ಕಾವ್ಯಯಾನ
ಅಸ್ತ್ರಗಳಿವೆ ಲಕ್ಷ್ಮೀ ದೊಡಮನಿ ಕಾಳಕೂಟ ಮೀರಿಸಬಲ್ಲ ವಿಷಗಳಿವೆ ನಮ್ಮೊಳಗೆ ಅಮೃತವ ಹಾಳುಮಾಡಬಲ್ಲ ಕುತಂತ್ರಿಗಳಿವೆ ನಮ್ಮೊಳಗೆ ಕಟುವಾಣಿ,ಅಶ್ಲೀಲ ವಿಚಾರ,ಸಂಶಯಗಳ ಮುಖೇನ ಅಂದದ ತನುವ ನಶಿಸಬಲ್ಲ ರಸಾಯನಗಳಿವೆ ನಮ್ಮೊಳಗೆ ಸಂಬಂಧದ ಲೆಕ್ಕವಿಲ್ಲ, ಸಮಯ-ಜಾಗದ ಪರಿವೆಯಿಲ್ಲ ಸ್ತ್ರೀಯರ ಆಸಿಸಬಲ್ಲ ಕ್ರಿಮಿಗಳಿವೆ ನಮ್ಮೊಳಗೆ ಪ್ರಗತಿಯ ರಸ್ತೆಯಿಂದ. ಧುಮ್ಮಿಕ್ಕುವವರ ಎಳೆಯುವ ಧ್ಯೇಯದಿಂದ ದೂರಾಗಿಸಬಲ್ಲ ಭಾವನೆಗಳಿವೆ ನಮ್ಮೊಳಗೆ ಅವನನ್ನುಹೊರುವ, ಅರ್ಧಾಂಗಿಯಾಗಬಲ್ಲ ಅವಳ ಅಸಮತೆಯಿಂದ ಕಾಣಬಲ್ಲ ನೋಟಗಳಿವೆ ನಮ್ಮೊಳಗೆ ಬೆರಳಿಂದ ಬ್ರಹ್ಮಾಂಡವರಿವ ಶಕ್ತಿ ಹುಟ್ಟಿದೆ ‘ಚೆಲುವೆ’ ಪುಸ್ತಕ ಸಂಸ್ಕೃತಿ ಅಳಿಸಬಲ್ಲ ಅಸ್ತ್ರಗಳಿವೆ ನಮ್ಮೊಳಗೆ *******
ಕಾವ್ಯಯಾನ
ನಾನೀಗಲೂ ನಿನಗೆ ಆಭಾರಿ. ಶೀಲಾ ಭಂಡಾರ್ಕರ್ ಕನಸೊಂದನ್ನು ಕನಸಾಗಿಯೇ ಉಳಿಸಿದಕ್ಕಾಗಿ, ಮತ್ತೆ ಮತ್ತೆ ಅದೇ ಕನಸಿನ ಗುಂಗಿನಲ್ಲಿ ಇರಿಸಿದಕ್ಕಾಗಿ, ನಿನಗೆ ನಾ ಸದಾ ಆಭಾರಿ. ಕನಸೊಂದಿತ್ತು ನನಗೆ ಸಮುದ್ರ ಕಿನಾರೆಯಲ್ಲಿ, ಮುಸ್ಸಂಜೆಯ ಹೊತ್ತಲ್ಲಿ, ಸೂರ್ಯನೂ ನಾಚಿ ಕೆಂಪಾಗಿ ನಮ್ಮನ್ನೋಡುತ್ತಾ ಮುಳುಗುತ್ತಿರುವಾಗಲೇ ಕೈಯೊಳಗೆ ಕೈ ಹಿಡಿದು ನಮ್ಮೊಳಗೆ ನಾವು ಕಳೆದು ಹೋಗುತ್ತಲೇ ಇರಬೇಕು ದೂರ ಬಲು ದೂರ ನಡೆದು. ಆ ದಿನವಿನ್ನೂ ಬರಲೇ ಇಲ್ಲ. ಸೂರ್ಯನು ನಾಚಿ ನಮ್ಮನ್ನು ನೋಡಲೇ ಇಲ್ಲ. ನಮ್ಮೊಳಗೆ ನಾವು ಕಳೆದು ಹೋಗಲೇ ಇಲ್ಲ. […]
ಕಾವ್ಯಯಾನ
ಕೀಲಿ ಕೈ ತರಲು ಧರಣೇಂದ್ರ ದಡ್ಡಿ ಯಾವ ದೇವರು ಕಣ್ಣು ತೆರೆಯಲೇ ಇಲ್ಲ ಯಾವ ದೇವರು ತಾನೇ ಕಣ್ಣು ತೆರೆದಾನು? ಕಲ್ಲಿನಲಿ ಯಾವುದೋ ಶಿಲ್ಪಿ ಕೆತ್ತಿದ ಮೂರ್ತಿ ಇಲ್ಲಿ ಮನಸ್ಸುಗಳೆಲ್ಲ ಕೋಟೆ ಬಾಗಿಲಿನ ಹಾಗೇಯೆ ಮುಚ್ಚಿಕೊಂಡಿವೆ ಮುಚ್ಚಿದ ಬಾಗಿಲಿಗೆ ಚಿಲಕ ಹಾಕಿದೆ ಜೊತೆಗೆ ದೊಡ್ಡದೊಂದು ಬೀಗವು ಕೂಡ ಹಾಕಿದ ಬೀಗದ ಕೀಲಿ ಕೈ ಸಮುದ್ರಕ್ಕೆ ಎಸೆದಿರುವಾಗ ನಾನೇ ಮೂರ್ಖ! ಈ ಕಲ್ಲು ದೇವರುಗಳೆಲ್ಲ ಕಣ್ಣು ತೆರೆಯುವುವು ಎಂದು ಕಾಯುತ್ತಿದ್ದೇನೆ ಇರಲಿ, ಆದರೂ ಒಂದು ಮಾತು ನೆನಪಿರಲಿ ದೇವರು […]
ಕಾವ್ಯಯಾನ
ಅನುವಾದಿತ ಟಂಕಾಗಳು ಮೂಲ ಕರ್ತೃ – ಸಂಪತ್ ಕುಮಾರ್ ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು ನೀನಿತ್ತ ಜನ್ಮ ಬೇಡೆ ನಾ ಮರುಜನ್ಮ! ಭವಸಾಗರ ದಾಟಿಸು, ನೆನೆವೆನಾ ಕೊನೆ ಜೀವ ಕ್ಷಣಕು. Life bestowed by you Don’t need next life Rescue from worldly pursuits Always remember Till my last breath ಬರುವೆನಿಲ್ಲಿ ನೋವ ಮರೆಯೆ, ಭೇದ ಇಲ್ಲ ನಿನ್ನಲಿ. ಮಧು ಉಣಿಸಿ, ಮನ ತಣಿಸೈ “ಮಧುಶಾಲಾ” Come here To forget […]
ಕಾವ್ಯಯಾನ
ನೀ ಬರುವೆಯ ಒಮ್ಮೆ ಉಷಾ ಸಿ ಎನ್ ಬದುಕ ಜಂಜಾಟದಲ್ಲೀಗ, ಅಲೆಗಳ ಸಂಭ್ರಮದ ವಿಹಂಗಮ ನೋಟದಿ ಕಷ್ಟಸುಖಗಳ ಮೆಲುಕುಹಾಕುತ್ತಾ ಒಬ್ಬಂಟಿಗಳಾಗಿ ಬಿಟ್ಟಿದ್ದೇನೆ..!! ನಿನ್ನ ನೆನಪುಗಳ ಬದಿಗೊತ್ತಿ ಮರೆಮಾಚಿ ಕೈ ಚೆಲ್ಲಿದ್ದೇನೆ. ಹೊಸ ಬದುಕ ಹೊಸೆಯಲು ತುರಾತುರಿ ತಯಾರಿ ನಡೆಸಿದ್ದೇನೆ. ನೆನಪುಗಳಿಗೆ ಮುಕ್ತಿ ಸಿಕ್ಕಿತೆಂಬ, ಕ್ಷಣಿಕ ಸಂತಸ ಕೂಡ ಮೊಳಕೆಯೊಡಿಯುತ್ತಿಲ್ಲ..!! ಅದೆಲ್ಲೊ ಮೂಲೆಯಲ್ಲಿ ಅವಿತು ಕುಳಿತ ನೆನಪುಗಳು ಬರಸೆಳೆದು ಬರುತ್ತಿವೆ ನನ್ನತ್ತಲೇ!! ನನ್ನಂತರಾಳದ ಭದ್ರತೆಯ ಸರದಾರ, ಭರವಸೆಯ ಹರಿಕಾರ ವಿರಹದ ಕಾದಾಟಕೆ ಪೂರ್ಣವಿರಾಮವಿಟ್ಟು!! ಬಂದು ಬಿಡು ಒಮ್ಮೆ ಬದುಕು […]
ಕಾವ್ಯಯಾನ
ಎಲ್ಲಾ ಒಲವುಗಳು ಉಳಿಯುವುದಿಲ್ಲ ವಸುಂಧರಾ ಕದಲೂರು ಪಡೆದುಕೊಳ್ಳಲಾಗದ ಒಲವು ನೋವಾಗಿ ಕಾಡುವಾಗ ಸಂತೈಸಿಕೋ ಮನವ.. ಏಕೆಂದರೆ, ಎಲ್ಲಾ ಒಲವುಗಳು ನಮ್ಮದಾಗಿ ಉಳಿಯುವುದಿಲ್ಲ. ಭೋರೆಂದು ಸುರಿದ ಮಳೆಯ ಹನಿ ಇಳೆಯ ಗರ್ಭಕ್ಕಿಳಿಯದೇ ಆವಿಯಾಗಿ ಬಿಡುವುದು ಕಡಲ ಅಲೆ ದಡಕ್ಕೆ ಅಪ್ಪಳಿಸಿದ ಚಿಪ್ಪೊಳಗೆಂದೂ ಮುತ್ತು ಕೂಡದು ಗಡಿಯಾರವೂ ಹಿಂದೆ ತಿರುಗಲಾರದ ಸಂಕಟಕ್ಕೆ ಆಗಾಗ್ಗೆ ನಿಸೂರ ನಿಟ್ಟುಸಿರಿಟ್ಟು ನಿಂತು ಬಿಡುವುದು ಚಿಗುರೊಡೆಯದ ಬೀಜಗಳ ಕತೆ ಗೊಬ್ಬರದ ಹಾಡಿನಲ್ಲಿ ಕೊನೆಯಾಗುವುದು ಒಲವು ಕನಸ ಕನವರಿಕೆಯಲ್ಲರಳಿ ಸುಗಂಧ ಸೂಸುವ ಮುನ್ನ ಭಗ್ನ ಸ್ವಪ್ನವಾಗಿಬಿಡುವುದು ಬರೆಯಲಾಗದ […]
ಕಾವ್ಯಯಾನ
ಗುಪ್ತಗಾಮಿನಿ ವಿದ್ಯಾ ಶ್ರೀ ಎಸ್ ಅಡೂರ್. ಸಾಗರವ ಸೇರುವ ನದಿಯಾಗಿದ್ದೆ ನಾನು ಬಳುಕುತ್ತಿದ್ದೆ,ಕುಲು ಕುಲು ನಗುತ್ತಿದ್ದೆ. ನದಿಯೆಲ್ಲ ಬತ್ತಿ ನೀರೇ ಇಲ್ಲ ಈಗ ಯಾರಿಗೂ ಕಾಣದಂತೆ ಗುಪ್ತಗಾಮಿನಿ ಯಾಗಿದ್ದೇನೆ. ರೆಕ್ಕೆ ಬಿಚ್ಚಿ ಎತ್ತರೆತ್ತರಕ್ಕೆ ಹಾರುವ ಹಕ್ಕಿ ಯಾಗಿದ್ದೆ ನಾನು ಹಾಡುತ್ತಿದ್ದೆ,ನಲಿನಲಿದಾಡುತ್ತಿದ್ದೆ ಹಾರಾಡಲು ರೆಕ್ಕೆಗಳೇ ಇಲ್ಲ ಈಗ ಅನಂತ ದಿಗಂತ ವನ್ನು ಕಂಡು ,ಮೂಕವಾಗಿ ರೋಧಿಸುತ್ತಿದ್ದೇನೆ. ಅಂದಚೆಂದದಿ ಕಂಪಬೀರುವ ಹೂವಾಗಿದ್ದೆ,ನಾನು ಬೀಸುವ ತಂಗಾಳಿಗೆ ತೊಯ್ದಾಡುತ್ತಿದ್ದೆ ಕಂಪ ಬೀರಲು ಹೂವುಗಳೇ ಇಲ್ಲ ಈಗ ತಂಗಾಳಿಗೆ ಮೈ ಒಡ್ಡುವ ಮನಸಿಲ್ಲದೇ ನೋಯುತಿದ್ದೇನೆ. […]
ಕಾವ್ಯಯಾನ
ಭಾವನೆಗಳು ಮಾತನಾಡುತ್ತಿವೆ ಕಲ್ಪನೆಗಳ ಸಾಗರದಲಿ ಹುದುಗಿ ಹೊಕ್ಕಿದ್ದ ಶಿಲ್ಪವನು ಹೆಕ್ಕಿ ನನಸಾಗಿಸುವಾಸೆಯಲಿ ನೂರೂರಗಳ ಸುತ್ತಿ ಸುತ್ತಿ ಮೌನಿಯಾದ ಶಿಲ್ಪಿಯೊಬ್ಬ ಬಾಯಾರಿ ದಣಿದಿರಲು ತಿರುಕನ ಕನಸು ಹಾರೈಸಿದಂತೆ ಚಂದಿರನ ಬೆಳದಿಂಗಳ ಮೀರಿ ಅಮೃತ ಸಮಾನ ಶಿಲೆಯೊಂದು ಹರ್ಷದಾ ವರವಾಗಿ ಗೋಚರಿಸಿ ವನವಾಸದಲಿಹ ಲಕ್ಷ್ಮಣನ ಕಾಯ್ದು ಕನವರಿಸಿ ಕಲ್ಲಾಗಿ ತಪಗೈವಂತೆ ಊರ್ಮಿಳೆ, ಹಸಿವು ನಿದ್ದೆಗಳ ಗೆದ್ದು ಕಾಲನ ಕುಣಿಕೆಯ ಮರೆತು ಹಗಲಿರುಳು ಹವಣಿಸುತಲಿ ಶಿಲೆಯನು ದೃಷ್ಟಿಸುತಲಿ ಅಂತರಾತ್ಮದಿ ಅಡಗಿಹ ಅರಿವನು ಹದಗೊಳಿಸಿ ಕಲ್ಪನೆ ಶಿಲ್ಪವನೆ ಉಸಿರಾಡಿ ಇಂದ್ರಿಯಗಳ ನಿಗ್ರಹಿಸಿ ಅತೀಂದ್ರಿಯ […]
ಕಾವ್ಯಯಾನ
ರೆಕ್ಕೆ ಮುರಿದಾಗ… ಚೇತನಾ ಕುಂಬ್ಳೆ ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ಉರುಳಿ ಬಿದ್ದು ಅಸುನೀಗಿದ್ದು ಬರೇ ಜೀವಗಳು ಮಾತ್ರ ಆಗಿರಲಿಲ್ಲ. ಹಲವು ಕುಟುಂಬಗಳ ಆಧಾರಸ್ತಂಭಗಳಾಗಿತ್ತು. ಅಲ್ಲಿ ಕಳೆದುಕೊಂಡದ್ದು ಸ್ನೇಹ ಸಂಬಂಧಗಳ ಕೊಂಡಿಯಾಗಿತ್ತು. ಒಬ್ಬರಿಗೆ ಪ್ರೀತಿಯ ಒಡಹುಟ್ಟಿದವರು ಮತ್ತೊಬ್ಬರಿಗೆ ಸ್ನೇಹಿತರು ಮಗದೊಬ್ಬರಿಗೆ ಬಾಳಿಗೆ ಬೆಳಕಾಗಿದ್ದ ಹೆತ್ತವರು ಕೆಲವರಿಗೆ ಜೀವದುಸಿರಾಗಿದ್ದ ಬಾಳಸಂಗಾತಿಗಳು, ಕರುಳಬಳ್ಳಿಗಳು ಮತ್ತೂ ಕೆಲವರಿಗೆ ಸಂಬಂಧಿಕರು ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ನುಚ್ಚುನೂರಾದದ್ದು ಕೇವಲ ದೇಹಗಳೂ ಎಲುಬುಗಳೂ ಮಾತ್ರವಾಗಿರಲಿಲ್ಲ ಹೆಣೆದಿಟ್ಟ […]
ಕಾವ್ಯಯಾನ
ತಂಗಾಳಿ! ಕೆ.ಬಿ.ವೀರಲಿಂಗನಗೌಡ್ರ ಅವಳೆಂದರೆ.. ತೊರೆದವನಿಗೆ ಅರಳಿಮರವಾದವಳು ಅವಳೆಂದರೆ.. ಕೂಡಬೇಕೆಂದವನಿಗೆ ಅನುಭವಮಂಟಪವಾದವಳು ಅವಳೆಂದರೆ.. ಹೋರಾಟಗಾರನಿಗೆ ಊರುಗೋಲಾಗಿ ನಿಂತವಳು ಅವಳೆಂದರೆ.. ಸಮತೆಯೆಂದವನಿಗೆ ತಕ್ಕಡಿ ಹಿಡಿದು ನಿಂತವಳು ಅವಳೆಂದರೆ.. ಎದೆಯದನಿಗೆ ಸ್ವಾತಿ ಹನಿಯಾದವಳು ಅವಳೆಂದರೆ.. ಬೆಳೆಸಲೆಂದೇ ಬೇರಾಗಿ ಕೆಳಗಿಳಿದವಳು ಅವಳೆಂದರೆ.. ಕಾಣದ ತಂಗಾಳಿ ಅರ್ಥವಾಗದ ಅಮೂರ್ತ. *******