“ತುಂಡು ಭೂಮಿ ಮತ್ತು ಬುದ್ಧ”
ಶ್ಯಾಮೇಗೌಡರು ಮನೆಯ ಚಾವಡಿ ತಲುಪಿದಾಗ ಅವರ ದೊಡ್ಡ ಮೊಮ್ಮಗ ಶಾಲೆಯ ಪಠ್ಯಪುಸ್ತಕ ಹಿಡಿದುಕೊಂಡು ಬುದ್ಧನ ಬೋಧನೆಗಳನ್ನು ಜೋರಾಗಿ ಉರುಹೊಡೆಯುತ್ತಿದ್ದ- “ಇತರರನ್ನು ಕ್ಷಮಿಸಬೇಕಾದದ್ದು ಅವರು ಕ್ಷಮೆಗೆ ಅರ್ಹರೆಂಬ ಕಾರಣಕ್ಕಾಗಿ ಅಲ್ಲ; ನೀವು ಶಾಂತಿಗೆ ಅರ್ಹರೆಂಬ ಕಾರಣಕ್ಕಾಗಿ…..”
ಸಭೆಯಿಂದ ಹೊರಹೋಗುತ್ತಿದ್ದ ಹೆಂಗಸರಿಬ್ಬರು ” ಗಂಡ, ಮನೆ,ಮಕ್ಕಳು, ಸಂಸಾರ ಅಂತ ಕಟ್ಟಿಕೊಂಡು ನಮ್ಮ ಹಾಗೆ ಏಗುವವರಿಗೆ ಕಥೆಕವಿತೆ ಬರೆಯುವ ಪುರುಸೊತ್ತಾದ್ರೂ ಎಲ್ಲಿರುತ್ತೆ? ಬಣ್ಣದ ಬೀಸಣಿಕೆಯಂತೆ ಬಳುಕುತ್ತಾ, ಅತ್ತೆ ಮಾವನಿಗೆ ಮನೆ ಚಾಕರಿ ಹಚ್ಚಿ ಝಂ ಅಂತ ಓಡಾಡಿಕೊಂಡಿರೋವ್ರು ಒಂದಲ್ಲ ನೂರು ಪುಸ್ತಕ ಬರೀತಾರೆ…
ಚೇರ್ಮನ್ ಸೋಮಯ್ಯ
ಯಾರು ಏನೇ ಹೇಳಲಿ ಸೋಮಯ್ಯ ಪಕ್ಷಾತೀತ ರಾಜಕಾರಣಿ. ಅವನಿಗೆ ಪಕ್ಷರಾಜಕಾರಣದಲ್ಲಿ ನಂಬಿಕೆ ಇಲ್ಲ. ಯಾವುದೋ ಪಕ್ಷದವರು ಸೇರಿಸಿಕೊಂಡರೆ ನಂಬಿಕೆ ಬರುತ್ತಿತ್ತೋ ಏನೋ. ಪಾಪ ಇವನದೇನು ತಪ್ಪು. ಇವನ ಮೇಲೆ ವಿಶ್ವಾಸ ಇಡುವ ಅರ್ಹತೆ ಯಾವ ಪಕ್ಷದವರಿಗಿದೆ? ಮತ್ತೊಂದು, ಇವನಿಂದ ಆಗುವ ಲಾಭವಾದರೂ ಏನು?
ರಾಧೆಗೆ
ಆದರೆ ಹೃದಯದ ಈ ಕುದಿತದೊಂದಿಗೆ ಏಕಾಂಗಿಯಾಗಿರುವ ನನಗೆ ಈ ಒತ್ತಡವನ್ನು ಹಂಚಿಕೊಳ್ಳಬಲ್ಲ ಸಖಿ, ಸಂಗಾತಿ ನೀನಲ್ಲದೇ ಇನ್ನಾರಾಗಲು ಸಾಧ್ಯ ?
ಹೊಸ ಮಾಡಲ್
ಕಥೆ ಹೊಸ ಮಾಡಲ್ ಗುರುರಾಜ ಶಾಸ್ತ್ರಿ ಅದು ಗಿರಿಜೆಯ ಮದುವೆ ಸಂಭ್ರಮ. ಮದುವೆಮನೆಯಲ್ಲಂತು ಎಲ್ಲರದೂ ಓಡಾಟವೋ ಓಡಾಟ. ಏನೋ ಬಹಳ ಕೆಲಸವಿದೆಯೆಂಬಂತೆ ಮುಖ್ಯ ಆವರಣದ ಆ ಕಡೆಯಿಂದ ಈಕಡೆಯವರೆಗೂ ಓಡಾಡುತ್ತಿರುವ ರೇಷ್ಮೆ ಸೀರೆ ಉಟ್ಟ ಮದುವೆಯಾಗದ ಹೆಣ್ಣುಮಕ್ಕಳು; ಮದುವೆಯಾಗಿದ್ದರೇನಂತೆ, ನಾವೂ ಇನ್ನೂ ಚಿಕ್ಕ ವಯಸ್ಸಿನವರೇ ಎಂದು ಭಾವಿಸುತ್ತಾ ಮದುವೆಯಾಗದ ಹುಡುಗಿಯರಿಗೆ ಸವಾಲೆಂಬಂತೆ ಓಡಾಡುತ್ತಿರುವ ಯುವ ಗೃಹಿಣಿಯರು; ಅಲ್ಲಲ್ಲಿ ಕಣ್ಣಾಡಿಸುತ್ತಾ ಅವಳು ನೋಡು ಪಾದರಸದಂತೆ, ಇವಳು ನೋಡು, ತಾನೇ ರೂಪವತಿಯೆಂಬ ಅಹಂಕಾರ, ಇನ್ನು ಅವಳು ಮೂಷಂಡಿ ತರಹ ಮೂಲೆಯಲ್ಲಿ […]
ಅಪ್ಸರೆಯ ಮೂರನೆ ಮದುವೆ!
ಕೆಲವರು ಅನೇಕ ಅಂತಸ್ತುಗಳನ್ನು ಭೂದೇವಿಯ ಒಡಲೊಳಗೂ ಕೊರೆದು ನಿರ್ಮಿಸುವ ನಕ್ಷೆಗಳನ್ನು ಸರ್ಕಾರದ ಒಪ್ಪಿಗೆಗೆ ಕೊಟ್ಟರೂ, ಅವು ಅನುಮೋದನೆ ಆಗಲಿಲ್ಲ. ಹಾಗಾಗಿದ್ದರೆ ಭೂಮಿಯ ಗತಿ! ಸ್ವಾರ್ಥ ಬುದ್ಧಿಯ, ದುರಂತ ಮನದ ಖದೀಮರು, ಮನುಷ್ಯನ ಅಸ್ತಿತ್ವ ಭೂಮಿಯಲ್ಲಿ ನಶಿಸುವವರೆಗೂ ಇದ್ದೇ ಇರುವರು, ನಿದರ್ಶನಕ್ಕಾದರು!
ಮಗು ಎದ್ದು ಅತ್ತರೆ…ʼ ಒಂದು ಕ್ಷಣ ಕಾಲು ತಡೆಯಿತು… ಮರುಕ್ಷಣವೇ ಓ ಅಲ್ಲಿ ಶ್ರೀಧರ ಆಗಲೇ ಕಾಯುತ್ತಾ ತುಂಬಾ ಹೊತ್ತಾಗಿರಬಹುದು ಎನ್ನಿಸಿ ಸರಸರ ಹೆಜ್ಜೆ ಹಾಕಿದಳು
ಆಡುತ್ತಿದ್ದ ಮಗುವನ್ನೆತ್ತಿಕೊಂಡು ಎಂದಿನಂತೆ ಬಾಲ್ಕನಿಗೆ ನಡೆದು ತಿನ್ನಿಸತೊಡಗಿದಳು. ʻಇದೇ ನಾನು ಇವ್ನಿಗೆ ತಿನ್ನಿಸ್ತಿರೋ ಕಡೇ ಊಟವಾಗಿದ್ರೆ….ʼ ಅನ್ನಿಸಿ ಮೈಯೆಲ್ಲಾ ನಡುಗಿತು. ಯಾವುದರ ಅರಿವೂ ಇಲ್ಲದ ಪುಟ್ಟ ರಾಮ ಅಮ್ಮನ ಮುಖ ನೋಡಿ ನಕ್ಕಿತು. ಹಾಗೆಯೇ ಮಗುವನ್ನಪ್ಪಿಕೊಂಡವಳ ಕಣ್ಣಲ್ಲಿ ತಡೆಯಿಲ್ಲದೆ ಕಣ್ಣೀರು ಸುರಿಯತೊಡಗಿತು.
ಸುಂದರಮ್ಮನೂ ಸುಮ್ಮನಿರಲಾಗದೆ “ವರ ಕೊಟ್ಟ ಹಾಗೆ ಕೊಡ್ತಿದೀಯ. ಇನ್ನೇನು ಗುನುಗು ಅವಳಿಗೆ. ನೀನು ಹೀಗೆ ತಲೆಮೇಲೆ ಕೂರಿಸ್ಕೊಂಡಿದ್ದಕ್ಕೇ ಅವ್ಳು ಹೀಗೆ ಹದಗೆಟ್ಟಿದ್ದು” ಸಿಡುಕಿದರು. ನಿಧಾನವಾಗಿ ಎದ್ದ ಪದ್ಮ ಏನೂ ಮಾತಾಡದೆ ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿದಳು.
… ಆದರೂ… ಯೋಚನೆಗಳ ಗೊಂದಲದಲ್ಲಿ ಬಿದ್ದಿರುವಾಗಲೇ ಅವಳ ಜೀವನಕ್ಕೆ ಈ ಹೊಸ ತಿರುವೂ ಸಿಕ್ಕಿತ್ತು… ಇದು ಎಲ್ಲಿಗೆ ಹೋಗಿ ಕೊನೆ ಮುಟ್ಟತ್ತೋ… ಮೂರ‍್ನಾಲ್ಕು ದಿನಗಳಾದರೂ ಮತ್ತೆ ವೆಂಕಟೇಶಯ್ಯನವರು ಈ ಬಗ್ಗೆ ಏನೂ ಮಾತಾಡಿಲ್ಲ. ಇದೂ ಒಂದು ತರಹ ಹೆದರಿಕೆ ಹುಟ್ಟಿಸಿ, ಈ ಮೌನ ಯಾವುದಕ್ಕೆ ಪೀಠಿಕೆಯೋ ಎನ್ನಿಸಿಬಿಟ್ಟಿತು…