Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಓ ಸಖಿ! ನಿರ್ಮಲಾ ಆರ್. ಹೊಲದಾಗಿನ ಹಸಿರು ಎಷ್ಟು ಚೆಂದ ಓ ಸಖಿ ಪುರ್ರೆಂದು ಹಾರುವ ಹಕ್ಕಿ ತಿನ್ನುತ್ತಿತ್ತು ಮೆಕ್ಕೆ ತೆನೆಯ ಕುಕ್ಕಿ ಕುಕ್ಕಿ ಒಂದು ಬದಿ ಕರಿ ಎಳ್ಳಿನ ರಾಶಿ ಬಣ್ಣದ ಹೂಗಳು ನಲಿಯುತ್ತಿದ್ದವು ಕಂಪ ಸೂಸಿ ಬದುವಿನ ಹೂ ಬಳ್ಳಿ ಸ್ವಾಗತ ಮಾಡುತಿತ್ತು ತನ್ನ ತಾ ಹಾಸಿ ಪ್ರಕೃತಿಯ ಬಣ್ಣಿಸಲು ಪದಗಳಿಲ್ಲ ಸಖಿ ತಂಗಾಳಿಯು ಹಾದು ಹೋಗುತ್ತಿತ್ತು ನಮ್ಮ ಸೋಕಿ ರಾಶೀಯಲ್ಲಿನ ಎಳ್ಳು ತಿನ್ನುತ್ತಿದ್ದೆವು ಮುಕ್ಕಿ ಮುಕ್ಕಿ ಸಂಜೆಗೆ ವಿದಾಯ ಹೇಳಲು ಮೂಡುತ್ತಿತ್ತು ಆಗಸದಲಿ […]

ಕಾವ್ಯಯಾನ

ಅಪ್ಪ ಅಂದರೆ ಆಕಾಶ ದೇವಿ ಬಳಗಾನೂರ ಅಪ್ಪ ಅಂದರೆ ಆಕಾಶ ಅಪ್ಪ ಅಂದ್ರೆ ಅಗೋಚರ ಪ್ರೀತಿಯ ಕಡಲು ನನ್ನಮ್ಮನಂತ ಕರುಣೆಯ ಮಡಿಲು ಮಗಳ ಸಾಧನೆಯು ಪ್ರಜ್ವಲಿಸಲು ಕಾರಣವಾದ ತಿಳಿಮುಗಿಲು ಮಗಳಿಗಾಗಿ ದಣಿದನದೆಷ್ಟೋ ಹಗಲು ಅವಳಿಗಾಗಿಯೇ ಕಾಯ್ದಿರಿಸಿದನು ತನ್ನ ಇರುಳು ಅಪ್ಪ ಅಂದ್ರೆ ಮಗಳ ಪಾಲಿನ ನಾಯಕ ಅವಳ ಬದುಕ ದೋಣಿಯ ನಿಜ ನಾವಿಕ ಮಗಳ ಮುಗ್ದ ನಗುವಿಗಾಗಿ ಕಾದ ಅಮಾಯಕ ಅವಳ ಬದುಕ ರೂಪಣೆಯ ನಿಜ ಮಾಲಿಕ ಅಪ್ಪ ಅಂದ್ರೆ ಮಗಳಿಗಾಗಿಯೇ ಬದುಕೋ ಜೀವ ಅವಳ ಖುಷಿಯಲ್ಲೆ […]

ಕಾವ್ಯಯಾನ

ಕವಿತೆ ಯಶು ಬೆಳ್ತಂಗಡಿ ಮೊದಲು ಶಿಶುವಾಗಿ ಭುವಿ ಸ್ಪರ್ಶಿಸಿ,, ಮೊದಲ ಉಸಿರಾಟ ನಡೆಸಿ,, ಮೊದಲ ಕಣ್ಣೀರ ಸುರಿಸಿ,, ಮೊದಮೊದಲು ಕಂಡ ತೊದಲು ಮಾತಿನ ಕನಸು… ಮೊದಲ ತರಗತಿಗೆ,, ಮೊದಲ ಹೆಜ್ಜೆಯಿಟ್ಟಾಗ,, ಭಯದಲ್ಲೇ ಕಂಡ ನೂರೊಂದು ಕನಸು.. ಮೊದಲ ಬಾರಿ ರಾಷ್ಟ್ರನಾಯಕರ ಕಥೆ ಕೇಳಿದಾಗ,, ಮೊದಲು ಸ್ವಾತಂತ್ರ್ಯದ ಘಟನೆ ಓದಿದಾಗ,, ಅರಳಿದ ದೇಶಪ್ರೇಮದ ಕನಸು… ಮೊದಲು ಚಲನಚಿತ್ರದಿ ಮಧ್ಯಪಾನ ನೋಡಿದಾಗ,, ಮೊದಮೊದಲು ಗಲಾಟೆ ದೊಂಬಿಗಳ ನೋಡಿದಾಗ,, ಅವರಂತೆ ನಾಯಕನಾಗಬೇಕೆಂದು ಕಂಡ ಹುಚ್ಚು ಕನಸು.. ಅವನ ಸುಂದರ ಕಣ್ಣು ಕಂಡಾಗ,, […]

ಕಾವ್ಯಯಾನ

ಸಂಕ್ರಾಂತಿ ಅನಿಲ್ ಕರೋಲಿ ಸಂಕ್ರಾಂತಿ ಸಡಗರ ಪ್ರೀತಿಯ ಉಡುಗೊರೆ ಹಳ್ಳಿ ಹಳ್ಳಿಯು ಹಬ್ಬವೂ ..ಹಬ್ಬವೊ.. ರೈತರ ಪ್ರತಿ ಮನೆಯಲ್ಲೂ ಸಂಭ್ರಮ ಸಾಗರ ದನ-ಕರುಗಳು ಹೊಸ ಬಗೆಯ ಶೃಂಗಾರ ರೈತರು ಸಂಕ್ರಾತಿಯಲ್ಲಿ ಬೆಳೆದ ಬೆಳಯ ನಿರೀಕ್ಷೆಯಲ್ಲಿ ಎಲ್ಲರೂ ಏಳ್ಳು-ಬೆಲ್ಲ ಹಂಚಿ ಖುಷಿಯ ಹಂಚುವರು ಹಳ್ಳಿಗಳಲ್ಲಿ ಇದೊಂದು ವಿಶೇಷ ಹಬ್ಬವು ಜಗಳ ಮನಸ್ಥಾಪ ಮಾಡಿಕೊಂಡವರನ್ನು ಒಬ್ಬರನ್ನೊಬ್ಬರು ರಾಜಿಮಾಡಿಸುವುದು ನಮ್ಮಿ ಹಳ್ಳಿ ಹಬ್ಬ ಪ್ರೀತಿಯು ಇಲ್ಲಿ ಲಭ್ಯ ಖುಷಿಯಲೇ ನಾವು ತೇಲುವೆವು ಇಂದು ========

ಕಾವ್ಯಯಾನ

ಸಾಕು ಬಿಡು ಸಖಿ ಬಸವರಾಜ ಜಿ ಸಂಕನಗೌಡರ ಸೂರ್ಯ ಚಂದ್ರರಿಬ್ಬರನೂ ಮಧುಶಾಲೆಯಲೇ ಕಾಣುತ್ತಿರುವೆ ಸಾಕು ಬಿಡು ಸಖಿ . ನನ್ನೆದೆಯ ನೋವ ನೀ ಸುರಿಸೋ ಕಣ್ಣೀರು ತಣ್ಣಗಾಗಿಸಲಾರದು ಸಾಕು ಬಿಡು ಸಖಿ ಊರ ಮುಂದಿನ ಅಗಸಿ ಕಲ್ಲು ನೀ ಹೋದದ್ದಕ್ಕೆ ಸಾಕ್ಷಿ ಕೊಟ್ಟಿದೆ. ಮತ್ತೇಕೆ ಕನಸಲಿ ಕಾಡುವೆ ಸಾಕು ಬಿಡು ಸಖಿ. ನೀ ಬರುವ ಹಾದಿಗೆ ಬೇಲಿ ಬೆಳೆದಿದೆ. ನಾನೀಗ ಮಧುಶಾಲೆಯ ಖಾಯಂ ಗಿರಾಕಿ ಕಾಡಬೇಡ ಸಾಕು ಬಿಡು ಸಖಿ ಡೋಲಿಯಲಿ ಮಲಗಿದ ಹೆಣದ ಮೇಲೆ ನೀ […]

ಕಾವ್ಯಯಾನ

ಮಾತು-2 ಡಾ.ಗೋವಿಂದ ಹೆಗಡೆ ಮಾತು ಮಾತನಾಡುವಾಗ ಹೀಗೇನಾದರೂ ಕಿಟಕಿ ತೆರೆದುಬಿಟ್ಟಿದ್ದರೆ ಎಂಥ ಅನಾಹುತವಾಗುತ್ತಿತ್ತು ತೂರಿ ಹೋಗಿ ಕೆಳಗೆ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ಚಿಣ್ಣರ ರಾಕೆಟ್ ಮೇಲೆ ಬಿದ್ದು ಆ ಕಡೆ ಈ ಕಡೆ ಹಾರಿ ಬಿದ್ದು ಹಾರಿ ಬಿದ್ದು ಹೇಗೆ ಇಳಿಯಬಹುದಿತ್ತು ಕುರ್ಚಿ ಹಾಕಿ ಮುಗುಮ್ಮಾಗಿ ಕೂತು ಈ ಮಾಗಿಯ ಇಳಿ ಹೊತ್ತು ತೆರೆದು ಕೂತು ಮಾತಿನ ಲೋಕ ಎಂಥ ವಿಚಿತ್ರ ಈ ಮಾತಿನದು ಮಾತು ಮಾತಾಗಲು ಕಂಠ ನಾಲಗೆ ತುಟಿ ಅಷ್ಟೇ ಸಾಲದು ಕಿವಿಯೂ ಬೇಕು […]

ಕಾವ್ಯಯಾನ

ಕವಿತೆಯ ಘನತೆ ಬಿ.ಎಸ್.ಶ್ರೀನಿವಾಸ್ ಕವಿತೆಗೊಂದು ಘನತೆಯಿದೆ ಭಾವಗಳ ತೂಕವಿದೆ ಬಂಧಗಳ ಭಾರವಿದೆ ಹೃದಯದ ಪಿಸುದನಿಯಿದೆ ಕವಿತೆಗೊಂದು ಘನತೆಯಿದೆ ಕಾಣದ ಕಂಬನಿಯಿದೆ ಕೇಳಿರದಾ ರಾಗವಿದೆ ರವಿಕಾಣದ ರಸತುಂಬಿದೆ ಕವಿತೆಗೊಂದು ಘನತೆಯಿದೆ ಮೈಮರೆಸುವ ಶ್ರುತಿಲಯವಿದೆ ನೊಂದ ಮನವ ಸಂತೈಸುವ ಸಾತ್ವಿಕ ಶಕ್ತಿಯಿದೆ ಕವಿತೆಗೊಂದು ಘನತೆಯಿದೆ ಹರಿವ ನದಿಯ ಬಳುಕಿದೆ ಗರಿಗೆದರಿ ನರ್ತಿಸುವ ನವಿಲಿನ ಲಾಸ್ಯವಿದೆ ಕವಿತೆಗೊಂದು ಘನತೆಯಿದೆ ಭಕ್ತಿಯಿದೆ ವಿರಕ್ತಿಯಿದೆ ತಿಮಿರವನ್ನು ತೊಲಗಿಸುವ ಸೃಜನ ಸ್ವಯಂಪ್ರಭೆಯಿದೆ

ಕಾವ್ಯಯಾನ

ಮಾತು ಡಾ.ಗೋವಿಂದ ಹೆಗಡೆ ಮಾತು ಏನನ್ನಾದರೂ ಹೇಳುತ್ತಲೇ ಇರಬೇಕೆಂದು ಯಾರಾದರೂ ಏಕೆ ಒತ್ತಾಯಿಸಬೇಕು ಪಟ್ಟು ಹಿಡಿಯಬೇಕು ಮಾತು ಮಾತ್ರವಲ್ಲ ಮೌನ ಕೂಡ ಮಾತಿಗೂ ಇದ್ದೀತು ಬೇಸರ ಆಯಾಸ ಅಥವಾ ಬರೀ ಆಕಳಿಕೆ ಮತ್ತು ಮೌನ ಹೊದ್ದು ಉಸ್ಸೆನ್ನುವ ಕೇವಲ ಬಯಕೆ ಈ ಮಾತು ಕೂಡ ಎಷ್ಟು ಅಸಹಾಯ! ಕುಬ್ಜ ಹೆಳವ ಮತ್ತು ಚೂರು ಕಿವುಡ ಮತ್ತು ಉಬ್ಬಸ ಪಡುತ್ತ ಅದು ಹೇಳುವುದೇನನ್ನು? ಬಿಡು, ಕವಿತೆಯೆಂದರೆ ಬರಿ ಗೋಳಲ್ಲ ಎಲ್ಲ ಅಸಂಗತತೆಯಲ್ಲಿ ಏನೋ ಸೂತ್ರ ಅಥವಾ ವಿಪರೀತವೂ ಸರಿಯೇನು […]

ಕಾವ್ಯಯಾನ

ಸೃಷ್ಟಿಯ ಮಿಲನ. ರಾಮಾಂಜಿನಯ್ಯ ವಿ ಕಾಡ ಕಗ್ಗತ್ತಲು ಆವರಿಸಿ ಮುತ್ತಿರಲು ಜೇನ್ ಪರಾಗ ರಿಂಗಣ! ಚೆಲುವ ಮಧು ಮೃದಂಗ, ಅಧರಗಳ ಮಧುರ ಗಾನ. ಚಂದಿರನವೆ ಬಡಿತ, ಪಕಳೆಗಳ ಚಿಟಪಟ ಕೇಸರಗಳ ಆಗಮನದಿ ಸೃಷ್ಟಿಯ ಮಿಲನ.. ದುಂಬಿ ಮದರಂಗಿ ಚಲನ.. ಪೇಳ್,ಹೆಣ್ಣೆ ನಾಭಿಯಲಿ ನೆತ್ತರು ಬಿಸಿ ಎದೆಯಲ್ಲಿ ಸಮುದ್ರದಲೆ ಭೋರ್ಗರೆವ ನಾದ ತನ್ಮಯ ವಿನೋದ.. ಕರಗುವ ಮುನ್ನ ಕರಗಿಸೆನ್ನ; ಪೆಣ್ಣೆ, ಅರಳುವ ಹೂವೆ.. ಮದನದ ವದನಕ್ಕಿದು ತನು ತರುಲತೆ ಗಾನ. ಸ್ಪರ್ಶಿಸುವ ನೆಲೆಯಲ್ಲಿ ಪರಾಗಗಳ ಸೆಲೆ! ಸುಳಿಯಿರದ ಸಮುದ್ರದಿ […]

ಕಾವ್ಯಯಾನ

ನಾನಲ್ಲ ದೇವದಾಸಿ ನಿರ್ಮಲಾ ನನ್ನ ಬದುಕಿದು ನನ್ನ ಸ್ವತ್ತು ಬಲವಂತವಾಗಿ ಕಟ್ಟಿಸಿದಿರಿ ನನಗೆ ಮುತ್ತು ಬೆಲೆ ಇಲ್ಲವೇ ನನ್ನಾವ ಆಸೆಗೆ ಬಲಿಯಾದೆ ಕಾಮಪಿಶಾಚಿಗಳ ಲಾಲಸೆಗೆ ಭಗವಂತನ ಸೇವೆಗೆಂದೇ ಮಾಡಿದಿರಿ ನನ್ನ ದಾಸಿ ಆದರೆ ವೇಶ್ಯೆಯೆಂದೆ ನಾನಾದೆ ಹೆಸರುವಾಸಿ ಶಾಸ್ತ್ರ ಹೇಳಿತು ದೇವನಿಗೆ ಸಂಗೀತ, ನೃತ್ಯ ಪ್ರಿಯ ದೇವನ ಹೆಸರಲಿ ಸಮಾಜ ಮಾಡಿತು ನನ್ನ ಬದುಕು ಹೇಯ ಮಾಡಿದಿರಿ ನನಗೆ ಗೆಜ್ಜೆ ಪೂಜೆ ನನ್ನಾವ ತಪ್ಪಿಗಾಗಿ ಈ ಸಜೆ ನಾನಾಗ ಬೇಕಿತ್ತಲ್ಲವೇ ಸಂಸಾರಿ ಅದೇಕೆ ಮಾಡಿದಿರಿ ನನ್ನ ವ್ಯಭಿಚಾರಿ […]

Back To Top