ಮಧುಕುಮಾರ್ ಸಿ.ಹೆಚ್.
ನೂತನ ಪ್ರಜ್ಞಾ ದೀಪಿಕೆ
ನಿರ್ಗಮಿಸು ಸಾಕ್ಷಿಪ್ರಜ್ಞೆಯೆ,
ಅಂತರಂಗದ ದನಿಯೆದುರು ಮಂಡಿಯೂರಿ ನಿಲ್ಲಬೇಡ:
ಯಾರದೋ ಬಹಿರಂಗ ತಲ್ಲಣಕೆ ಮನ ತೆರೆಯಬೇಡ
ತಪ್ಪು-ಒಪ್ಪುಗಳ ಕಂತೆಯನು ಅಡ್ಡಗೋಡೆಯ ಮೇಲಿಟ್ಟು
ಸುಮ್ಮನೆ- ತಣ್ಣಗೆ ಪಲಾಯನ ಮಾಡು
ಪ್ರತಿಕ್ರಿಯೆ – ಸ್ಪಂದನದ ಗೊಡವೆ ನಿನಗೇತಕೆ?
ಭೂತದ ಬೆನ್ನು ಹತ್ತಿ; ವರ್ತಮಾನವ ಕಟ್ಟಿಡು
ಸತ್ಯದರ್ಶನಕೆ ಗಾಂಧಾರಿ- ಧೃತರಾಷ್ಡçರ ಸಾಲಲ್ಲಿ ನಿಲ್ಲು
ನಮ್ಮವ ನಮ್ಮವರೆಂಬ ದಾರಿಯಲಿ ಸದ್ದುಮಾಡದೆ
ನುಸುಳಿ ನುಸುಳಿ ಮುಂದೆ ಸಾಗು.
ಅನುಭವ ಮಂಟಪದ ಮಹಾನುಡಿಗಳನು
ಅನ್ಯರಿಗೆ ಅನ್ವಯಿಸಿ ಗುಣಿಸಿಬಿಡು
ಅಹಮಹಮಿಕೆಯ ಆಪ್ಯಾಯನದೊಡನೆ
ಲೋಕದೆದುರು ಸರ್ವಗುಣ ಸಂಪನ್ನತೆಯ ಪೋಷಾಕು ಧರಿಸಿ
ಯಾರ ಜಪ್ತಿಗೂ ಸಿಗದ ನಗೆಯ ನವಿಲನ್ನೆÃರಿ
ಆ ಭಾವ ಈ ಭಾವ ಎಲ್ಲ ಭಾವಗಳ ಹಿಮ್ಮೆಟ್ಟಿಸಿ
ಸುಮ್ಮನೆ- ತಣ್ಣಗೆ ಪಲಾಯನ ಮಾಡು
ಸುಮ್ಮನೆ- ತಣ್ಣಗೆ ಪಲಾಯನ ಮಾಡು
=======================
ಪರಿಚಯ:
ಕನ್ನಡಭಾಷಾ ಶಿಕ್ಷಕರು-ಬರಹಗಾರರು