ನನ್ನವನು

ಕವಿತೆ

ನನ್ನವನು

ಅನಿಲ ಕಾಮತ

clear wine glass with water

ಮದಿರೆಯ ಅಮಲಿನಲ್ಲಿದ್ದಾಗ
ಕೈಹಿಡಿದು ಕುಳುಣಿಸಿದ್ದೇನೆ
ಹಸಿವಿನಿಂದ ಒಡಲು
ಉರಿ ಎದ್ದರು
ಒಡಲು ತುಂಬಿದವರಂತೆ
ನಟಿಸಿರುವೆ

ಮಾನನಿಯರ ಸಂಘದಲ್ಲಿ
ಮುಳುಗಿದರು
ಮೌನ ಮುರಿಯದಿರುವೆ
ಮೈಯ ಮೇಲಿನ
ಬರೆ ಸರಿಕರಿಗೆ
ಸಣ್ಣ ಗುಮಾನಿಯೂ
ಬರೆದ ಹಾಗೆ
ಸೀರೆಯಿಂದ
ಸುತ್ತಿಕೊಂಡಿರುವೆ
ರಂಡೆ ಮುಂಡೆಯ
ಬೈಗಳಿಗೆ ದಿನಂಪ್ರತಿ
ಆಹಾರವಾಗಿರುವೆ
ನಿನ್ನ ಸಿಟ್ಟಿಗೆ ಅದೆಷ್ಟು ಸಲ
ನಾನು ಆಹುತಿಯಾಗಿರುವೆ
ಏಕೆಂದರೆ ನೀನು
ನನ್ನವನು………….

******************************************************

Leave a Reply

Back To Top