ನನಗಷ್ಟೆ ಗೊತ್ತು!
ಲೋಕೇಶ್
ಅಷ್ಟು ಸುಲಭವಲ್ಲ
ನಿನ್ನ ಉಳಿಸಿಕೊಳ್ಳುವುದು
ಅಷ್ಟು ಸಲೀಸು ಅಲ್ಲ
ನಿನ್ನ ಕಳೆದುಕೊಳ್ಳುವುದು
ನೀನೆಂದು ಉನ್ಮಾದ
ರುಚಿಗೆ ತಾಕೀದೊಡನೇ
ನೀ ಕರೆದೊಯ್ಯುವ
ಜಗತ್ತು
ನನಗಷ್ಟೇ ಗೊತ್ತು!
ನೀನೆಂದು ಭಾವನ್ಮೊದಾ
ಮನಕ್ಕೆ ನೆನಪದೊಡನೇ
ನೀ ಆವರಿಸಿಕೊಳ್ಳುವ
ನಿಯತ್ತು
ನನಗಷ್ಟೇ ಗೊತ್ತು!
ನೀನೆಂದು ಸವಿ ವಿನೋದ
ಮಾತಿಗೆ ಜೊತೆಯಾದೊಡನೇ
ನೀ ಆಪ್ತವಾಗುವ
ಅವಲತ್ತು
ನನಗಷ್ಟೇ ಗೊತ್ತು!
ನೀನೆಂದು ಉಸಿರ ನಾದ
ಏರಿ ಇಳಿದೊಡನೇ
ನನ್ನ ಎದೆಯಲ್ಲೆಳೆವ
ಹೆಸರಂತು
ನನಗಷ್ಟೇ ಗೊತ್ತು
*************