ಕಾವ್ಯಯಾನ

ಕವಿ ಕೆ.ಬಿ.ಸಿದ್ದಯ್ಯನವರ ನೆನಪಿನಲ್ಲಿ

ಕೊನೆಯ ಅ.. ಆ.. ಮಂಟಪ

ಡಾ.ಆನಂದ ಕುಮಾರ್ ಮೈಸೂರು

ಹಿಂದೆ ಮುಂದೆ ಒಂದಾಕ್ಷರದ ಬದಲಿಕೆ
ಒಂದಾಕ್ಷರ ಸೇರೊ ಆಳಿಸೋ ಹಾಗಿಲ್ಲವೆಂದು
ಪ್ರಕಟಿಸೋಕೊ ತಾಕೀತು ಮಾಡೋ ಹಾಗೆ
ಅ.. ಆ.. ಮಂಟಪದ ಮಾರ್ಗದ ಸ್ವೀಕಾರಕ್ಕೆ ಕಾಲನ
ಒಪ್ಪಿಸಿದ ತಂಟೆಕೋರ ಮುದ್ದು ಮಾದಪ್ಪನ ಕುಡಿಯೇ

ಕೆಲಹೊತ್ತು ಇನಿಯ ಮೋಹ ಪಾಶ ಕಳಚಿ ಸಿದ್ದಾರ್ಥ
ರೂಪ ಧರಿಸಿಯೂ ಪತಿ ಧರ್ಮ ಪಾಲಕನಾಗಿಯೂ
ಆಲ್ಲಮ.. ಅಲ್ಲ..ಹೌದು ಅಪ್ಪ ಭಾವ ಬಂಧನ ಕಳಚದಾ
ಕಹಿ ಸಿಹಿ ಊಣ್ಣೋ ವ್ಯಾಮೋಹ ವ್ಯಾಕುಲತೆ ಇಲ್ಲದಾಗಿ
ಸಂಸಾರ ಸಾಗರ ಈಜಿ ತಾವರೆ ಪುಷ್ಪಧಾರಿ ಆದಿಜಾಂಭವನಾದೆ

ಅಡ್ಡಿ ಅತಂಕ ಆಗಾಧಗಳೊಳಗಿಂದ ಎದ್ದು ಮರೆವಿನಂದು
ಪೂಜಿಸುವಿಕೆಗೆ ನಿನ್ನ ಕೈನ ಸುರೆ ಮದ್ದು ನೀಡೆಂದು
ಬೇಡಿ ಪಡೆದಿಹ ಐಭೋಗ ಸಂತನಂತೆ ಸಂಗಡಿಗನಾಗಿ
ಎಲ್ಲರೊಂದಿಗೆ ಹಂಚಿಕೊಂಡು ಸೇವಿಸಿದ್ದ ಮಾತಂಗಿ ಮಗನೇ

ನಾಡ ಮಣ್ಣಲ್ಲಿ ಮಣ್ಣಾದವರ ಕತೆಯ ಕರಳು
ಕಿವಚುವಂತೆ ಹಾಡು ಕಟ್ಟಿದ್ದ ಮೋಡಿಗಾರ
ಅಲ ಆಕಾಶೆ ಮರದ ನಡು ಮಧ್ಯೆ ಮಲಗಿದ್ದ
ಬಾಧ್ಯತೆಗೆ ಕಟ್ಟು ಬಿದ್ದಯೊ ಮಾನ್ಯತೆಗಾಗಿ
ಚರಮರಾಗವನ್ನು ಗುನುಗಿ ಹೋಗಿ ಬಿಟ್ಟಯಾ ಗುರುವೇ.

============================.

ಪರಿಚಯ:

ಕಳೆದ ಇಪ್ಪತ್ತೇಳು ವರುಷದಿಂದ ದಲಿತ ಚಳುವಳಿ ಹಾಗೂ ಅಲೆಮಾರಿ & ಅರೆ ಅಲೆಮಾರಿ ಮತ್ತು ಕೊಳಚೆ ನಿವಾಸಿಗಳ ಹಕ್ಕುಗಳ ಪರ ಕೆ ಕೆ ಎನ್ ಎಸ್ ಸಹಿತ ಅನೇಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತ ಹಾಗೂ ಜಾತಿ ಸಮನ್ವಯಕ್ಕಾಗಿ ಸಾಮರಸ್ಯ ವೇದಿಕೆಯಲ್ಲಿ ಪಾಲ್ಗೊಂಡಿದ್ದಾರೆ

Leave a Reply

Back To Top