ವಸುಂದರಾ ಕದಲೂರು
ಕೃಷ್ಣನೆ ಕೊಳಲು ನುಡಿಸಿದ ಇರುಳು
ನಾನೂ ಆದೇನು ರಾಧೆ
ಶ್ಯಾಮನೆ ನಿಜದಿ ನನ್ನೊಡನಿರಲು
ನನಗೆ ಬೇರೇನು ಬಾಧೆ
ಇನಿಯನ ಇಂಪಿನ ಕೊರಳಿನ ಕರೆಯ
ಒಲವಿನ ಚೆಲುವಿನ ಇನಿದನಿ ಸವಿಯ
ಮರೆಯಲಿ ಹೇಗೆ ನಾ ಮಾಧವನಾ
ತೊರೆಯಲಿ ಹೇಗೆ ನಾ ಗಿರಿಧರನಾ
ಮಾಧವ ರಾಘವ ಗಿರಿಧರ ಗೋಪಾಲ
ಹಲಬಗೆ ಹೆಸರಲಿ ಜಪಿಸಿದೆ ಸಂಕುಲ
ಬಾರಾ ಮಾಧವ ಮುರಳಿ ಲೋಲಾ
ತೋರಾ ಶ್ಯಾಮಲ ಅಪಾರ ಲೀಲಾ
ಹುಡುಕಲಿ ಎಲ್ಲಿ ಆ ಚೆಲುವನನು
ಸಹಿಸಲಿ ಹೇಗೆ ನಾ ವಿರಹವನು
ಮೋಹಿಸದಿರಲೆಂತು ಮಾಧವನನು
ತೊರೆಯುವುದೆಂತು ಘನವಂತನನು
ಕೃಷ್ಣನೆ ಕೊಳಲು ನುಡಿಸಿದ ಇರುಳು
ನಾನೂ ಆದೇನು ರಾಧೆ
ಶ್ಯಾಮನೆ ನಿಜದಿ ನನ್ನೊಡನಿರಲು
ನನಗೆ ಬೇರೇನು ಬಾಧೆ
***********
Chendide kavite Vasundhara_Smitha
ಧನ್ಯವಾದಗಳು ಸ್ಮಿತಾ …
Simple, beautiful imagination…
ಧನ್ಯವಾದಗಳು Thank you .