ಬಿದಲೋಟಿ ರಂಗನಾಥ್
ಅಲೆಯುವ ಕನಸುಗಳನ್ನು
ಹಿಡಿದು ಮಾತಾಡಿಸಿದೆ
ಮಣ್ಣಲ್ಲಿ ಮಣ್ಣಾದ ಅವುಗಳ ಜೀವ
ನೋಯ್ಯುತಿತ್ತು
ನೆಲದ ಪದರಗಳ್ನು ಬಿಡಿಸುತ್ತಾ
ದಾರಿಯಿಲ್ಲದ ದಾರಿಯ ಮೇಲೆ ನಡೆದು
ಉಸಿರಾಡಿದ ಜೀವಗಳನ್ನು ಮುಟ್ಟಿ
ನೆವೆಯುವ ಕಣ್ಣಂಚಿನ ದೀಪಗಳು
ಮರುಗುತ್ತಿದ್ದವು ಮಣ್ಣಲ್ಲಿ ಬೆರೆತು
ಬೆತ್ತಲಾಗದ ಕಳಂಕಿತ ಮನಸನು ಸುಡಲು
ಅರೆಬೆಂದ ಜೀವ ಕೊರಗುತ್ತಿದೆ
ಅಲೆಯುತ ನಿರಾಕಾರವಾಗಿ..
ನೆಲಕೆ ಬೆನ್ನಾಕಿ.
ಮಾಡಿದ ದೋಕಕೆ
ಬೆವರಿದ ಮೆದುಳು
ಕರಗುತ್ತಿದೆ ಕೊರಳನು ತಬ್ಬಿ
ಅವನೋ ಮರೆಯಲಾಗದ ನೆನಪು
ಮಣ್ಣಿನಲಿ ಮೂಡಿದ ಕಣ್ಣು
ನೋಡುತಿದೆ…
ಕಾಣದ ಕಡಲಿನ ಗೆರೆಯ ಕಡೆ…
ಜೀವ ತುಂಬಿದ ಚಿತ್ರ
ಎದೆಯಲಿ ಅರಳುತ್ತಲೇ ಇದೆ.
**************
ದಾರಿಯಿಲ್ಲದ ದಾರಿಯ ಮೇಲೆ ನಡೆದು…
ಚೆಂದ ಸಾಲು
ಧನ್ಯವಾದಗಳು ನಾಗರಾಜ್ ಸರ್