Category: ಅಂಕಣ

ಅಂಕಣ

ಅಂಕಣ ಸಂಗಾತಿ ತೊರೆಯ ಹರಿವು ‘ಸಾವಿಗೊಂದು ಘನತೆ ಕೊಡುವ…’    ಅಪ್ಪು ಎಂಬ ಮನದ ಮಗನ ಸಾವಿಗೆ ಕರ್ನಾಟಕ ಇನ್ನಿಲ್ಲದಂತೆ ಕೊರಗುತ್ತಿದೆ. ‘ಈ ಸಾವು ನ್ಯಾಯವೇ ?’ ಎಂದು ಪ್ರಶ್ನಿಸುತ್ತಿದೆ. ‘ಸಾಯೋ ವಯಸ್ಸಾ ಇದು? ವಿಧಿಗೆ ಕುರುಡೇ? ಯಮನ ಕಿಂಕರರಿಗೆ ಕರುಣೆ ಇಲ್ಲವೇ?’ ಎಂದೆಲ್ಲಾ ನೂರಾರು ಪ್ರಶ್ನೆಗಳನ್ನು ಎಲ್ಲರ ಮನಸ್ಸು ಜಗ್ಗಿ ಕೇಳುತ್ತಿದೆ. ಇದಂತೂ ಈ ಕಾಲಮಾನದಲ್ಲಿನ ಎಲ್ಲಾ ವಯೋಮಾನದವರ ಮನದಲ್ಲಿ ಉಳಿದು ಹೋದ ಅಹಿತಕರ ಘಟನೆ. ಯಾರೂ ಊಹಿಸದಿದ್ದ ಆಘಾತ!    ‘ಹುಟ್ಟಿದ ಮೇಲೆ ಸಾವು […]

ಅಂಕಣ ಸಂಗಾತಿ ಗಜಲ್ ಲೋಕ ಸಾಲಿಯವರ ಗಜಲ್ ಉದ್ಯಾನವನ… ನಮಸ್ಕಾರ… ಎಂದಿನಂತೆ ಇಂದೂ ಸಹ ನಾಡಿನ ಖ್ಯಾತ ಗಜಲ್ ಕಾರರೊಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಬಂದಿದ್ದೇನೆ. ಓದಲು ತಾವು ಕಾತುರರಾಗಿದ್ದೀರೆಂದು ಬಲ್ಲೆ. ಸಮಯವನ್ನು ಹಾಳು ಮಾಡದೆ, ನೇರವಾಗಿ ವಿಷಯಕ್ಕೆ ಬರುತ್ತೇನೆ. “ಪ್ರೇಮಿಯ ಕಾರಣ ಇತರ ಎಲ್ಲ ಕಾರಣಗಳಿಂದ ಪ್ರತ್ಯೇಕವಾಗಿದೆ ಪ್ರೀತಿಯು ದೇವರ ರಹಸ್ಯಗಳ ಖಗೋಳ“                                    –ರೂಮಿ              ಉರ್ದು ತುಂಬಾ ಕಾವ್ಯಾತ್ಮಕ ಭಾವದ ಭಾಷೆ.‌ ‘ಕಾವ್ಯಾತ್ಮಕ ಭಾಷೆ’ ಎಂದರೆ ಆ ಭಾಷೆಯೂ ಶಬ್ಧಗಳಿಗಿರುವ ಅರ್ಥಬಾಹುಳ್ಯ ಎಂದರ್ಥ. […]

ಅಂಕಣ ಸಂಗಾತಿ ತೊರೆಯ ಹರಿವು ಭಾವಶುದ್ಧ ಇರದವರಲ್ಲಿ….             ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವ ಶುದ್ಭವಿಲ್ಲದವರಲ್ಲಿ ಧೂಪನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ     – ಅಕ್ಕ ಮಹಾದೇವಿ.   ತನು ಮನ ಕರಗದವರು, ಹದುಳಿಗರಲ್ಲದವರು, ಅರಿವು ಕಣ್ತೆರೆಯದವರು, ಭಾವಶುದ್ಧ ಇಲ್ಲದವರು, ಪರಿಣಾಮಿಗಳಲ್ಲದವರು, […]

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—48 ಮತ್ತೆ ಮರುದನಿಗೊಂಡ ಅಸ್ಪೃಶ್ಯತೆ ನೋವುಗಳು…… ನನ್ನ ವಿವಾಹವೇನೋಸಹಜ ಪ್ರಕ್ರಿಯೆಯಂತೆ ನಿರಾತಂಕವಾಗಿ ನಡೆಯಿತು. ಹಲವರು ಶುಭಹಾರೈಕೆಗಳಿಂದ ನಮ್ಮ ನಿಲುವುಗಳನ್ನು ಬೆಂಬಲಿಸಿದರು. ಕೆಲವರು ನೇರ ನನ್ನ ಕಿವಿಗೂ ಕೇಳಿಸುವಂತೆ ಟೀಕಾಸ್ತ್ರಗಳ ಬಳುವಳಿಯನ್ನೂ ಕೊಡಮಾಡಿದರು. ಬಹುತೇಕ ನಮ್ಮ ಜಾತಿಯ ಬಂಧುಗಳಿಗೆ ನಾನು ಅಂತರ್ಜಾತಿಯ ವಿವಾಹ ಮಾಡಿಕೊಂಡದ್ದು ಸಮಂಜಸವೆನಿಸಲಿಲ್ಲ. “ಉತ್ತಮ ಶಿಕ್ಷಣ ಪಡೆದು ಒಂದು ಒಳ್ಳೆಯ ಉದ್ಯೋಗದಲ್ಲಿ ಇದ್ದವನು ಸ್ವಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಂಡು ಸ್ವಜಾತಿಯ ಹುಡುಗಿಯೊಬ್ಬಳಿಗೆ ಬದುಕು ನೀಡಬಹುದಿತ್ತು. ಓದಿದ ಮತ್ತು ಉತ್ತಮ […]

ಗಜಲ್ ಎಂಬುದು ಆತ್ಮದ ಪಿಸುಮಾತು. ಹೃದಯದ ಮಾತುಗಳು ಜೀವಕಾರುಣ್ಯದಿಂದ ಸ್ನಿಗ್ಧವಾಗಿರುತ್ತವೆ. ಸಕಲ ಜೀವಿಗಳೊಂದಿಗಿನ ಪ್ರೇಮಭಾವದಿಂದ ಮಾಧುರ್ಯವನ್ನು ಪಡೆಯುತ್ತವೆ

ಅಂಕಣ ಬರಹ

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

ಅಂಕಣ ಬರಹ ತೊರೆಯ ಹರಿವು ಅಮ್ಮನಾಗಿ ಬರೆಯುವಾಗ ನಾನೊಬ್ಬ ಹೊರಗೆ ದುಡಿಯಲು ಹೋಗುವ ಆಧುನಿಕ ಕಾಲದ ಅಮ್ಮ. ವೃತ್ತಿಯ ಜೊತೆಗೆ ಕೆಲವು ಪ್ರವೃತ್ತಿಗಳಿವೆ. ಅದರಲ್ಲೂ ಓದು – ಬರವಣಿಗೆ ಎಂಬುದು ನನ್ನ ಪ್ರೀತಿಯ ಹವ್ಯಾಸ. ಆದರೆ, ಈ ಹವ್ಯಾಸಿ ಬರವಣಿಗೆ ಅನ್ನುವುದು ಯಾವ ಸಮೀಕ್ಷೆ ಅಥವಾ ಅಧ್ಯಯನಗಳಿಗೆ ಒಳಗಾಗದ ಅನೂಹ್ಯ ಘಟನೆ ಎನ್ನುವುದು ನನ್ನ ಅಭಿಮತ. ಏಕೆಂದರೆ, ಬರವಣಿಗೆಗೆ ಒಂದು ಭಾವ ಅಗತ್ಯ. ಆದರೆ, ಭಾವ ಸ್ಫುರಿಸಿದಾಗ ಬರೆದು ಬಿಡಬಹುದಾದ ಯಾವ ಅನುಕೂಲಗಳೂ ವೃತ್ತಿಪರ ಬರಹಗಾರರಲ್ಲದ ನನ್ನಂಥವರಿಗೆ […]

ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—47 ಆತ್ಮಾನುಸಂಧಾನ ನಾಲ್ಕಾರು ಬಂಧುಗಳ ನಡುವೆ ವಿವಾಹ ಬಂಧನಕ್ಕೆ….. : ಬದುಕು ಅನೇಕ ವಿಧದ ಸಂಬಂಧಗಳ ಬೆಸುಗೆ. ನಮ್ಮ ಜೀವಿತದ ಕಾಲಾವಧಿಯ ಉದ್ದಕ್ಕೂ ಈ ಸಂಬಂಧಗಳ ಬೆಸುಗೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಅಂತಹ ಸಂಬಂಧಗಳಲ್ಲಿ ಪ್ರೇಮ ಸಂಬಂಧವೆಂಬುದು ಒಂದು ಅಪರೂಪದ, ವಿಶಿಷ್ಟವಾದ ಭಾವ ಬಂಧ. ಇದು ಗಂಡ-ಹೆಂಡತಿಯ ಸಾಮಾಜಿಕ ಅಂತಸ್ತುಗಳ ರೂಪದಲ್ಲಿ ಸಮಾಜದ ಮುಂದುವರಿಕೆಗೂ ನೆರವಾಗುತ್ತದೆ. ‘ಪ್ರೇಮ’ ಎಂಬುದು ಮುಂಗಡ ಬುಕಿಂಗ್ ಮಾಡುವಂತಹುದಲ್ಲ. ಅದು ಹೊತ್ತು ಗೊತ್ತಿಲ್ಲದೆ ತೀರ ಆಕಸ್ಮಿಕವಾಗಿ ಘಟಿಸುವಂತಹದು. ಅದಕ್ಕೇ ಇರಬಹುದೇನೋ […]

“ಬಕ್ಕಳರ ಗಝಲ್ ಗಳು” ಎಂಬ ಸಂಕಲನ ಪ್ರಕಟಿಸುವುದಕ್ಕಿಂತಲೂ ಮುಂಚೆ ‘ಮಣ್ಣ ನೆನಪಿನ ಮೇಲೆ’ ಎಂಬ ಕವನ ಸಂಕಲನದಲ್ಲಿಯೂ ಬಕ್ಕಳ ಅವರು ತಮ್ಮ ಕೆಲವು ಗಜಲ್ ಗಳನ್ನು ಪ್ರಕಟಿಸಿದ್ದಾರೆ.

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.
ಸಮಾಜ ಕಾರ್ಯಕರ್ತೆ “ಡಾರ್ಲಿಂಗ್ ಆಫ್ ದಿ ಆರ್ಮಿ” ಮೇರಿ ಕ್ಲಬ್‍ವಾಲಾ ಜಾಧವ್(1909-1975

Back To Top