ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಮಯ ಕಳೆಯಲು

Scene with children play at home illustration.

ರೇಖಾ ವಿ.ಕಂಪ್ಲಿ

ಅಂದೋ ನಮ್ಮಿರಿಯರು
ಕಾಲ ಕಳೆಯಲು ಅರಳಿ ಕಟ್ಟೆ
ಬೇವಿನ ಕಟ್ಟೆ ನೆರಳಡಿಯಲಿ
ಕೂತು ಹರಟೆ ಮಾತುಗಳನಾಡುತ
ತೂಕಡಿಸಿ ಆಕಳಿಸಿ ಒಂದು ನಿದ್ದೆ
ಹೊಡಿಯುತ್ತಿದ್ದರು…………..

ಅಂದೋ ನಮ್ಮೆಂಗಸರು
ಓಣಿಗಳಲಿ ಅವರೀವರ
ಮನೆ ವಿಚಾರಗಳನು ಗುಸುಗುಸು
ಪಿಸುಪಿಸು ಎಂದು ಪುಸುಪುಸು
ಮಾತಾಡಿಬಿಡುತ್ತಿದ್ದರು
ಮರಡಬ್ಬಾಕಿಕೊಂಡು ಜಗಳವಾಡಿ……..

ಅಂದೋ ನಮ್ಕಿರಿಯರು
ಸಡಿಲ ವಸ್ತ್ರಗಳ ಏರಿಸಿಕೊಳ್ಳುತಾ
ಮಣ್ಣು ಮಸಿಗಳ ಬಳಿದುಕೊಂಡು
ಮಳೆಯ ನೀರಿನಲಿ ಜಿಗಿದು
ಚಳಿಯ ಬೆಂಕಿ ಮುಂಜಾವಿನಲಿ ಕಾಸಿ
ಚಿನ್ನಿದಾಂಡು ಗೋಲಿ, ಮರಕೋತಿ ಆಡುತಾ…

.

ಇಂದೋ ನಾವುಗಳೆಲ್ಲಾ
ಟಿವಿ, ಮೊಬೈಲ್, ಕಂಪ್ಯೂಟರ್
ಗಳಿಗೆ ಜೊತುಬಿದ್ದು ಕೂತಲ್ಲಿಯೇ
ಕೂತು ಬಿಡುತ್ತಿದ್ದೇವೆ ಭಾರವಾದ
ದೇಹಗಳನು ಹೊತ್ತು, ತುತ್ತು ಅನ್ನ
ಮಾಡಲಾಗದೇ ಹೊರಗಿನಿಂದ ತಂದುಕೊಂಡು……

ಹೀಗೆ ಅಂದು ಇಂದು ಸಮಯ ಕಳೆಯಲು
ವ್ಯತ್ಯಾಸದ ಹಾದಿ ಬದಲಿಸಿಹೆವು……….

***********

About The Author

3 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top