ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ

ಜೊಸೆಫ್ ಸಿದ್ದಕಟ್ಟೆ

ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಗ್ರಾಮದ ಶ್ರೀ ಜೊಸೆಫ್ ಸಿದ್ದಕಟ್ಟೆಯವರು ಮಂಗಳೂರಿನ ಕಾರ್ಮೆಲ್ ಚರ್ಚಿನ ಫಾದರ್ ಆಗಿ ಸೇವೆ ಸಲ್ಲಿಸುತಿದ್ದಾರೆ.

ಬಹಳ ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಕೊಂಕಣಿಯ ಯುವ ಕವಿ ಜೊಸಿ ಸಿದ್ದಕಟ್ಟೆ ಎಂಬ ಕಾವ್ಯನಾಮದಿಂದ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ.

ಕಿಟಾಳ್ ಪತ್ರಿಕೆಯ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ “ಕಿಟಾಳ್ ಯುವ ಪರಸ್ಕಾರ್” 2011 ರಲ್ಲಿ,

ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ್, 2013 ರಲ್ಲಿ ಜೊಸಿ ಸಿದ್ದಕಟ್ಟೆಯವರಿಗೆ ಲಭಿಸಿದೆ.

ಸಾಹಿತ್ಯ ರಚನೆಗಳು:

“ಪಾವ್ಸಾದೋಣು” ಕವಿತಾ ಸಂಕಲನ (2008)

“ಮೋರಾನ್ ಸಾಂಡ್ಲೆಲಿ ಪಾಕಾಂ” ಕವಿತಾ ಸಂಕಲನ (2011)

“ಉಜ್ಯಾ ತುಜ಼ೆ ವೇಂಗೇಂತ್” ಕವಿತಾ ಸಂಕಲನ (2015)

ಯೂಟರ್ನ್ ( ಅಂಕಣ ಬರಹಗಳ ಸಂಕಲನ)

ಕಾಜುಲೊ ( ನ್ಯಾನೋ ಕತೆಗಳ ಸಂಕಲನ)

ಕಲ್ವಾರಿರ್ ರಾಜಿ ಸಂಧಾನ.

ಇವಿಷ್ಟೂ ಪುಸ್ತಕಗಳು ಪ್ರಕಟಗೊಂಡು ಓದುಗ ವಲಯದೊಳಗೆ ಪ್ರಸಿದ್ಧಿಯನ್ನು, ಅಪಾರ ಮನ್ನಣೆಯನ್ನು ಪಡೆದಿವೆ.

ನಾಟಕ ರಚನೆ , ನಿರ್ದೇಶನಗಳಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಫಾ| ಜೊಸಿ ಸಿದ್ದಕಟ್ಟೆಯವರು ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ  ಕೈಯಾಡಿಸಿ ಪರಿಣಿತಿಯನ್ನು ಪಡೆದಿದ್ದಾರೆ. ಉದಾ: ಹೈಕು, ಗಝಲ್, ಇತ್ಯಾದಿ.

ಜೊಸಿ ಸಿದ್ದಕಟ್ಟೆಯವರ ಎರಡು ಕವಿತೆಗಳು ನಿಮ್ಮ ಓದಿಗಾಗಿ:

ಮೊರಾನ್ ಸಾಂಡ್ಲಲಿಂ ಪಾಕಾಂ

ಕುಮೆರಿಂತ್ ಮೊರಾನ್ ಸಾಂಡ್ಲಲಿಂ ಪಾಕಾಂ

ಆರಾವ್ನ್ ಆರಾವ್ನ್ ಹಾಡ್ಲಿಂ

ಥೊಡಿಂ ಧಾಕ್ಟಿಂ, ಕಾಂಯ್ ಥೊಡಿಂ ವ್ಹಡ್ಲಿಂ

ಆನಿ ತಾಣಿಂಚ್ ಆಮ್ಚಿಂ ಮನಾಂ ಫೊಡ್ಲಿಂ

ಬಬ್ಲಾನ್ ಏಕ್ ಪಾಕ್

ಚೊರುನ್ ವೆಲೆಂ ಮಿತ್ರಾಂಕ್ ದಾಕವ್ನ್ ಹರ್ಧೆಂ

ಫುಲಂವ್ಕ್

ಬಯ್ಯಾನ್ ವಿಚಾರಿನಾಸ್ತಾಂ ಲಿಪಯ್ಲೆಂ ಏಕ್

ಬುಕಾಪಾನಾಂ ಇಡ್ಯಾಂತ್ ಪಿಲಾಂ ಕಾಡುಂಕ್

ದಾಟ್ಟುಕೀ ಏಕ್ ಜಾಯ್ ಆಸ್ಲೆಂ

ಚಾಂಪ್ಯಾವನಾಂತ್ ಆಪೊವ್ನ್ ಗುಪ್ತಿಂ ‘ತಾಕಾ’

ದೀವುಂಕ್

ವರದಕ್ಕ ವಿಚಾರಿ ಮ್ಹಣ್ ಮಾಮ್ಮಿನ್ ದಿಲೆಂ

ಕಿಸ್ಣಾಚ್ಯಾ ಮಾತ್ಯಾಕ್ ಖೊವಂವ್ಕ್

ಮಾಗೀರ್ ಉರಲ್ಲಿಂ ಮ್ಹಾಕಾ

ಮೊಡ್ಕುರಿಂ ಆನಿ ರಡ್ಕುರಿಂ ಖಂಯ್ಚ್ಯಾ ಕರ್ಮಾಕ್?

ಕೊಣೆಂ ಫಾರ್ಲಿಂ, ಕೊಣೆಂ ಲಿಪಯ್ಲಿಂ

ತಾಚೆರ್ ಸೊಧ್ ಹಾಂವೆಂ ಚಲಯ್ಲೊ

‘ಹಾಂವೆಂ ಹಾಡಲ್ಲಿಂ ಪಾಕಾಂ ತುಮಿ ಕಶಿಂ

ಚೊರ್ಲಿಂ?’

ಬಯ್ಯಾ ಹಾಸ್ಲೆಂ

‘ಹಾಡಲ್ಲಿಂ ವ್ಹಯ್, ಪುಣ್ ಮೊರಾನ್

ಸಾಂಡ್ಲಲಿಂ!’

ದೊಳ್ಯಾ ಖಾಂಚಿಂತ್ಲಿಂ ದುಕಾಂ ಪುಸುನ್

ಭಾಯ್ರ್ ಯೆತಾನಾ

ಬೋಳ್ ರುಕಾರ್ ಭಿಜಲ್ಲೊ  ಕಾವ್ಳೊ

ಆಂಗ್ ಪಾಪ್ಡುಂಕ್ ಲಾಗ್ಲೊ

ಥೆಂಬೆ ಉಸಾಳ್ಳೆಚ್ ತೊ ಸುಶೆಗಾತ್ ಉಬ್ಲೊ

-ಜೊ. ಸಿ. ಸಿದ್ದಕಟ್ಟೆ

“ನವಿಲು ತೊರೆದ ಗರಿಗಳು”


ಬಯಲಲ್ಲಿ ನವಿಲು ತೊರೆದ ಗರಿಗಳನ್ನು

ಆರಿಸಿ ಆರಿಸಿ ತಂದಿದ್ದೆ.

ಕೆಲವು ಚಿಕ್ಕವು, ಇನ್ನು ಕೆಲವು ದೊಡ್ಡವು,

ಆಮೇಲೆ .. ಅವೇ ನಮ್ಮ ಮನಗಳನ್ನು ಒಡೆದವು.

ಬಬ್ಲು ಒಂದು ಕದ್ದೊಯ್ದ

ಅವನ ಗೆಳೆಯರಿಗೆ ತೋರಿಸಿ ಎದೆ ಉಬ್ಬಿಸಲು,

ಅಕ್ಕ ಕೇಳದೆ ಎತ್ತಿಟ್ಟಳು

ಪುಸ್ತಕದ ನಡುವೆ ಮುಚ್ಚಿಟ್ಟು ಮರಿ ಮಾಡಲು,

ಅಣ್ಣನಿಗೂ ಒಂದು ಗರಿ ಬೇಕಿತ್ತು

ಸಂಪಿಗೆ ವನದ ಮರೆಯಲ್ಲಿ “ಅವಳಿಗೆ” ಕೊಡಲು,

ವರದಕ್ಕ ಕೇಳಿದರೆಂದು ಅಮ್ಮ ಕೊಟ್ಟಳು

ಅವರ ಕೃಷ್ಣನ ತಲೆಗೆ ಸಿಕ್ಕಿಸಲು,

ಇನ್ನು ನನಗೆ ಉಳಿದದ್ದು ಬರೀ

ಹರಿದವು ಮತ್ತು ಮುರಿದವು …. ಯಾವ ಕರ್ಮಕ್ಕೆ??

ಯಾರ‍್ಯಾರೋ  ಮುಚ್ಚಿಟ್ಟರು, ಎತ್ತಿಟ್ಟರು, ಕದ್ದೊಯ್ದರು..

ಜೋರಾಗಿ ಗದರಿಸಿದೆ ಕೋಪ ತಡೆಯದೆ

“ನಾನು ತಂದ ಗರಿಗಳವು.. ಹೇಗೆ ಕದ್ದಿರಿ ನೀವು?”

ಅಕ್ಕ ನಗುತ್ತ…

“ನೀನು ತಂದಿದ್ದು ಹೌದು.. ಆದರೂ… ನವಿಲು ತಾನೇ ತೊರೆದಿದ್ದು..?”

ಕಣ್ಣಂಚಿನ ದುಃಖವನ್ನು ಒರೆಸಿ

ಹೊರಗೆ ಬಂದಾಗ

ಬೋಳು ಮರದಲ್ಲಿ ಕೂತ ಕಾಗೆಯೊಂದು

ಪಟಪಟನೆ ರೆಕ್ಕೆ ಬಡಿಯುತ್ತ

ಹನಿಗಳುದುರಿಸಿ ಹಾರಿಹೋಯಿತು…. ನಿರಾಳವಾಗಿ.


ಶೀಲಾ ಭಂಡಾರ್ಕರ್.

ರಾಜಿನಾಮೊ

ಪಿಕ್ಕಾಸ್ ಆನಿ ಖೊರೆಂ

ನವ್ಯಾನ್ ಡ್ಯೂಟೆಕ್

ಹಾಜಿರ್ ಜಾಲಿಂ,

ಫುಲಾ ತೊಟಾಂತ್.

ಡ್ಯೂಟೆಕ್ ಲಾಗ್‍ಲ್ಲ್ಯಾ ಪಿಕ್ಕಾಸಾನ್

ಮೋವ್ ಆಸ್ಲೆಕಡೆ ಖೊಂಡುಂಕ್

ಸುರು ಕೆಲೆಂ

ಖೊಂಡ್ಚ್ಯಾ ಹುಮೆದಿನ್

ಆಡ್ ಮೆಳ್‍ಲ್ಲೊ ಉದ್ಕಾ ಪೈಪ್‍ಯೀ

ಉಕ್ಲುನ್ ಘಾಲೊ

ದುಸ್ರೆದಿಸಾ ‘ಚತ್ರಾಯೆಸಂಗಿಂ’

ಪಿಕ್ಕಾಸಾಕ್ ಮುರೊ ಖೊಂಡುಂಕ್

‘ಡ್ಯೂಟಿ’ ಘಾಲಿ,

ಎಕೆಕ್ ಘಾಸಾಕೀ

ದಾಂತಾಥಾವ್ನ್ ಕಿಟಾಳಾಂ ಉಸ್ಳೊನ್

ಹಿಂಸಾ ಜಾತಾಲಿ,

ತಿತ್ಲ್ಯಾಕ್‍ಚ್ ಪಿಕ್ಕಾಸಾನ್

‘ರಾಜಿನಾಮೊ’ ದಿಲೊ.

ಪಿಕ್ಕಾಸಾನ್ ಖೊಂಡುನ್ ಗೆಲ್ಲೆಕಡೆ ಖೊರ್‍ಯಾಕ್

ಡ್ಯೂಟಿ ಲಾಗ್ಲಿ

ಮಾತಿ ವೊಡ್ಚಿ, ಹದಾ ಕರ್‍ಚಿ

ಮ್ಹೆಳೆಂ ಶೆಣ್ ವೊಡುನ್ ಘಾಲ್ಚೆಂ..

ತಿಕಾಯ್ ಹಿಂಸಾ ಜಾತಾಲಿ

ತೆಂ ವಾತಾವರಣ್‍ಚ್

ನಾಕಾ ಆಸ್ಲೆಂ..

ತರೀ,

ಆಪ್ಣಾಕುಶಿಕ್‍ಚ್ ಯೇವ್ನ್ ಪಡ್ಚ್ಯಾ ಮೆಳ್ಯಾಮದೆಂಯ್

ಖೊರೆಂ ರಾವ್ಲೆಂ,

‘ಗುಲೊಬಾಚ್ಯಾ

ಪರ್ಮಳಾಕ್ ಲಾಲೆವ್ನ್’


ರಾಜಿನಾಮೆ

ಹಾರೆ ಮತ್ತು ಗುದ್ದಲಿಗಳೆರಡೂ

ಹೊಸದಾಗಿ ಡ್ಯೂಟಿಗೆ ಸೇರಿದವು

ಹೂವಿನ ತೋಟದೊಳಗೆ.

ಡ್ಯೂಟಿಯಲ್ಲಿ ತೊಡಗಿದ ಹಾರೆಯು

ಮೆತ್ತಗಿರುವಲ್ಲಿ ಅಗೆಯಲು

ಆರಂಭಿಸಿತು.

ಅಗೆಯುವ ಹುಮ್ಮಸ್ಸಿನಲ್ಲಿ

ಅಡ್ಡ ಬಂದ ನೀರಿನ ಪೈಪನ್ನೂ

ಬಗೆದು ಹಾಕಿತು.

ಮರುದಿನ ಮತ್ತೆ ಹಾರೆಗೆ

ಎಚ್ಚರದಿಂದ ಕೆಲಸಮಾಡಲು

ಎಚ್ಚರಿಸಿ ಕಲ್ಲಿರುವ ಕಡೆ

ಅಗೆಯುವ ಡ್ಯೂಟಿ ಬಿತ್ತು.

ಒಂದೊಂದು ತುತ್ತಿಗೊಂದೊಂದು

ಕಿಡಿಗಳು ಹಲ್ಲಿನಿಂದ ಸಿಡಿಯುವಾಗ

ಭಾರೀ ಹಿಂಸೆ ಅನಿಸಿತು.

ಅಷ್ಟಕ್ಕೇ ಹಾರೆಯು ರಾಜಿನಾಮೆ ಕೊಟ್ಟಿತು.

ಹಾರೆ ಅಗೆದು ಹೋಗಿದ್ದ ಕಡೆ

ಈಗ ಗುದ್ದಲಿಯ ಡ್ಯೂಟಿ ಬಂತು.

ಮಣ್ಣು ಅಗೆಯುವುದು

ಹದಗೊಳಿಸುವುದು, ಸೆಗಣಿ ಹಾಕಿ

ಮಟ್ಟ ಮಾಡುವುದು.

ಅದಕ್ಕೂ ಹಿಂಸೆಯೇ ಇದು.

ಈ ವಾತಾವರಣವೇ

ಬೇಡ ಅನಿಸುತಿತ್ತು.

ಆದರೂ..

ತನ್ನ ಬುಡಕ್ಕೆ ಬಂದು ಅಂಟುವ

ಗಲೀಜಿನ ನಡುವೆಯೂ

ಗುದ್ದಲಿ ಅಲ್ಲಿಯೇ ನಿಂತಿತ್ತು..

“ಗುಲಾಬಿಯ ಪರಿಮಳದ

ಹಂಬಲದಿಂದ”


ಕನ್ನಡಕ್ಕೆ: ಶೀಲಾ ಭಂಡಾರ್ಕರ್.

———————————————————

ಫೋಟೊ ಆಲ್ಬಂ

*****************************************************************

ಚಿತ್ರ-ಬರಹ

ಶೀಲಾ ಭಂಡಾರ್ಕರ್

Leave a Reply

Back To Top