಕಿದಂತೆ, ಎಲ್ಲಾ ಖಾಲಿಖಾಲಿಯಾದ ಭಾವ. ಹಾಗೆಂದು ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುತ್ತಿದೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ…     […]

Back To Top