ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕನಸು

ಮೋಹನ್ ಗೌಡ ಹೆಗ್ರೆ

Silver-colored Crescent Moon Pendant

ಜಗದಗಲವ ಅಳೆದ ಕಣ್ಗಳು
ಎದೆಯದವ ತಟ್ಟಿದ ಮೌನ ಮಾತುಗಳು
ಅಮೂರ್ತ ವಿಸ್ಮಯಗಳ ಮೂಟೆ ಕಟ್ಟಿ ಮುದ್ದಾಡುತ್ತವೆ
ನಮ್ಮೊಳಗೆ ಹೊಸ ಕನಸಿನ ಪರಪಂಚದೊಂದಿದೆ……..

ಕಣ್ಣಲ್ಲಿ ನೋಡದೇ ಇದ್ದರೂ
ಕೈಯಲ್ಲಿ ಮುಟ್ಟದಿದ್ದರೂ
ಅಲ್ಲೊಂದು ಕ್ಷಣಿಕ ಮೂರ್ತ ಸ್ಥಿತಿ
ಪರಿಚಿತ ಅಪರಿಚಿತ ವ್ಯಕ್ತಿ ಜಾಗೆಗಳ ಅನಾವರಣ

ಕನಸುಗಳಿಗೋ ಸಾಕಷ್ಟು ಕವಲುಗಳು
ಹೌದೆನಿಸುವ, ಬೇಕು, ಬೇಡವೆನಿಸೋ
ನಮ್ಮದೇ ವಸ್ತು ವಿಷಯಗಳೇ ಕನಸಿನ ಒಡಲಾಳ
ಆದರೂ ಹೋಲಿಕೆಯಾಗದ ಕನಸುಗಳೂ ಒಮ್ಮೊಮ್ಮೆ

ಕನಸಿನ ನೂರು ಮುಖಗಳಲ್ಲಿ
ಪ್ರೀತಿ, ಖುಷಿ, ಭಯ, ನಿರೀಕ್ಷೆಗಳಿದ್ದರೂ
ಕಂಡು ಕಾಣದಾದ ಕನಸನೂ
ಕ್ಷಣಿಕ ಮನದಾಳದಲ್ಲಿ ಇರಿಸಿಕೊಂಡಿದ್ದಿದೆ

ಕನಸಿನ ವಿಳಾಸ ಪಡೆದು ಮಾತಾಡಬೇಕಿದೆ
ಭ್ರಷ್ಟತೆ, ನ್ಯಾಯ ನಿಷ್ಠತೆ
ಕೆಡಕುಗಳ
ಮುಂಚಿತವಾಗಿಯೇ ಎದುರಿಸುವ ತಯಾರಿಗಾಗಿ
ಒಡೆದು ಹೋದ ಅನಾಥ ಮನಸುಗಳಿಗೆ
ಮನೆ ಇದ್ದೂ ಹಸಿದೇ ಇರುವ ಒಡಲುಗಳಿಗೆ
ಎಲ್ಲ ಇದ್ದೂ ಇಲ್ಲದಂತ ಕಣ್ಣುಗಳಿಗಿಷ್ಟು
ಕನಸಲ್ಲಾದರೂ ಖುಷಿ ಪಡಿಸೆಂದು
ಒಂದು ಆಪ್ತ ತಾಕಿತು ಮಾಡಲು……..

********************************

About The Author

8 thoughts on “ಕನಸು”

Leave a Reply

You cannot copy content of this page

Scroll to Top