ಪ್ರಸ್ತುತ
ವಿಶ್ವಾಸದ್ರೋಹಿ ನೇಪಾಳ ಸಂಗಮೇಶ ಎನ್ ಜವಾದಿ ವಿಶ್ವಾಸದ್ರೋಹಿ ನೇಪಾಳದಲ್ಲಿ ಭಯಂಕರ ಪ್ರಕೃತಿ ವಿಕೋಪ ಆದಾಗ ಇದರ ಸಂಕಷ್ಟಕ್ಕೆ ಕೈಜೋಡಿಸಲು ಮೊದಲು ಬಂದಿದ್ದು ಮತ್ತು ನೆರವಾಗಿದ್ದು ಭಾರತ ದೇಶ. ನೇಪಾಳಕ್ಕೆ ಭಾರತದ ಸಹಾಯ, ಸಹಕಾರ ಬೇಕು ಜೊತೆಗೆ ಆರ್ಥಿಕ ಸಹಾಯ ಸಹ ಬೇಕೇ ಬೇಕು, ಇವರ ಯುವಕ ಯುವತಿಯರಿಗೆ ದುಡಿಯಲು ಭಾರತ ಬೇಕು.ಇವರ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಭಾರತ ದೇಶ ಬೇಕು.ಭಾರತದಲ್ಲಿ ಸೀಗುವ ಪ್ರತಿಯೊಂದು ವಸ್ತುಗಳ ಸಹಾಯದ ಅಗತ್ಯತೆ ನೇಪಾಳ ಜನರಿಗೆ ಬೇಕು ಹಾಗೂ ಭಾರತದ ಸಹಾಯ ಇವರಿಗೆ […]
ಲಹರಿ
ಆತ್ಮಸಾಕ್ಷಿಯಾಗಿ… ಸುರೇಶ ಎನ್ ಶಿಕಾರಿಪುರ. ಸತ್ತ ವ್ಯಕ್ತಿಯನ್ನು ಶ್ರೀಗಂಧ, ಒಣ ಕೊಬ್ಬರಿ, ತುಳಸಿಯನ್ನು ರಾಶಿ ಒಟ್ಟಿ, ಮೇಲೆ ತುಪ್ಪವ ಸುರಿದು ಸುಟ್ಟರೆ ಅದು ಕಡೆಯ ಪಕ್ಷ ಹೆಣದ ವಾಸನೆಯನ್ನು ಮರೆ ಮಾಚಬಹುದು ಇಲ್ಲವೇ ಸತ್ತ ವ್ಯಕ್ತಿಯ ಶ್ರೀಮಂತಿಕೆಯ ಪ್ರದರ್ಶನ ವಾಗಬಹುದು ಅಷ್ಟೆ. ಅದು ಗುಣದ ಮಾನದಂಡವಲ್ಲ. ಅದರಿಂದ ಮೃತ ವ್ಯಕ್ತಿಯ ಗುಣ ಮಾತ್ರ ಸುಡುವುದಿಲ್ಲ. ಅದು ಒಳ್ಳೆಯ ಗುಣವಾಗಿದ್ದರೂ ಕೆಟ್ಟ ಗುಣವಾಗಿದ್ದರೂ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ… ಸದ್ಗುಣವಾಗಿದ್ದರೆ ಜನತೆಯ ನಾಲಗೆಯ ಮೇಲೆ ಸ್ತುತಿಯಾಗಿಯೂ ದುರ್ಗುಣವಾಗಿದ್ದರೆ ಅದೇ […]
ಪ್ರಸ್ತುತ
ಕ್ವಾರಂಟೈನ್ ರಜೆ ಯಲ್ಲಿ ಆತ್ಮಾವಲೋಕನ.. ವಿದ್ಯಾಶ್ರೀ. ಎಸ್.ಅಡೂರ್ ಹಿಂದೆಂದೂ ಕಂಡು, ಕೇಳಿ ಅರಿಯದ…..ಮುಂದೆಂದೂರ ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು. ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ.ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು ಸುಣ್ಣವಾಗಿದೆ. ವೈಜ್ಞಾನಿಕವಾಗಿ,… ವೈಚಾರಿಕವಾಗಿ….ಯೋಚಿಸುವಾಗ ಅನೇಕ ತರ್ಕಬದ್ಧ ವಿಚಾರಗಳನ್ನು ಪುಟಗಟ್ಟಲೆ ಮಂಡಿಸಬಹುದು..ಚರ್ಚಿಸಬಹುದು. ನಾನು..ನೀನು ಎಂದು ಅನೇಕ ತಾಕಲಾಟ-ಮೇಲಾಟ ಗಳನ್ನು ಮಾಡಬಹುದು. ದೊಂಬಿ-ಗಲಾಟೆಗಳನ್ನು ಎಬ್ಬಿಸಬಹುದು. […]
ಪ್ರಸ್ತುತ
ಮರುವಲಸೆಯ ಮಹಾಪರ್ವಕ್ಕೆ ಪರಿಹಾರ ಯಾರೂ ಊಹಿಸಿರದ ಪ್ರಮಾಣದಲ್ಲಿ ಕಾರ್ಮಿಕರ ಮರುವಲಸೆ ಪ್ರಾರಂಭವಾಗಿದೆ. ತಮ್ಮ ಊರಿನಲ್ಲಿ ದುಡಿಮೆಯ ಅವಕಾಶವಿಲ್ಲದೆ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ವಲಸೆ ಬಂದವರು ಕೊರೊನಾ ಲಾಕ್ಡೌನ್ನಿಂದಾಗಿ ಕಂಗಾಲಾಗಿದ್ದಾರೆ. ಪೂರ್ವಾಪರ ಯೋಚಿಸದೆ, ಶತ್ರು ದೇಶದ ಮೇಲೆ ದಾಳಿ ಮಾಡುವ ರೀತಿಯಲ್ಲಿ ದಿಢೀರ್ ಎಂದು ಘೋಷಣೆಯಾದ ಲಾಕ್-ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೊರಟರು. ಕೊರೊನಾ ಭಯಕ್ಕಿಂತ ಹಸಿವಿನ ಭಯ ಅವರನ್ನು ಕಾಡುತ್ತಿತ್ತು. ಪೋಲೀಸರ ಲಾಠಿಗೆ ಹೆದರಿ, ನಗರ ತೊರೆಯಲಾರದವರು ಈಗ ಅವಕಾಶ […]
ಟಂಕಾ
ಟಂಕಾ ತೇಜಾವತಿ.ಹೆಚ್.ಡಿ. ಟಂಕಾ ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರಬೇಕು. 2,4,5 ನೇ ಸಾಲುಗಳಲ್ಲಿ ಏಳೇಳು ಅಕ್ಷರಗಳನ್ನು ಹೊಂದಿರಬೇಕು. ಇದು ಒಟ್ಟು 31 ಅಕ್ಷರ […]
ಅನಿಸಿಕೆ
ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ ರಾಮಸ್ವಾಮಿ ಡಿ.ಎಸ್. ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ . . . . ‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಎಣಿಸಿದಷ್ಟು ಸುಲಭವಲ್ಲವಲ್ಲವೆಂಬುದು ಎಲ್ಲ ಬರಹಗಾರರಿಗೂ ಅರಿವಾಗುವುದೇ ಅವರು ಇಂಥ ಪ್ರಶ್ನೆಗೆ ಉತ್ತರ ಕೊಡಲು ಕೂತಾಗ ಮಾತ್ರ! ಹೇಗೆ ಬರೆದರೆ ತನ್ನ ಬರಹಗಳಿಗೂ ಪತ್ರಿಕೆಗಳಲ್ಲಿ ಒಂದಿಷ್ಟು ಜಾಗ ಸಿಕ್ಕಬಹುದೆನ್ನುವ ಯೋಚನೆಯಲ್ಲೇ ಬರೆಯುತ್ತಿದ್ದ ದಿನಗಳು ಹೋಗಿ ಅನ್ನಿಸಿದ್ದೆಲ್ಲವನ್ನೂ ಫೇಸ್ಬುಕ್ಕಲ್ಲೋ ವಾಟ್ಸಪ್ಪಿನ ಗುಂಪಲ್ಲೋ ಬರೆದು ಬಿಸಾಕುತ್ತಿರುವ ಈ […]
ಪ್ರಸ್ತುತ
ಬಸವಣ್ಣನವರು ಉಮೇಶ ಮುನವಳ್ಳಿ ಶಿಕ್ಷಿತರಲ್ಲಿ ಅನೇಕರು ನಾವು ಬಸವಣ್ಣನವರನ್ನು ಕೇವಲ ಸಮಾಜ ಸುಧಾರಕ, ಕ್ರಾಂತಿಕಾರಿ, ದಾರ್ಶನಿಕ ಇದೇ ಪರಿಧಿಗೆ ಸೀಮಿತಗೊಳಿಸಿದ್ದೇವೆ. ಇದರಾಚೆ ಅವನನ್ನು ಕಂಡುಕೊಳ್ಳುವ ಒಳಗಣ್ಣಿನ ಕೊರತೆ ನಮ್ಮಲ್ಲಿ ಎದ್ದುಕಾಣುತ್ತದೆ. ಅದೇ ನಮ್ಮ ಗ್ರಾಮೀಣ ಜನಕ್ಕೆ ಬಸವಣ್ಣ ಒಬ್ಬ ದೇವ, ದೈವ, ಕೇಳಿದ್ದನ್ನು ಕೊಡುವ ಕಲ್ಪವೃಕ್ಷ! ಕೇವಲ ಶಬ್ದಗಳಲ್ಲಿ ಹಿಡಿದಿಡಲಾಗದ ‘ಅಗಮ್ಯ, ಅಗೋಚರ, ಅಪ್ರತಿಮ’ ವ್ಯಕ್ತಿತ್ವ ಅವನದು. ಅವನ ಆ ಘನ ವ್ಯಕ್ತಿತ್ವವನ್ನು ಒಳಗೊಳ್ಳದಷ್ಟು ಚಿಕ್ಕವಾದವೇ ನಮ್ಮ ಮನಸ್ಸಿನ ಪಾತ್ರೆಗಳು? ದೋಷ ನಮ್ಮ ಪಾತ್ರೆಯಲ್ಲಿದೆ. ಮೇಲಾಗಿ ಅವನನ್ನು […]
ಪ್ರಸ್ತುತ
ಮಾತಾಡುವ ಮರಗಳು ಮೋಹನ್ ಗೌಡ ಹೆಗ್ರೆ ಬೆಳವಣಿಗೆ ಮತ್ತು ಬದಲಾವಣೆ ಪ್ರಕೃತಿ ನಿಯಮಗಳಲ್ಲೊಂದು. ಈ ಬೆಳವಣಿಗೆ ಮತ್ತು ಬದಲಾವಣೆಯನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಕಂಡುಕೊಳ್ಳಬಹುದಾಗಿದೆ. ಈ ಪ್ರಕ್ರಿಯೆ ಕೇವಲ ಮನುಷ್ಯನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮನುಷ್ಯನೊಡಗೂಡಿ ಬದುಕುವ ಚರಾಚರ ಜೀವರಾಶಿಗಳು ಬೆಳವಣಿಗೆ ಮತ್ತು ಬದಲಾವಣೆಯ ಪ್ರಕ್ರಿಯೆಯಲ್ಲಿ ಒಳಗೊಳ್ಳಲೇಬೇಕು. ಪಿಳಿಪಿಳಿ ಕಣ್ಣುಬಿಟ್ಟು ತಾಯಿಯ ತೊಡೆ ಮೇಲೆ ಮಲಗಿದ ಮಗು ಬೆಳವಣಿಗೆಯಾಗಿ, ಮಗುವಿನ ತೊದಲು ಮಾತಿಗೆ ಕೈತಟ್ಟಿ ಕುಣಿದ ಮುದಿ ಜೀವಗಳು ಮಗು ಬೆಳವಣಿಗೆಯಾದ ನಂತರದಲ್ಲಿ ಅಂತಹದೇ ಮಗ್ದ ಪ್ರೇಮದ ನುಡಿಗಳ ಕೇಳಿರಬಹುದು […]
ಸಂತಾಪ
ಕನ್ನಡದ ಪ್ರಮುಖ ಕಥೆಗಾರ್ತಿ ಶಾಂತಾದೇವಿ ಕಣವಿಯವರು ಕನ್ನಡ ನಾಡಿನ ಪ್ರಮುಖ ಕಥೆಗಾರ್ತಿ,ಶುದ್ಧ ಕನ್ನಡ ಜನಪದ ಹೃದಯ ಶ್ರೀಮಂತಿಕೆಯ ಸಹಕಾರ ಮೂರ್ತಿ, ಲೇಖಕಿ,ಹಿರಿಯ ಕವಿ, ವಾತ್ಸಲ್ಯಮಯಿ, ಸಮರಸವೇ ಜೀವನ ಎಂದು ಬಾಳು ಬದುಕಿದ ಕವಯಿತ್ರಿ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ ಸಾಕ್ಷಿಕರಿಸಿದ್ದ ಸಾಹಿತಿ ಶಾಂತಾದೇವಿ ಕಣವಿಯವರು.ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿಯವರು ಬಂಧುಗಳೆ. ಜನನ/ಜೀವನ : […]
ಪ್ರಸ್ತುತ
ಸಾಂಸ್ಕೃತಿಕ ಲೋಕದ ದಲ್ಲಾಳಿಗಳು. ಮಲ್ಲಿಕಾರ್ಜುನ ಕಡಕೋಳ ಬೆಂಗಳೂರು, ಒಂದಾನೊಂದು ಕಾಲಕ್ಕೆ ಗುಲಾಬಿ ನಗರ ಎಂದು ಪ್ರಸಿದ್ದವಾಗಿತ್ತು. ಗುಲಾಬಿಯ ಆರಂಭದ ಅಕ್ಷರ “ಗು” ಎಂಬುದೆಲ್ಲೋ, ಎಂದೋ ಉದುರಿ ಬಿದ್ದು ಅದು ಲಾಬಿ ನಗರವಾಗಿ ಬಹಳೇ ವರ್ಷಗಳು ಉರುಳುತ್ತಿವೆ. ಆಗಿನ ಕಾಲದಲ್ಲಿ “ಲಾಬಿ” ಅನ್ನಲಾಗದಿದ್ದರೂ ನಿತ್ಯ ಜೀವನಾಗತ್ಯದ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಬಲ್ಲವರ ಮೂಲಕ ಹೇಳಿಸಿ ಈಡೇರಿಸಿಕೊಳ್ಳುವ ತುರ್ತುಅಗತ್ಯದ ಶಿಫಾರಸು ಅವಾಗಿರ್ತಿದ್ದವು. ಹಳ್ಳಿಗಳಲ್ಲಿ ಚೆಂದಗೆ ಹಾರ್ಮೋನಿಯಂ ನುಡಿಸಿ, ಸಂಗೀತ, ನಾಟಕ ಕಲಿಸುವ ಮಾಸ್ತರ, ಬಯಲಾಟ, ಕೋಲಾಟ ಆಡುವ ಹಿರೀಕ ಕಲಾವಿದರು, […]