ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಡಾ.ಅಜಿತ್ ಹರೀಶಿ

ಮೂಲ ಆಲಯದಿಂದ ಕೈಲಾಸ ಪಟದಾಟ
ಲೆತ್ತ ಬೀರಿ ಅದರತ್ತ ನೋಟ
ಬುಡದಲ್ಲಿ ಬಿಸಿಯಿಲ್ಲ
ಮೇಲೇರಿದಂತೆ ಕಾವೇರಿ ಪರದಾಟ

ಹಿಂದೆ ಮುಂದೆ, ನೂಕುನುಗ್ಗಲು
ಆರು ಬಿದ್ದರೆ ಇನ್ನೊಂದು ಬಾರಿ
ಸಿಗುವುದು ಆಡಲು
ಮೊದಮೊದಲು ಸಣ್ಣ ಏಣಿ
ಹಾವು, ಆತಂಕವಿಲ್ಲ

ಕಳೆ ಕಟ್ಟಿದೆ ಕೊನೆಯಲ್ಲಿ
ನುಣುಪಾದ ದಂತದ ದಾಳದಲ್ಲಿ
ಮೂರು ಬಿದ್ದರೆ ಹಾವು ಕಚ್ಚಿ
ನಿಶ್ಚಲವಾಗುವುದು ನಿಶ್ಚಿತ ನೆಲಕಚ್ಚಿ
ಕೈಲಾಸ ಕಾಣಬಹುದು ಬಿದ್ದರೆ ಆರು
ಶಿವ ಪಾರ್ವತಿ ಕಾಣುತಿಹರು

ಒಂದು ಐದು ಬೀಳುತಿಹುದು ನೆತ್ತದಲಿ
ಅತ್ತ ಇತ್ತ ಎತ್ತ ಎಂತ ಮಾಡಿದರೂ ಕೈಲಾಸ ಪ್ರಾಪ್ತಿಯಿಲ್ಲ
ಆಟ ಬಿಟ್ಟು ಏಳುವಂತಿಲ್ಲ
ಆರಕ್ಕೇರದ ಮೂರಕ್ಕಿಳಿಯಿದ ಬದುಕಿನಂತೆ

ಲತ್ತದಲಿ ಮೂಡಿತು ಮೂರರ ಮುಖವಂತೂ
ಮತ್ತೆ ಅಲ್ಲಿಂದ ಶುರು ಹಾವು ಏಣಿ ಆಟ

ಆರು ಬಿದ್ದ ಕ್ಷಣ ಅರಿವಾಯಿತು
ಇನ್ನು ಪಟವ ಪಟಪಟನೆ ಸುತ್ತಿ
ಹೊರಡಬೇಕು.

*****

About The Author

3 thoughts on “ಆರು ಮೂರು”

Leave a Reply

You cannot copy content of this page

Scroll to Top