Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ವ್ಯತ್ಯಾಸ ಪ್ರಮೀಳಾ ಎಸ್.ಪಿ. ಎದೆಯ ಮೇಲೊಮ್ಮೆ ಕಿವಿಯಿಡು ನಿನ್ನೆಸರೇ ನನ್ನುಸಿರಲಿ ಎಂದಿದ್ದವ ಗೊರಕೆ ಸದ್ದುಸಹಿಸಲಾರೆ ದೂರ ಮಲಗುವೆಯಾ ಎನ್ನುತ್ತಿದ್ದಾನೆ ಬೈಕ್ ಮೇಲೆ ನಿನ್ನಬಾಡಿ ಲೈಟ್ ವೈಟ್,ಹಾರೀಯೆ ಎಂದಿದ್ದವ ಕಾರಿಗೂ ಮುಂಬಾರ ಹಿಂದೆ ಕೂರುವೆಯಾ ಎನ್ನುತ್ತಿದ್ದಾನೆ. ನಿನ್ನ ಮುಡಿಗೆ ಮಲ್ಲಿಗೆ ತಂದಿರುವೆ ಮುಡಿಯಲೇ ಬೇಕು ಎಂದಿದ್ದವ ಮಾರೀಗ ರೂಪಾಯಿ ನೂರು ಖಾಲಿ ಜಡೆಯೆ ಚೆನ್ನ ಎನ್ನುತ್ತಿದ್ದಾನೆ ಮಸಾಲೆ ದೋಸೆ ನಿನ್ನಿಷ್ಟ ತಿನ್ನು ನೀ ಎಷ್ಟಾದರೂ ಎಂದಿದ್ದವ ಅನ್ನ ಸಕ್ಕರೆ ಬೇಡ ಸಿರಿಧಾನ್ಯ ತಿನ್ನಲಾರೆಯಾ ಎನ್ನುತ್ತಿದ್ದಾನೆ. ಸೀರೆಯಲಿ ನೀ ಸುಂದರಿ […]

ಕಾವ್ಯಯಾನ

ನಾ ಮನುಷ್ಯಾ ಅದೀನಿ ಚಂರಾನನ ದು:ಖ ಆದಾಗ ಅತ್ತೇನಿ ಸಂತೋಷ ಆದಾಗ ನಕ್ಕೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ಮನಸ್ನ್ಯಾಗೊಂದು, ಮಾತ್ನ್ಯಾಗೊಂದು, ಕೆಲಸ್ದಾಗೊಂದು ಮಾಡಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ…. ಮುಖವಾಡ ಇಟ್ಕೊಂಡ್ ನೋಡಿಲ್ಲ ಮುಖವಾಡ ಹಾಕ್ಕೊಂಡ್ ಆಡಿಲ್ಲ ಯಾಕಂದ್ರ ನಾ ಮನುಷ್ಯಾ ಅದೀನಿ….. ಇದ್ರ ಕೊಟ್ಟೀನಿ,ಇಲ್ಲಾಂದ್ರ ಬಿಟ್ಟೀನಿ ಮುಂದ್ ಹೊಗಳಿಲ್ಲ,ಹಿಂದ್ ಬೈದಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ….. ಕಷ್ಟ ಅಂದ್ರ ಕರಗೀನಿ,ಇಷ್ಟ ಅಂದ್ರ ಹಿಗ್ಗೀನಿ ಏನೂ ಇಲ್ಲಾಂದ್ರ ಸುಮ್ಮನದೀನಿ ಯಾಕಂದ್ರ ನಾ ಮನಷ್ಯಾ ಅದೀನಿ…… ಬದಕಾಕ […]

ಕಾವ್ಯಯಾನ

ಗಝಲ್ ದೀಪಾಜಿ ಮನದಬಾಗಿಲ ಕದಲಿಸಿದರೆ ಏನರ್ಥ ಸಾಕಿ, ಒಳನುಸುಳುವ ಇಚ್ಛೆ ಇಲ್ಲದವರು ಬಯಲ ದಾಟಿ ಬರಬಾರದಿತ್ತು.. ಅಂಗಾತ ಮಲಗಿದ ರಸ್ತೆ ದಾಟಿ ಬಾಗಿಲ ವರೆಗೂ ಬಂದು ಕದತಟ್ಟದೆ ಹಿಂತಿರುಗುತ್ತೇನೆಂದರೆ ಏನರ್ಥ ಸಾಕಿ.. ಮೊಗ ನೋಡಿ ಮಾತನಾಡಲಾಗದವರು ಕಾರ್ಮೋಡದ ಮಧ್ಯದ ಕೊಲ್ಮಿಂಚಿನಂತ ಮಾತು ಆರಂಭಿಸಲು ಬರಬಾರದಿತ್ತು..ಬಿದಿಗೆ ಚಂದಿರನಂತೆ ಬಂದು ನಿಂತು ಕಾಯ್ದು,ಕದ ತೆರೆಯುವಾಗ ಬೆನ್ನುಮಾಡಿ ಹೊರಟರೆ ಏನರ್ಥ ಸಾಕಿ.. ಬೆರಳಿಗೆ ಬೆರಳ ಕಸಿಮಾಡಿದಾಗ ಹುಸಿ ಮುನಿಸಮಾಡಿ ಕೊಸರಾಡಲು ಬರಬಾರದಿತ್ತು.. ಮರುಳ ಮಾಡಿ ಕರುಳ ಹಿಂಡಿ,ಮಂಡಿ ಹಚ್ಚಿ ಕುಳಿತು ಬೆರಳ‌ […]

ಕಾವ್ಯಯಾನ

ಜಾಗವೊಂದು ಬೇಕಾಗಿದೆ! ಪ್ರಮೀಳಾ ಎಸ್.ಪಿ. ಬೇಕಿದೆ ನನಗೊಂದು ಜಾಗ ಮನೆ ಮಂದಿರ ಕಟ್ಟಲಲ್ಲ! ಮಸೀದಿ ಚರ್ಚು ಕಟ್ಟಿ ವಿವಾದ ಹುಟ್ಟು ಹಾಕಲಲ್ಲ! ಬ್ಯಾಂಕು ಬಂಕು ಮಾಲ್ ಹಾಲ್ ನಿರ್ಮಿಸಲಲ್ಲ! ಒಂದಿಷ್ಟು ಕುಳಿತು ಅಳಲು ಏಕಾಂತ ಸಿಗುವ ಜಾಗ! ಮನೆಯಲ್ಲಿ ಮಕ್ಕಳು ನೋಡಿಯಾರು ಬೀದಿಯಲಿ ಜನ ನಕ್ಕಾರು! ಗುಡಿಯ ಪೂಜಾರಿದುರುಗುಟ್ಟಿಯಾನುಕಚೇರಿಯಲ್ಲಿ ನಗೆಗೆಆಹಾರವಾದೇನು! ಅದಕೆಯಾರೂ ನೋಡದ, ಯಾರಿಗೂಕಾಣದ ಏಕಾಂತದ ಜಾಗವೊಂದು ಬೇಕಿದೆಕಣ್ಣೀರ ಕಟ್ಟೆ ಒಡೆಯಲು.

ಕಾವ್ಯಯಾನ

ಮಧುಕುಮಾರ್ ಸಿ.ಹೆಚ್. ನೂತನ ಪ್ರಜ್ಞಾ ದೀಪಿಕೆ ನಿರ್ಗಮಿಸು ಸಾಕ್ಷಿಪ್ರಜ್ಞೆಯೆ, ಅಂತರಂಗದ ದನಿಯೆದುರು ಮಂಡಿಯೂರಿ ನಿಲ್ಲಬೇಡ: ಯಾರದೋ ಬಹಿರಂಗ ತಲ್ಲಣಕೆ ಮನ ತೆರೆಯಬೇಡ ತಪ್ಪು-ಒಪ್ಪುಗಳ ಕಂತೆಯನು ಅಡ್ಡಗೋಡೆಯ ಮೇಲಿಟ್ಟು ಸುಮ್ಮನೆ- ತಣ್ಣಗೆ ಪಲಾಯನ ಮಾಡು ಪ್ರತಿಕ್ರಿಯೆ – ಸ್ಪಂದನದ ಗೊಡವೆ ನಿನಗೇತಕೆ? ಭೂತದ ಬೆನ್ನು ಹತ್ತಿ; ವರ್ತಮಾನವ ಕಟ್ಟಿಡು ಸತ್ಯದರ್ಶನಕೆ ಗಾಂಧಾರಿ- ಧೃತರಾಷ್ಡçರ ಸಾಲಲ್ಲಿ ನಿಲ್ಲು ನಮ್ಮವ ನಮ್ಮವರೆಂಬ ದಾರಿಯಲಿ ಸದ್ದುಮಾಡದೆ ನುಸುಳಿ ನುಸುಳಿ ಮುಂದೆ ಸಾಗು. ಅನುಭವ ಮಂಟಪದ ಮಹಾನುಡಿಗಳನು ಅನ್ಯರಿಗೆ ಅನ್ವಯಿಸಿ ಗುಣಿಸಿಬಿಡು ಅಹಮಹಮಿಕೆಯ ಆಪ್ಯಾಯನದೊಡನೆ […]

ಕಾವ್ಯಯಾನ

ಕವಿ ಕೆ.ಬಿ.ಸಿದ್ದಯ್ಯನವರ ನೆನಪಿನಲ್ಲಿ ಕೊನೆಯ ಅ.. ಆ.. ಮಂಟಪ ಡಾ.ಆನಂದ ಕುಮಾರ್ ಮೈಸೂರು ಹಿಂದೆ ಮುಂದೆ ಒಂದಾಕ್ಷರದ ಬದಲಿಕೆ ಒಂದಾಕ್ಷರ ಸೇರೊ ಆಳಿಸೋ ಹಾಗಿಲ್ಲವೆಂದು ಪ್ರಕಟಿಸೋಕೊ ತಾಕೀತು ಮಾಡೋ ಹಾಗೆ ಅ.. ಆ.. ಮಂಟಪದ ಮಾರ್ಗದ ಸ್ವೀಕಾರಕ್ಕೆ ಕಾಲನ ಒಪ್ಪಿಸಿದ ತಂಟೆಕೋರ ಮುದ್ದು ಮಾದಪ್ಪನ ಕುಡಿಯೇ ಕೆಲಹೊತ್ತು ಇನಿಯ ಮೋಹ ಪಾಶ ಕಳಚಿ ಸಿದ್ದಾರ್ಥ ರೂಪ ಧರಿಸಿಯೂ ಪತಿ ಧರ್ಮ ಪಾಲಕನಾಗಿಯೂ ಆಲ್ಲಮ.. ಅಲ್ಲ..ಹೌದು ಅಪ್ಪ ಭಾವ ಬಂಧನ ಕಳಚದಾ ಕಹಿ ಸಿಹಿ ಊಣ್ಣೋ ವ್ಯಾಮೋಹ ವ್ಯಾಕುಲತೆ […]

ಕಾವ್ಯಯಾನ

ಪ್ರಮಿಳಾ ಎಸ್.ಪಿ. ಹಬ್ಬ ದೀಪಾವಳಿಯ ಸಡಗರಕ್ಕೆ ಮಗಳು ಮನೆಗೆ ಬಂದಂತೆ ಮೇಕೆಯೂ ಸಂತೆಗೆ ಬಂದಿತು. ಯಾರದ್ದೋ ಮನೆ ಸೇರಿ ರಾತ್ರಿ ಇಡೀ ಮಾವಿನ ಎಲೆ ತಿಂದು ನಗುತ್ತಿತ್ತು. ತುಂಬಿದ ಮೊಲೆಗಳು ಜೋತು ಬಿದ್ದಿದ್ದ ಕಂಡು ಆಡಿನ ಹಾಲು ಶ್ರೇಷ್ಟ ವಂತೆ ಎಂದೇ ನನ್ನೆದೆಯೊಳಗೆ. ಮಾವಿನ ಎಲೆ ಮೆಲುಕಿ ಮಲಗಿದ್ದ ಮೇಕೆ ಬೆಳಗಿನ ಜಾವಕ್ಕೆ ಹಾಲು ಕಕ್ಕಿತ್ತು. ಒಂದಾಡು ಮೂರು ಪಾಲಾಗಿ ನೇತಾಡುತ್ತಿದ್ದ ನೋಡಿ ಮನ ಹೋಳಾಗಿತ್ತು. ಮಹಾವೀರ ನ ನಾಡಲ್ಲಿ ಅಣ್ಣ ನ ವಚನ ನೆನೆದು.. ಮಗಳ […]

ಕಾವ್ಯಯಾನ

ಮನದ ಹನಿಗಳು ಅನಿತ ಕೃಷ್ಣಮೂರ್ತಿ ಸಿದ್ದವಾದ ಸೆಳೆತದ ಹೊಸ್ತಿಲು ಸದ್ದಿರದೆ ಸುಳಿದಾಡಿದೆ ಸ್ನೇಹ ಸೇತುವೆ ಹತ್ತಲು ಸಾಧಿಸಲು ಗುರಿ ಮುಂದಿನ ಹಾದಿ ನೂರಾರು ಬಾಧಿಸಲು ಕಾಯಬಹುದು ಆಲೋಚನೆಯ ಕರಾರು ಮನಸಲಿ ಕತ್ತಲಿರುವಾಗ ಕಣ್ಣಿನ ಹೊಳಪು ಬೆಳಕಾಗಿ ಸುತ್ತಲಾಗಲಿಲ್ಲ ನಾನೇಕೆ ಹುಡಕಲಿ ನಿನ್ನ ಅಲ್ಲಿ ಇಲ್ಲಿ ಮಾಸದಂತೆ ಉಳಿದಿದೆ ನಿನ್ನದೇ ಚಿತ್ರ ಮನದ ಭಿತ್ತಿಯಲಿ ಹಟದ ಬೇಲಿಯನ್ನೇ ಸುತ್ತಿಕೊಂಡಿದ್ದ ಮನಸು ದಾಟಿ ಬಂದಿತ್ತು ಕಂಡು ನಿನ್ನ ಮಂದಸ್ಮಿತದ ಸೊಗಸು ಕಾದಿದೆ ತೆಪ್ಪವೊಂದು ಸೇರಿಸಲು ದೂರ ತೀರವನು ಕಾಡಿದೆ ನೆನಪೊಂದು […]

ಕಾವ್ಯಯಾನ

ಮುಖವಾಡ ಸುಜಾತ ರವೀಶ್ ಮುಖವಾಡ *** ಕಿತ್ತೊಗೆಯಬೇಕೆನಿಸುತಿದೆ ಅಂಟಿಕೊಂಡಿರುವ ಈ ಮುಖವಾಡಗಳ ಬಿಸಿ ಧಗೆಯ ಕುಲುಮೆಯಲ್ಲಿ ಉಬ್ಬೆಗೆ ಹಾಕಿದಂತಿದೆ ನೈಜತೆಯ ಶುದ್ದ ಹವೆಯಲ್ಲಿ ಮನ ಉಸಿರಾಡಬಯಸುತಿದೆ. ಮನದಲ್ಲಿ ಜ್ವಾಲಾಮುಖಿ ಸಿಡಿಯುವಂತಿದ್ದರೂ ಲಾವಾರಸ ಹೊರಚಿಮ್ಮದಂತೆ ಜಾಗೃತಿ ವಹಿಸಬೇಕಾಗಿದೆ ಶಾಂತತೆಯ ಮುಖವಾಡ ತೊಟ್ಟು ಬದುಕು ದೂಡಬೇಕಾಗಿದೆ. ಗೋಸುಂಬೆಯ ಹಾಗೆ ಬಣ್ಣ ಬದಲಿಸುತಿರುವವರ ನೋಡಿದಾಗೆಲ್ಲ ಮುಖಕ್ಕೆ ರಾಚುವಂತೆ ಬೈದುಬಿಡಬೇಕೆಂದೆನಿಸಿದರೂ ಸಭ್ಯತೆಯ ಮುಖವಾಡ ಧರಿಸಬೇಕಾಗಿದೆˌನಟಿಸಬೇಕಾಗಿದೆ. ಪರಂಪರಾನುಗತ ಉರುಳುಗಳಿಂದ ಬಿಡಿಸಿಕೊಳ್ಳಬೇಕೆನಿಸಿದರೂ ಹಕ್ಕಿಯಂತೆ ಸ್ವೇಚ್ಛೆಯಾಗಿ ನೀಲನಭದಿ ವಿಹರಿಸಬೇಕೆಂದರೂ ಮತ್ತೆ ಸಂಪ್ರದಾಯದ ಮುಖವಾಡದ ಹಿಂದೆ ನಿಲ್ಲಬೇಕಾಗಿದೆ. ಆಸೆ […]

ಕಾವ್ಯಯಾನ

ಪ್ರಕಾಶ್ ಕೋನಾಪುರ ಬಟ್ಟೆಗೆ ಮುಕ್ತಿ ಬೇಕಿದೆ! ಈಗೀಗ ಕತ್ತಲಲ್ಲಿಯೇ ಬೆತ್ತಲಾಗಬೇಕೆಂದೇನಿಲ್ಲಬೆಳಕಿನಲ್ಲೂ ಬೆತ್ತಲಾಗಬಹುದುಬಟ್ಟೆ ಕಳಚುವವರಿದ್ದರೆ ಬೆತ್ತಲಾಗಲು ಕತ್ತಲಿಗೆ ಕಾಯುವ ಮೂರ್ಖರೇಕತ್ತಲಲ್ಲಿ ಬೆತ್ತಲಾಗುವವರನ್ನೂ ನೋಡಬಹುದೀಗತ್ರಿನೇತ್ರಿಗರು ಗೋರಿಯೊಳಗೆ ಬೆತ್ತಲಾಗಿ ಮಲಗಿದವನಿಗೆ ಪದವಿಬಿರುದುಬಾವಲಿ ಅಷ್ಟೈರ್ಯಗಳು ಬಟ್ಟೆ ಹೊದಿಸಲಾಗಲಿಲ್ಲ ಹೆರಿಗೆನೋವಿನಿಂದ ನರಳುತ್ತಿರುವ ಹೆಣ್ಣೇನಾಚದಿರು ಬೆತ್ತಲಾಗಿಹೆನೆಂದು ಹೊಸಜೀವದ ಸೃಷ್ಟಿಗೆಬಟ್ಟೆ ತೊಟ್ಟ ನೀಚರೆದರು   ಬಟ್ಟೆಗೆ ಬಸಿರು ಮುಚ್ಚಿಡಲಾಗುವುದಿಲ್ಲಹಾಗೆಯೇ ಮನುಷ್ಯನ ಹೊಲಸನ್ನೂ ಓ ಮನುಷ್ಯನೇ ಬೆತ್ತಲಾಗದಿರುನಿನ್ನ ಕೊಳಕು ದೇಹವನ್ನು ನೋಡಲಾಗುವುದಿಲ್ಲಕೊಳಕನ್ನು ಮುಚ್ಚಿಟ್ಟು ಸುಸ್ತಾದಬಟ್ಟೆಗೆ ಮುಕ್ತಿ ಬೇಕಿದೆ  ============= ಪರಿಚಯ: ಬಿ.ಎಸ್ಸಿ(ಕೃಷಿ) ಪದವೀಧರ, ಶಿಕಾರಿಪುರದಲ್ಲಿ ವಾಸ, ಜಿಲ್ಲಾ ಉಪಾಧ್ಯಕ್ಷ,ಆಮ್ ಆದ್ಮಿ […]

Back To Top