ಅರಳದ ಮೊಗ್ಗು

ಸೌಜನ್ಯ ದತ್ತರಾಜ

ಜಗದ ಜಾತ್ರೆಯೊಳಿದ್ದೂ
ನೀನು ಲೋಕಕಂಟದ ಜಂಗಮ
ನಿನ್ನಾಚೆ ಈಚೆ ತಿರುತಿರುಗಿಯೂ
ಪಲ್ಲವಿಸುತ್ತಿಲ್ಲ ನಿನ್ನೊಳಗೆ ಪ್ರೀತಿ ಪ್ರೇಮ

ಆಗುವುದಾದರೆ ಆಗಬೇಕಿತ್ತು
ಇಷ್ಟರೊಳಗೆ ನಮ್ಮಿಬ್ಬರ ಸಂಗಮ
ಕಠೋರತೆಯನೇ ಕವಚವಾಗಿಸಿಕೊಂಡಿರುವ
ನಿನಗೆ ಬೇಕಿಲ್ಲ ಪ್ರೇಮ ಮೋಹದ ಸಂಭ್ರಮ

ಕಾದೆ ನಾನು ಶಬರಿಯಂತೆ
ಅದೆಷ್ಟು ಕಾಲ ನಿನ್ನೊಂದು ಕಾಣ್ಕೆಗಾಗಿ
ಕಾಣದಾದೆಯಲ್ಲ ನೀನು
ನನ್ನ ಪ್ರೇಮವ ಕಣ್ಣಿದ್ದೂ ಕುರುಡನಾಗಿ

ಅರಳದಿರುವ ಮೊಗ್ಗಿಗಾಗಿ
ಕಾಯಬೇಕು ತಾನೇ ಯಾವ ಹಿಗ್ಗಿಗಾಗಿ
ನಡೆಯುತಿರುವೆವು ಇಬ್ಬರೂ ರಸ್ತೆಯತ್ತ ಇತ್ತ
ಕೈಗೆಟುಕದ ಅದಾವುದೋ ಗುರಿಯೆಡೆಗೆ ನೋಡುತ್ತಾ

**********************

12 thoughts on “ಅರಳದ ಮೊಗ್ಗು

Leave a Reply

Back To Top