ಕಾವ್ಯಯಾನ
ಗಝಲ್ ಬಸವರಾಜ ಕಾಸೆ ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/ ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು// ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/ ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು// ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ ಸಂಜೆ ಸೂರ್ಯನನ್ನು/ ಮರಳು ದಡದ ಮೇಲೆ ಮೆಲ್ಲಗೆ ಮೆಲುಕುವ ಮಲ್ಲಿಗೆ ದಂಡೆಯೊಂದು ನೀನು// ನೀ ಬರುವ ಸಮಯಕ್ಕೆ ಕಾಯುವ ಭಾವಗಳು ಹರಿಯುವವು ಮಳೆಗಾಲದ ಹೊಳೆಯಾಗಿ/ […]
ಕಾವ್ಯಯಾನ
ನನಗಷ್ಟೆ ಗೊತ್ತು! ಲೋಕೇಶ್ ಅಷ್ಟು ಸುಲಭವಲ್ಲ ನಿನ್ನ ಉಳಿಸಿಕೊಳ್ಳುವುದು ಅಷ್ಟು ಸಲೀಸು ಅಲ್ಲ ನಿನ್ನ ಕಳೆದುಕೊಳ್ಳುವುದು ನೀನೆಂದು ಉನ್ಮಾದ ರುಚಿಗೆ ತಾಕೀದೊಡನೇ ನೀ ಕರೆದೊಯ್ಯುವ ಜಗತ್ತು ನನಗಷ್ಟೇ ಗೊತ್ತು! ನೀನೆಂದು ಭಾವನ್ಮೊದಾ ಮನಕ್ಕೆ ನೆನಪದೊಡನೇ ನೀ ಆವರಿಸಿಕೊಳ್ಳುವ ನಿಯತ್ತು ನನಗಷ್ಟೇ ಗೊತ್ತು! ನೀನೆಂದು ಸವಿ ವಿನೋದ ಮಾತಿಗೆ ಜೊತೆಯಾದೊಡನೇ ನೀ ಆಪ್ತವಾಗುವ ಅವಲತ್ತು ನನಗಷ್ಟೇ ಗೊತ್ತು! ನೀನೆಂದು ಉಸಿರ ನಾದ ಏರಿ ಇಳಿದೊಡನೇ ನನ್ನ ಎದೆಯಲ್ಲೆಳೆವ ಹೆಸರಂತು ನನಗಷ್ಟೇ ಗೊತ್ತು *************
ಕಾವ್ಯಯಾನ
ಯುಗಾದಿಯ ಆ ದಿನ ನೀ.ಶ್ರೀಶೈಲ ಹುಲ್ಲೂರು ಹೆದ್ದಾರಿಗಂಟೇ ಇರುವ ನನ್ನ ಮನೆ ಮಹಲಿನ ಮಹಡಿಯ ಬಾಲ್ಕನಿಯಲಿ ಬಂದು ನಿಂತೆ ಬಿಕೋ ಎನ್ನುವ ಸತ್ತುಬಿದ್ದ ರಸ್ತೆ! ಅಲ್ಲೊಂದು ಇಲ್ಲೊಂದು ಆಗೊಂದು ಈಗೊಂದು ಕಂಡು ಕಣ್ಮರೆಯಾಗುವ ಬೀದಿ ನಾಯಿ ಗಳು ತಮ್ಮ ವಿಸರ್ಜನಾ ವ್ಯೂಹ ದ ಕೊನೆಯ ಅಂಗದ ಅಂತಿಮ ಚಪಲವ ಲೈಟಿನ ಕಂಬಕೆ ಕಾಲೆತ್ತಿ ನೆಲಕೆ ತಳವೊತ್ತಿ ತೀರಿಸಿ ಕೊಂಡು ಕಂಬಿ ಕಿತ್ತವು! ಪ್ರಾಸಕ್ಕಂಟಿದ ‘ಕವಿತೆ ಸಾಲು’ ಇಂದು ನನ್ನನ್ನು ಪರದೇಶಿಯಾಗಿಸಿ ಕ್ರಾಸ್ ಕಂಟ್ರಿ ಓಟಕ್ಕಿಳಿದವು. ಸರಿ,ಬಂದಂತೆ ಬರೆದಿಡುವೆ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ನಮ್ಮ ಪೇಲವ ನಗುವ ಕಂಡು ನಗುತಿರುವನೇ ದಿನಕರ ನಿಸ್ತೇಜ ಬದುಕನು ಕಂಡು ಮರುಗಿರುವನೇ ದಿನಕರ ವಸಂತ ಬಂದಿದ್ದಾನೆ ನಿಜ, ಎಂದಿನಂತಿಲ್ಲ ದಿನ ನಮ್ಮ ಗೋಳನು ಕಂಡು ಕರಗಿರುವನೇ ದಿನಕರ ಅವನೋ ಧಗಧಗಿಸಿದ್ದಾನೆ ಎಂದಿನ ಉಗ್ರತೆಯಲ್ಲಿ ಹೂಕರಗಳಿಂದ ಎತ್ತಿ ನಮ್ಮ ಮುದ್ದಿಸುವನೇ ದಿನಕರ ಅವನಿಂದಲೇ ನಳನಳಿಸಿದೆ ಇಳೆ, ಎಲ್ಲರ ಬಾಳು ಬಂದಿರುವ ಸಂಕಟಕೆ ಮದ್ದರೆಯುವನೇ ದಿನಕರ ಹೆಣ ಬಣಬೆ ಬಿದ್ದಿದೆ ಜಗದ ಬೀದಿಬೀದಿಗಳಲ್ಲಿ ಭರವಸೆಯ ಕಿರಣ ಸುರಿದು ಪೊರೆಯುವನೇ ದಿನಕರ ಕತ್ತಲು ಸರಿದು ಬೆಳಕು, […]
ಕಾವ್ಯಯಾನ
ನಾವೆಲ್ಲರೂ ಮನೆಯಲ್ಲೇ ಇದ್ದೇವೆ ರೇಖಾಭಟ್ ನಾವೆಲ್ಲರೂ ಮನೆಯಲ್ಲೇ ಇದ್ದೇವೆ ಒಂದೊಂದು ಖುರ್ಚಿಗೆ ಒಬ್ಬೊಬ್ಬರಂತೆ ಅಡುಗೆಮನೆ ಈಗ ಕೇಂದ್ರ ಸ್ಥಾನ ಟಿ.ವಿ ಹಾಲ್ ನಮ್ಮ ಆಸ್ಥಾನ ಬೀದಿಗಂತೂ ಹೋಗೋದಿಲ್ಲ ಅದಂತೂ ಈಗ – ಖಬರಸ್ಥಾನ! ಮಾವನ ವಾಕಿಂಗ್ ಸ್ಟಿಕ್ ಗೋಡೆ ಮೂಲೆಯಲ್ಲೆ ನಿದ್ರೆಗೆ ಜಾರಿದೆ! ಅತ್ತೆಯ ಹೂವಿನ ಚೊಬ್ಬೆ ದೇವಸ್ಥಾನ ಮರೆತು ಬೊರಲು ಬಿದ್ದಿದೆ! ಪುಟ್ಟ ಪಿಂಕ್ ಸೈಕಲ್ ಮರದ ಬುಡದಲಿ ಒರಗಿ ನಿಂತು ಇಷ್ಟಿಷ್ಟೇ ಬಣ್ಣವ ಕಳೆದುಕೊಳ್ಳುತ್ತಿದೆ! ಕೊರೊನಾ ಬೂತದ ಚಿತ್ರ ಬಿಡಿಸಿ ಅದಕ್ಕೆ ಕ್ರಾಸ್ ಮಾರ್ಕ್ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ನೆರಳ ಕಂಡೂ ಬೆಚ್ಚ ಬೇಕಾಗಿದೆ ಜೀವ ತಲ್ಲಣಿಸಿದೆ ಮುಂದೇನು ಕಾದಿದೆ ತಿಳಿಯದೆ ಜೀವ ತಲ್ಲಣಿಸಿದೆ ಗೋಡೆ ನಾಲ್ಕರ ನಡುವೆ ಬಂದಿಯಾಗಿದೆ ಬದುಕು ಹೊರ ದಾರಿಗಳೇ ಕಾಣದೆ ಜೀವ ತಲ್ಲಣಿಸಿದೆ ಹತ್ತಾರು ತಾಸಿನ ಬಂದ್ ಈಗ ವಾರಗಳ ಲೆಕ್ಕ ಭಯ ಕತ್ತು ಹಿಸುಕುತಿದೆ ಜೀವ ತಲ್ಲಣಿಸಿದೆ ಮೂಗು ಕಣ್ಣುಗಳನ್ನೇ ಮುಟ್ಟುವಂತಿಲ್ಲ ಈಗ ಕೈ ತೊಳೆದಿದ್ದನ್ನೇ ತೊಳೆದಿದೆ ಜೀವ ತಲ್ಲಣಿಸಿದೆ ಕಾಣದ ಕ್ರಿಮಿಯ ದಾಳಿಗೆ ಆಹುತಿಯಾದವರೆಷ್ಟು ಕೊನೆಯೆಲ್ಲಿ ಯಾವಾಗ ಅರಿಯದೆ ಜೀವ ತಲ್ಲಣಿಸಿದೆ ಎಲ್ಲಿಂದಲೂ ಎಷ್ಟು […]
ಕಾವ್ಯಯಾನ
ಸಮಯ ಕಳೆಯಲು ರೇಖಾ ವಿ.ಕಂಪ್ಲಿ ಅಂದೋ ನಮ್ಮಿರಿಯರು ಕಾಲ ಕಳೆಯಲು ಅರಳಿ ಕಟ್ಟೆ ಬೇವಿನ ಕಟ್ಟೆ ನೆರಳಡಿಯಲಿ ಕೂತು ಹರಟೆ ಮಾತುಗಳನಾಡುತ ತೂಕಡಿಸಿ ಆಕಳಿಸಿ ಒಂದು ನಿದ್ದೆ ಹೊಡಿಯುತ್ತಿದ್ದರು………….. ಅಂದೋ ನಮ್ಮೆಂಗಸರು ಓಣಿಗಳಲಿ ಅವರೀವರ ಮನೆ ವಿಚಾರಗಳನು ಗುಸುಗುಸು ಪಿಸುಪಿಸು ಎಂದು ಪುಸುಪುಸು ಮಾತಾಡಿಬಿಡುತ್ತಿದ್ದರು ಮರಡಬ್ಬಾಕಿಕೊಂಡು ಜಗಳವಾಡಿ…….. ಅಂದೋ ನಮ್ಕಿರಿಯರು ಸಡಿಲ ವಸ್ತ್ರಗಳ ಏರಿಸಿಕೊಳ್ಳುತಾ ಮಣ್ಣು ಮಸಿಗಳ ಬಳಿದುಕೊಂಡು ಮಳೆಯ ನೀರಿನಲಿ ಜಿಗಿದು ಚಳಿಯ ಬೆಂಕಿ ಮುಂಜಾವಿನಲಿ ಕಾಸಿ ಚಿನ್ನಿದಾಂಡು ಗೋಲಿ, ಮರಕೋತಿ ಆಡುತಾ… . ಇಂದೋ […]
ಕಾವ್ಯಯಾನ
ಕರೋನಾದ ಮುಂದೆ ಯುಗಾದಿ ಬಿದಲೋಟಿ ರಂಗನಾಥ್ ಹೊಸ್ತಿಲ ಮುಂದೆ ಲಕ್ಷ್ಮಣರೇಖೆ ಒಳಗೆ ಕರಳರಚುವ ಸದ್ದು ಉಗಾದಿಯ ಬೆನ್ನಿಗೂ ಬಿತ್ತು ಕಲ್ಲು ಇರುವ ಪುಡಿಕಾಸಿನಲಿ ಹೋಳಿಗೆ ತಟ್ಟಿದರೆ,ಹೊಸಬಟ್ಟೆ ತಂದರೇ… ಇಪ್ಪತ್ತೊಂದು ದಿನಗಳ ಹಾಲಿಗಿಲ್ಲ ಕಾಸು ಊರಿನ ಬಸ್ಸಿಗಿಲ್ಲ ಬಾಗಿಲು,ಟೈರು ಇದ್ದರು ಭಯದ ಪಂಕ್ಚರ್ರು ಬಿರು ಬಿಸಿಲ ಬೇಗೆಯಲಿ ಸುಡುವ ತಾಯ ಕರುಳು ಅಪ್ಪನ ವಾತ್ಸಲ್ಯದ ಮನಸು ಕಾಯುತ್ತಿವೆ…ಹಬ್ಬದ ನೆವದಲ್ಲಿ ಯಾರೋ ಮಾಡಿದ ತಪ್ಪಿಗೆ ದೇಶದ ಜನ ನರಳುತ್ತಾ ನಲುಗುವ ಕ್ಷಣ ಕ್ಷಣಕ್ಕೂ ಭಯದ ಭುಗಿಲು ಹೆಗಲೇರಿ ಜೈಲಲ್ಲದ ಒಂಥರಾ […]
ಕಾವ್ಯಯಾನ
ಕರೋನ ದಿನಗಳು ರೇಶ್ಮಾ ಗುಳೇದಗುಡ್ಡಾಕರ್ ಕರೋನ ದಿನಗಳು ತಿರುಗಾಟ ತಪ್ಪಿಸಿದೆ ಮನೆಯಮಂತ್ರಾಲಯ ಮಾಡಿದೆಊರೆಲ್ಲಾ ಲಾಕ್ ಡೌನ್ ಮಾಡಿದೆಪ್ರಾಣಿ ಪಕ್ಷಿಗಳ ಸ್ವಂತಂತ್ರ ಹೆಚ್ಚಿಸಿದೆ ಮೌನಕ್ಕೊಂದು ಅರ್ಥ ವಿದೆ ಎಂಬಮಾತು ನಿಜವೆನ್ನಿಸಿದೆಜನಜಂಗುಳಿಯಿಂದ ದೊರವಾಗಿಅಂತರಂಗ ತೆರೆಯಲು ಅನುವು ಮಾಡಿದೆ ಸಮಯದೊಂದಿಗೆ ಓಡುವ ನಮ್ಮನ್ನುಪ್ರೀತಿ ಪಾತ್ರರೊಡನೆ ಕಳೆಯಲು ಬಿಟ್ಟೆನಮ್ಮಗಳ ಪರಿಚಯ ಮತ್ತೆ ನಮಗೆಮಾಡಿಸಿದೆ ನೋವಿನಲ್ಲೊ ನಗುವಿದೆಆತಂಕದ ನೆರಳಿನಲ್ಲಿಯೂ ಬಲುರೋಮಾಚಕ ತಿರುವಿದೆ ಈ ಬದುಕಿನಪಾಠ ಶಾಲೆ ಪ್ರತಿಯೊಬ್ಬರಿಗೊ ಉಚಿತವಿದೆ ನಿನ್ನ ದೂರ ಮಾಡಲು ಹೋಗಿನಮ್ಮವರಿಗೆ ಹತ್ತಿರವಾದೆವುಮೊಗೆದಷ್ಟು ನೆನಪುಗಳು ಗರಿ ಬಿಚ್ಚಿನರ್ತಿಸಿದವು ವರ್ತಮಾನದಕಟು ಸತ್ಯದ ಮುಂದೆ […]
ಕನ್ನಡ ಕಾವ್ಯ ಕುರಿತು
ಕಾವ್ಯವನ್ನು ಬಗೆಯುವ ಬಗೆ ರಾಮಸ್ವಾಮಿ ಡಿ.ಎಸ್. ಕಾವ್ಯವನ್ನು ಬಗೆಯುವ ಬಗೆ ಮೊನ್ನೆ ಭಾನುವಾರ ನಾವೆಲ್ಲ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಇದ್ದಾಗ ಬೆಳಗಾವಿಯ ಕವಿ ಪ್ರವೀಣ ಆಯ್ದ ಕೆಲ ಯುವ ಕವಿಗಳನ್ನು ಫೇಸ್ಬುಕ್ ಲೈವಲ್ಲಿ ಬರುವಂತೆ ಆಯೋಜಿಸಿ ಕವಿತೆಗೆ ಇರುವ ಅನನ್ಯ ಸಾಧ್ಯತೆಗಳ ವಿಸ್ತಾರವನ್ನು ಮತ್ತೊಮ್ಮೆ ಕಾವ್ಯಾಸಕ್ತರಿಗೆ ತಿಳಿಯಪಡಿಸಿದರು. ಶ್ರೀ ಪ್ರವೀಣ ಮತ್ತು ಅವರ ಎಲ್ಲ ಗೆಳೆಯರಿಗೂ ಅಭಿನಂದನೆಗಳು. ಕೆಲಸವಿಲ್ಲದೆ ಸುಮ್ಮನೆ ಏನನ್ನೋ ಟ್ರೋಲ್ ಮಾಡುತ್ತಿದ್ದಾಗ ಈ ಕವಿಗೋಷ್ಠಿಯ ಮೊದಲ ಕವಿ ವೀರಣ್ಣ ಮಡಿವಾಳರನ್ನು ಕೇಳಿಸಿಕೊಂಡೆ. ಅವರ […]