Category: ಕಾವ್ಯಯಾನ

ಕಾವ್ಯಯಾನ

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಲ್ಲಿಗೆಯಿಲ್ಲ ಮುಡಿಯಲಿ ಘಮವಾದರೂ ಇರುಳಿಗೆ ಇರಲಿಶಶಿಯಿಲ್ಲ ನಭದಲಿ ನಕ್ಷತ್ರ ವಾದರೂ ಇರುಳಿಗೆ ಇರಲಿ ಬತ್ತಿ ಎಣ್ಣೆ ಕುಡಿದು ಖುಷಿಯಲಿ ಹರಡಿತು ಬೆಳಕು ಕೋಣೆಯಲಿಅಮಲೇರಲು ಪ್ರೀತಿಯ ಮಧುವಾದರೂ ಇರುಳಿಗೆ ಇರಲಿ ಮೌನ ಚೂರಿಯಿಂದ ಇರಿದು ಗಾಯಗೊಳಿಸಿದೆ ಒಲಿದ ಹೃದಯಎದೆಯ ಉರಿ ಆರಲು ಲಾಲಿ ಹಾಡಾದರೂ ಇರುಳಿಗೆ ಇರಲಿ ಬಯಕೆಯ ಮೃಗಜಲದ ಬೆನ್ನಹಿಂದೆ ಓಡಿ ಓಡಿ ಬಳಲಿದೆಅನುರಾಗದ ಬದುಕಾಗಲು ಕನಸಾದರೂ ಇರುಳಿಗೆ ಇರಲಿ ಏಕಾಂಗಿಯ ಬೇಸರದ ಉಸಿರು ಎಣಿಸುತಿದೆ ತಾರೆಗಳನೊಂದ ಜೀವಿಗೆ ಸುಖದ “ಪ್ರಭೆ” […]

ಮಿಂಚು ನಾದದಲೆಯ ಮೇಲೆ

ಕವಿತೆ ಮಿಂಚು ನಾದದಲೆಯ ಮೇಲೆ ನೂತನ ದೋಶೆಟ್ಟಿ ನಗುವ ಹೂಗಳು ಹಲವುಬೇಲಿಗುಂಟ ಬೆಳೆದಿವೆಕೈಚಾಚುವ ಆಸೆ ಮಾತ್ರ ಇಲ್ಲ ಕಣ್ಣು ಮಿಟುಕಿಸಿದ ನಕ್ಷತ್ರದ ಮೋಹಏಕೆಂದು ಹೇಳಲಿ? ಹಗಲು ಕಾಣುವ ಹೂಗಳಅಂದ ಚಂದ ಕಂಪುಯಾವುದೂ ಕಂಪಿಸಲೇ ಇಲ್ಲ ರಾತ್ರಿ ನಕ್ಕ ತಾರೆಗೆಒಲವೇ ಧಾರೆ ಎರೆದೆಹೊಳಪಿಗೊ ಚೆಲುವಿಗೊ ಹೇಳಲಾರೆ ಅಂತರಂಗವ ಆವರಿಸಿದ ಬೆಳಕುಮೂಲೆ ಮೂಲೆಯಲಿ ಮಿನುಗುತಿದೆಮಿಂಚುನಾದದಲೆಯ ಮೇಲೆಒಲುಮೆ ಹಾಯಿ ನಡೆಸಿದೆ ಸೊಗಸ ಸಂಗ ಸಾಕು ಇನ್ನುಪ್ರೀತಿ ತೊರೆಯು ಹರಿಯಲಿಬಾಳಿನಾಟದಂಕದಲ್ಲಿಬಣ್ಣ ಮೂಡಿ ಬರಲಿ **********************************

ಕನಸು

ಕವಿತೆ ಕನಸು ಮೋಹನ್ ಗೌಡ ಹೆಗ್ರೆ ಜಗದಗಲವ ಅಳೆದ ಕಣ್ಗಳುಎದೆಯದವ ತಟ್ಟಿದ ಮೌನ ಮಾತುಗಳುಅಮೂರ್ತ ವಿಸ್ಮಯಗಳ ಮೂಟೆ ಕಟ್ಟಿ ಮುದ್ದಾಡುತ್ತವೆನಮ್ಮೊಳಗೆ ಹೊಸ ಕನಸಿನ ಪರಪಂಚದೊಂದಿದೆ…….. ಕಣ್ಣಲ್ಲಿ ನೋಡದೇ ಇದ್ದರೂಕೈಯಲ್ಲಿ ಮುಟ್ಟದಿದ್ದರೂಅಲ್ಲೊಂದು ಕ್ಷಣಿಕ ಮೂರ್ತ ಸ್ಥಿತಿಪರಿಚಿತ ಅಪರಿಚಿತ ವ್ಯಕ್ತಿ ಜಾಗೆಗಳ ಅನಾವರಣ ಕನಸುಗಳಿಗೋ ಸಾಕಷ್ಟು ಕವಲುಗಳುಹೌದೆನಿಸುವ, ಬೇಕು, ಬೇಡವೆನಿಸೋನಮ್ಮದೇ ವಸ್ತು ವಿಷಯಗಳೇ ಕನಸಿನ ಒಡಲಾಳಆದರೂ ಹೋಲಿಕೆಯಾಗದ ಕನಸುಗಳೂ ಒಮ್ಮೊಮ್ಮೆ ಕನಸಿನ ನೂರು ಮುಖಗಳಲ್ಲಿಪ್ರೀತಿ, ಖುಷಿ, ಭಯ, ನಿರೀಕ್ಷೆಗಳಿದ್ದರೂಕಂಡು ಕಾಣದಾದ ಕನಸನೂಕ್ಷಣಿಕ ಮನದಾಳದಲ್ಲಿ ಇರಿಸಿಕೊಂಡಿದ್ದಿದೆ ಕನಸಿನ ವಿಳಾಸ ಪಡೆದು ಮಾತಾಡಬೇಕಿದೆಭ್ರಷ್ಟತೆ, […]

ಗಜಲ್

ಗಜಲ್ ಸರೋಜಾ ಶ್ರೀಕಾಂತ್ ಸುರಿದ ಬೆಳದಿಂಗಳಿಗೆ ಇರುಳೆಲ್ಲ ಮಾಯವಾಗಿದೆ ಕೇಳು ಸಖಬಳಿಗೆ ಕರೆವ ಸನಿಹಕ್ಕೂ ತುಸು ನಾಚಿಕೆ ಕೇಳು ಸಖ ರಂಗೇರಿದ ಕೆನ್ನೆಗೆ ಕಾರಣವೇ ನಿನ್ನಾಗಮನಒಲವರಿತ ಮುಂಗುರುಳಿಗೆ ಸ್ಪರ್ಶದ ಸಡಗರ ಕೇಳು ಸಖ ಸದ್ದಿಲ್ಲದ ಮೌನದೊಳಗೂ ನೂರೊಂದು ಮಾತುಗಳಿವೆಕಿವಿಗಪ್ಪಳಿಸುತ್ತ ಚಿತ್ತವನ್ನೆಲ್ಲ ಅಪಹರಿಸುತ್ತಿವೆ ಕೇಳು ಸಖ ಸೋತೆನೆನ್ನುವ ಭಾವಕ್ಕೂ ನವಿರಾದ ಮಂದಹಾಸಗೆಲುವಿನ ನಗೆ ನೀ ಬೀರುವಾಗ ಸೊಗಸಿದೆ ಕೇಳು ಸಖ ನೇಸರ ಬರುವ ಮುನ್ನವೇ ಸಂಭ್ರಮಿಸಲಿ ಮತ್ತೊಂದು ಸಲ‘ಸರೋಜ’ಳ ಅಂತರಂಗ ಪ್ರತಿಧ್ವನಿಸುತ್ತಿದೆ ಕೇಳು ಸಖ ***********************************

ಮಾಯಾವಿ 2020

ಕವಿತೆ ಮಾಯಾವಿ 2020 ರಜಿಯಾ ಕೆ ಭಾವಿಕಟ್ಟಿ ಅಳಿದು ಉಳಿದದ್ದು ಎಲ್ಲವೂನಿಗೂಢತೆಯ ಸಾರವನ್ನು ಹೊತ್ತು ತಂದು ತೇಲುವ ದೋಣಿಯಲ್ಲಿ ಜಲದ ಸುಳಿಯೇ ಇಲ್ಲದೆ ಮುಳುಗಿ ಸತ್ತಂತೆ ಭಾಸವಾಗಿತ್ತು ಅಂಧನಿಗೂ ಕುರಡನೆಂಬ ಹಣೆಪಟ್ಟಿ ಮೊದಲೇ ಇದ್ದರು ಹೊಸತರಹದ ಮುಖವಾಡದನೇತ್ರಗಳಿಗೆ ಬಣ್ಣಗಳ ಲೇಪಿಸಲಾಗಿತ್ತು ಕಾಣದಾ ಜೀವಯು ಎಂಬ ಸುಳ್ಳುಗಳ ಸೋಗಿಗೆ ಕಾಲವೇನಿಂತು ಮುನ್ನುಡಿ ಬರೆದಿತ್ತುಅದಕೆ ಸತ್ಯವೆಂಬಂತೆ ಸಮಯಸಾತು ನೀಡಿ ಗರ್ವಪಟ್ಟಿತ್ತು. ಬಿತ್ತಿದವನು ಬರೀಗೈಲಿ ಬೆತ್ತಲಾಗಿ ನಿಂತು ಪರರ ಪಾಲಿಗೆಹುಚ್ಚನಂತೆ ಕಂಡು ಬದುಕುವ ಪಾಡು ಬಂದು ನಿಂತಿತ್ತು. ಗುಡಿ ಗುಂಡಾರ ಮಸೀದಿಗಳನದೇವರಿಗೂ […]

ಗಜಲ್

ಗಜಲ್ ಶಿವರಾಜ್.ಡಿ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ *******************************************

ನನ್ನವನು

ಕವಿತೆ ನನ್ನವನು ಅನಿಲ ಕಾಮತ ಮದಿರೆಯ ಅಮಲಿನಲ್ಲಿದ್ದಾಗಕೈಹಿಡಿದು ಕುಳುಣಿಸಿದ್ದೇನೆಹಸಿವಿನಿಂದ ಒಡಲುಉರಿ ಎದ್ದರುಒಡಲು ತುಂಬಿದವರಂತೆನಟಿಸಿರುವೆ ಮಾನನಿಯರ ಸಂಘದಲ್ಲಿಮುಳುಗಿದರುಮೌನ ಮುರಿಯದಿರುವೆಮೈಯ ಮೇಲಿನಬರೆ ಸರಿಕರಿಗೆಸಣ್ಣ ಗುಮಾನಿಯೂಬರೆದ ಹಾಗೆಸೀರೆಯಿಂದಸುತ್ತಿಕೊಂಡಿರುವೆರಂಡೆ ಮುಂಡೆಯಬೈಗಳಿಗೆ ದಿನಂಪ್ರತಿಆಹಾರವಾಗಿರುವೆನಿನ್ನ ಸಿಟ್ಟಿಗೆ ಅದೆಷ್ಟು ಸಲನಾನು ಆಹುತಿಯಾಗಿರುವೆಏಕೆಂದರೆ ನೀನುನನ್ನವನು…………. ******************************************************

ಗಜಲ್

ಗಜಲ್ ಎ. ಹೇಮಗಂಗಾ ವಿರಹ ಹೃದಯಕೆ ಹೊರೆಯಾಗುತಿದೆ ತೊರೆದು ಹೋಗದಿರು ನನ್ನಸನಿಹ ನೀನಿರದ ಕೊರಗು ಕೊರೆಯುತಿದೆ ತೊರೆದು ಹೋಗದಿರು ನನ್ನ ಹೊಂಬೆಳಕ ಸೂರ್ಯನೂ ಕೆಂಡದಂತೆ ಸುಡುವನು ನಿಷ್ಕರುಣಿಯಾಗಿಕುದಿಎಸರಿನಂತೆ ಮನಸು ಕುದಿಯುತಿದೆ ತೊರೆದು ಹೋಗದಿರು ನನ್ನ ಭಾವ ಸಂವಹನಕೆ ಬರಿಯ ಕಂಗಳೇ ಸಾಕು ಮಾತಿನ ಹಂಗಿಲ್ಲ ನನಗೆಎದೆಗೂಡಲಿ ಪ್ರೀತಿದೀಪವಿನ್ನೂ ಬೆಳಗುತಿದೆ ತೊರೆದು ಹೋಗದಿರು ನನ್ನ ಸುಖವೆಲ್ಲಿದೆ ಒಂಟಿ ಬಾಳಲ್ಲಿ ನಿನ್ನ ಕೂಡಿ ಒಡನಾಡದ ಹೊರತು ?ಮಧುಪಾನಕೆ ಅಧರ ಹಂಬಲಿಸುತಿದೆ ತೊರೆದು ಹೋಗದಿರು ನನ್ನ ತನುವಿಂದು ಕೊರಡಾಗಿ ಬಾಡಿದೆ ಹಿತ […]

ಗಜಲ್

ಗಜಲ್ ರತ್ನರಾಯಮಲ್ಲ ಚಳಿಯ ನಿನ್ನಯ ಆಲಿಂಗವನ್ನು ಬಯಸುತಿದೆಒಂಟಿತನ ನಿನ್ನಯ ಜೊತೆಯನ್ನು ಬಯಸುತಿದೆ ಬದುಕಿನಲ್ಲಿ ಬಹು ದೂರ ಸಾಗಬೇಕಾಗಿದೆ ನಾನುಜೀವನವು ನಿನ್ನಯ ಸನಿಹವನ್ನು ಬಯಸುತಿದೆ ನನ್ನೆದೆಯ ಗೂಡು ಹಾಳುಬಿದ್ದ ಕೊಂಪೆಯಾಗಿದೆನನ್ನ ಹೃದಯವು ನಿನ್ನ ಬಡಿತವನ್ನು ಬಯಸುತಿದೆ ತಿಂದ ಅನ್ನ ರುಚಿಯೆನಿಸುತಿಲ್ಲ ಮುದ್ದು ಬಂಗಾರಿಜೀವವು ನಿನ್ನ ಪ್ರೀತಿಯ ಕೈತುತ್ತನ್ನು ಬಯಸುತಿದೆ ‘ಮಲ್ಲಿ’ಯ ಮೈ-ಮನವು ಮರೆತಿದೆ ಬದುಕುವುದನ್ನುಬರಡಾದ ಬಾಳು ನಿನ್ನ ಸಾಂಗತ್ಯವನ್ನು ಬಯಸುತಿದೆ

ನಾಲ್ಕು ದಿನದ ಪಯಣ

ಕಾವ್ಯಯಾನ ನಾಲ್ಕು ದಿನದ ಪಯಣ ತೇಜಾವತಿ ಹೆಚ್.ಡಿ. ಪ್ರವಾಹವೋ ಬಿರುಗಾಳಿಯೋಚಂಡಮಾರುತವೋ ಜ್ವಾಲಾಮುಖಿಯೋ ಸುನಾಮಿಯೋ… ಯಾವುದೋ ಒಂದು ವಿಕೋಪಬಂದೆರಗಲೇಬೇಕುನವನೆಲೆ ರೂಪಾಂತರವಾಗಲುಹೊಸ ಅಲೆ ಪ್ರಸಾರವಾಗಲು… ಬೇಕಾದದ್ದು ಬೇಡವಾಗಿಬೇಡವಾದದ್ದು ಬೇಕಾಗಿಕಸ ರಸವಾಗಿ, ರಸ ಕಸವಾಗಿಎಲ್ಲವೂ ತಲೆಕೆಳಾಗಾಗುವವಿಚಿತ್ರ ಸತ್ಯ-ಮಿಥ್ಯ ಪ್ರತಿಬಿಂಬಗಳ ದರ್ಶನವಾಗಲು…ಓ ಕಾಲನೇ… ವಜ್ರಕ್ಕಿಂತಲೂ ನೀನೆಷ್ಟು ಕಠೋರ.. ನಿನ್ನನುಗ್ರಹವಿದ್ದರೆಹೂವಿನ ಮೇಲಿನ ನಡಿಗೆಇಲ್ಲದಿದ್ದರೆ..ಕತ್ತಿಯ ಮೇಲಿನ ನಡಿಗೆಮುಟ್ಟಿದ್ದೆಲ್ಲಾ ಮಲ್ಲಿಗೆಯಾಗಿಸುವ ನಿನಗೆತಾಕಿದ್ದೆಲ್ಲ ನಂಜಾಗಿಸುವ ಕಲೆಯೂ ಕರಗತವಾಗಿದೆ ಬಿಡು.. ಎಂದಾದರೂ ನಿನ್ನಂತರಗವ ಅಳೆಯಲಾದೀತೇ…?ಈ ಕ್ಷಣಿಕದ ಗೊಂಬೆಗಳು..! ದಾನ ಮಾಡಿದ ಕರಗಳು ಬೇಡುವುದೆಂದರೇನು..ತನ್ನಸ್ತಿತ್ವವ ಪರರ ವಶದಲ್ಲಿಟ್ಟುನಶ್ವರದ ಬಾಳು ಬದುಕುವುದೆಂದರೇನು.. ನೂರೊಂದು […]

Back To Top