ಕವಿತೆ
ಮಾಯಾವಿ 2020
ರಜಿಯಾ ಕೆ ಭಾವಿಕಟ್ಟಿ
ಅಳಿದು ಉಳಿದದ್ದು ಎಲ್ಲವೂ
ನಿಗೂಢತೆಯ ಸಾರವನ್ನು ಹೊತ್ತು ತಂದು ತೇಲುವ ದೋಣಿಯಲ್ಲಿ ಜಲದ ಸುಳಿಯೇ ಇಲ್ಲದೆ ಮುಳುಗಿ ಸತ್ತಂತೆ ಭಾಸವಾಗಿತ್ತು
ಅಂಧನಿಗೂ ಕುರಡನೆಂಬ ಹಣೆಪಟ್ಟಿ ಮೊದಲೇ ಇದ್ದರು ಹೊಸತರಹದ ಮುಖವಾಡದ
ನೇತ್ರಗಳಿಗೆ ಬಣ್ಣಗಳ ಲೇಪಿಸಲಾಗಿತ್ತು
ಕಾಣದಾ ಜೀವಯು ಎಂಬ ಸುಳ್ಳುಗಳ ಸೋಗಿಗೆ ಕಾಲವೇ
ನಿಂತು ಮುನ್ನುಡಿ ಬರೆದಿತ್ತು
ಅದಕೆ ಸತ್ಯವೆಂಬಂತೆ ಸಮಯ
ಸಾತು ನೀಡಿ ಗರ್ವಪಟ್ಟಿತ್ತು.
ಬಿತ್ತಿದವನು ಬರೀಗೈಲಿ ಬೆತ್ತಲಾಗಿ ನಿಂತು ಪರರ ಪಾಲಿಗೆ
ಹುಚ್ಚನಂತೆ ಕಂಡು ಬದುಕುವ ಪಾಡು ಬಂದು ನಿಂತಿತ್ತು.
ಗುಡಿ ಗುಂಡಾರ ಮಸೀದಿಗಳನ
ದೇವರಿಗೂ ಗರ ಬಡಿದು ದೈವತ್ವದ ಬೆಳಕಿಗೂ ಅಂಧಕಾರದ ಕಿಡಿ ಸೊಕಿ ಬೆಂಕಿ ಅಲ್ಲೆ ನಂದಿ ತಣ್ಣಗಾಗಿತ್ತು.
ಊರುರು ಅಲೆದು ದುಡಿದು ದಣಿದವನ ಹೊಟ್ಟೆಯ ಹಸಿವು
ಇಮ್ಮಡಿಗೊಂಡು ಮರಳಿ ಮಣ್ಣಿಗೆ ತಲುಪದೇ ಮಧ್ಯದಲ್ಲೆ ಮಸಣಕೂ ಆಗದೇ ಬೀದಿಯ ನಾಯಿಗಳಿಗೂ ಆಹಾರವಾಗದೆ ಆತ್ಮ ನಗ್ನವಾಗಿಯೇ ಉಳಿದಿತ್ತು
ಸಂಬಂಧಗಳು ಮೊದಲಿಗಿಂತಲೂ ಬಹು ದೂರವೇ ಉಳಿದು ಮೋಸದ ಚಹರೆಗಳ ಒಟ್ಟಿಗೆ ಚಾಪುಗಳು ಹೊಂದಿ ಕುಹುಕ ತಾಂಡವದ ನಾಟಕಕೆ ನಡು ಸಂಚು ನಡೆಸಿದ್ದವು .
ಶಿವಶರಣರ ನುಡಿಗಳು ನಿಜವಾದವು ಎಂಬಂತೆ ವರುಷದುದ್ದಕೂ ನಿಜ ಘಟನೆಗಳೇ ಕಣ್ಣಿಗೆ ದೊರಕುವಂತಿದ್ದವು
ಹಣ ಹೆಣಗಳ ಲೆಕ್ಕವು ಸಿಗದೇ
ಒಂದರ ಮೆಲೋಂದು ಘೋರಿಗಳು ಕಟ್ಟಲು
ರುದ್ರ ಭೂಮಿಯು ನಾಚಿ ತಲೆತಗ್ಗಿಸುವಂತಾಗಿತ್ತು
ಸತ್ಯ ನ್ಯಾಯ ನೀತಿ ಧರ್ಮಗಳು
ಸತ್ತು ಅಗೋಚರಗಾಗಿ ದೂರ ನಿಂತದ್ದು ಮತ್ತೊಮ್ಮೆ ಭಾಸವಾಗಿತ್ತು .
ಅಳಿದು ಉಳಿದದ್ದು ಏನಿದೆ ಎಲ್ಲವೂ ಬರೀ ನೋವಿನ ಸರಮಾಲೆಗಳೇ ಹೊರತು ಸಂತಸ ಕಂಡ ದಿನಗಳೇ ಕಡಿಮೆ ಮೊದಲು ಕಳೆದು ಬಿಡಲಿ ಈ ಕರಾಳ ಸಮಯ ಎಂದು ಎಲ್ಲರ ಮನಸಿನಲೂ ನಿಟ್ಟುಸಿರು ಒಂದೇ ಆಗಿತ್ತು.
********************************