ಸುರಿಯುತಿಹ ಮೋಡಗಳು

ಡಾ. ಪ್ರತಿಭಾ

ಸುರಿಯುತಿರೆ
ಜಿಟಿ,ಜಿಟಿ ಮಳೆಹನಿಗಳು
ನೋಡಿರಿ ಹರಡಿದೆ ಘಮ
ಸುತ್ತಮೂತ್ತಲೂ.

ಅವಳು ಅದೇ ಭೂತಾಯಿ
ನಿಂತಿಹಳು,ಹಸಿರು ಸೀರೆ
ರವಿಕೆಯ ತೊಟ್ಟು.

ಸುರಿಸುತಿಹೆ ಮೋಡಗಳು
ಮಳೆ ಹನಿಗಳು ಶುರುವಾಗಿದೆ
ನೋಡಿ ಕಣ್ಣುಮುಚ್ಚಾಲೆ ಆಟ.

ಸ್ವಲ್ಪವೇ, ಸ್ವಲ್ಪವೇ
ಹಿಡಿದು ಬಿಟ್ಟು,

ಹಿಡಿದು ಬಿಟ್ಟು ಎನ್ನವಂತೆ

ಸುರಿಸುತಿಹೆ ಮೋಡಗಳು
ಮಳೆಹನಿಗಳ.
ದಾರಿಯುಂಟಕೂ ತೊಡಕುಗಳು ಸುರಿಯುವ
ಮಳೆ ಹನಿಗಳಿಗೆ
ಗಾಳಿಯದು ನೋಡಿ
ಬಂದಿತು ರಭಸವಾಗಿ
ಕೊಂಡೊಯ್ಯಲು ಮೋಡಗಳ ಬೇರೆ ಜಾಗಕ್ಕೆ.

*************************

Leave a Reply

Back To Top