ಕಾವ್ಯಯಾನ

ಪ್ರಕಾಶ್ ಕೋನಾಪುರ

ಬಟ್ಟೆಗೆ ಮುಕ್ತಿ ಬೇಕಿದೆ!

ಈಗೀಗ ಕತ್ತಲಲ್ಲಿಯೇ ಬೆತ್ತಲಾಗಬೇಕೆಂದೇನಿಲ್ಲ
ಬೆಳಕಿನಲ್ಲೂ ಬೆತ್ತಲಾಗಬಹುದು
ಬಟ್ಟೆ ಕಳಚುವವರಿದ್ದರೆ

ಬೆತ್ತಲಾಗಲು ಕತ್ತಲಿಗೆ ಕಾಯುವ ಮೂರ್ಖರೇ
ಕತ್ತಲಲ್ಲಿ ಬೆತ್ತಲಾಗುವವರನ್ನೂ ನೋಡಬಹುದೀಗ
ತ್ರಿನೇತ್ರಿಗರು

ಗೋರಿಯೊಳಗೆ ಬೆತ್ತಲಾಗಿ ಮಲಗಿದವನಿಗೆ ಪದವಿ
ಬಿರುದುಬಾವಲಿ ಅಷ್ಟೈರ್ಯಗಳು ಬಟ್ಟೆ ಹೊದಿಸಲಾಗಲಿಲ್ಲ

ಹೆರಿಗೆನೋವಿನಿಂದ ನರಳುತ್ತಿರುವ ಹೆಣ್ಣೇ
ನಾಚದಿರು ಬೆತ್ತಲಾಗಿಹೆನೆಂದು ಹೊಸಜೀವದ ಸೃಷ್ಟಿಗೆ
ಬಟ್ಟೆ ತೊಟ್ಟ ನೀಚರೆದರು  

ಬಟ್ಟೆಗೆ ಬಸಿರು ಮುಚ್ಚಿಡಲಾಗುವುದಿಲ್ಲ
ಹಾಗೆಯೇ ಮನುಷ್ಯನ ಹೊಲಸನ್ನೂ

ಓ ಮನುಷ್ಯನೇ ಬೆತ್ತಲಾಗದಿರು
ನಿನ್ನ ಕೊಳಕು ದೇಹವನ್ನು ನೋಡಲಾಗುವುದಿಲ್ಲ
ಕೊಳಕನ್ನು ಮುಚ್ಚಿಟ್ಟು ಸುಸ್ತಾದ
ಬಟ್ಟೆಗೆ ಮುಕ್ತಿ ಬೇಕಿದೆ 

=============

ಪರಿಚಯ:

ಬಿ.ಎಸ್ಸಿ(ಕೃಷಿ) ಪದವೀಧರ, ಶಿಕಾರಿಪುರದಲ್ಲಿ ವಾಸ, ಜಿಲ್ಲಾ ಉಪಾಧ್ಯಕ್ಷ,ಆಮ್ ಆದ್ಮಿ ಪಾರ್ಟಿ,ಶಿವಮೊಗ್ಗ ಜಿಲ್ಲೆ

Leave a Reply

Back To Top