Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಬಾಬಾಸಾಹೇಬ ತಾವು ದೇವರಾದರೆ! ಡಿ‌. ಎಮ್.ನದಾಫ್. ಗುಲಾಮಗಿರಿಯನ್ನು ಬುಡ ಸಮೇತ ಕಿತ್ತು ಅಜ್ಞಾನ, ಅವಮಾನಗಳನ್ನು ಧೈರ್ಯದಿಂದ ಒದ್ದು ದಿಕ್ಕಿಲ್ಲದವರಿಗೆ ಧವಳ ಕೀರ್ತಿ ತಂದುಕೊಟ್ಟು ಮಾನವತೆಯನ್ನು ಮರಳಿ ಸ್ಥಾಪಿಸಿದ ಅಂಬೇಡ್ಕರ್ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ಯಜ್ಞ-ಯಾಗ ಪ್ರಯಾಗಗಳನ್ನೆಲ್ಲ ಪ್ರಜ್ಞೆ, ಕರುಣೆ ಶೀಲದಲ್ಲಿ ಕಂಡವನೇ ಸ್ವರ್ಗ,ಮುಕ್ತಿ,ಬಂಧನಗಳನ್ನೆಲ್ಲ ಜ್ಞಾನ,ಸಮಾನತೆ,ಸೇವೆಯಲ್ಲಿ ಮಿಂದವನೇ ಮತ್ತೆ ನೀ ದೇವರಾದಾಗ ಬಾಯಿಗೆ ಉಗುಳುಬಟ್ಟಲು,ಬಾರಿಗೆ ನೆನಪಾಗುತ್ತವೆ. ಶಾಸ್ತ್ರ, ಪುರಾಣ ಆಗಮಗಳಿಗೆ ಬೀಗ ಹಾಕಿ ಶತಶತಮಾನಗಳ “ಕರ್ಮಫಲ”ಗಳ ನೊಗ ಕಿತ್ತು ಹಾಕಿ ಪಟ್ಟ ಭದ್ರರಿಗೆ ಬೆಟ್ಟದಂಥ ಸವಾಲಾದವನೇ ನೀ ದೇವರಾಗಬೇಡ […]

ಕಾವ್ಯಯಾನ

ದಲಿತ ಚೇತನ ಮನುಶ್ರೀ ಸಿದ್ದಾಪುರ ಓ ದಲಿತರ ಮಹಾಚೇತನವೇ ಇಗೋ ನಿನಗೆನ್ನಯ ನಮನ ಕಷ್ಟ-ಕಾರ್ಪಣ್ಯಗಳ ಬಳ್ಳಿಯಲಿ ಅರಳಿ ನಗುವ ಚೆಲ್ಲಿದೆ ಗುಲಾಬಿ ಯಂತೆ. ನರನಾಡಿಗಳ ಬತ್ತಿಯಾಗಿ ತಾನುರಿದು ಸುತ್ತಲೂ ಜ್ಞಾನದ ಬೆಳಕು ಹರಡಿದೆ. ಶೋಷಿತರ ದನಿಗೆ ಮೂಕನಾಯಕನಾಗಿ ಸೆಟೆದು ನಿಂತೆ ದೀನ ದಲಿತರ ಬದುಕಿನ ಉದ್ದಾರಕೆ. ಕಗ್ಗಲ್ಲಿನಲಿ ಮೂಡಿದೆ ಉಜ್ವಲ ಮೂರ್ತಿಯಾಗಿ ಕೂಗಿ ಕರೆದು ತೋರಿಸಿದೆ ಮಹಾಮನೆಯ ಬಿರುಕನು ಶಿಕ್ಷಣ ಸಂಘಟನೆ ಹೋರಾಟದ ತ್ರಿಪಟಿಕ ಸೂತ್ರ ದಲಿತರ ಬದುಕಿನ ಪಾವನದಿ ಸಾಗಿಬಂದ ಮಹಾಪಾತ್ರ. ಹೊನ್ನ ಚರಿತೆಯ ಮಹಾಪುರುಷರಲಿ […]

ಕಾವ್ಯಯಾನ

ಅಂಬೇಡ್ಕರ್ ಸ್ವಗತ ಮಧುಕುಮಾರ ಸಿ ಎಚ್ ಯಾವುದು ಆಗಬಾರದೆಂದು ನಾ ಎಣಿಸಿದೆನೋ ಅದು ಆಗಿಯೇ ತೀರಿದೆ ಅದಕ್ಕಾಗಿ ವಿಷಾದಿಸುತ್ತೇನೆ. ವ್ಯಕ್ತಿಪೂಜೆ ಬೇಡವೆಂದ ಮಾತು ಹಳ್ಳ ಹಿಡಿದು ಇಲ್ಲಿ ಈ ದಿನ ಪ್ರತಿಮೆಗೆ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಅಭಿಮಾನ ತೋರುವ ಆಚರಣೆ ವಿಜೃಂಭಣೆಯಿಂದಲೇ ನಡೆದಿದೆ. ನಾಲ್ಕು ತಿಂಗಳು ಕಳೆದ ಬಳಿಕ ಅಲ್ಲಲ್ಲಿ ‘ಗಣೇಶನ’ ಕೂರಿಸಿ ಮತ್ತದೇ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಕುಡಿದು ಕುಣಿದು ಕುಪ್ಪಳಿಸುವುದು ತಪ್ಪದೇ ನಡೆಯುವುದಿದೆ. ಎಡ-ಬಲ ಎರಡೆರಡು ಹೋಳಾಗಿ ಒಳಗೊಳಗೊಂದು […]

ಕಾವ್ಯಯಾನ

ಬಾಬಾರವರ ನೆನಪಲ್ಲಿ ಹೆಚ್ ರಾಠೋಡ ಬಾಬಾ ನಿನ್ನ ನೆರಳಿನಲ್ಲಿಭರತಖಂಡ ನಡೆದಿದೆ ಶ್ರೇಷ್ಠ ಭಾರತದೇಶ ಎಂಬ ಹೆಗ್ಗಳಿಕೆಯು ಪಡೆದಿದೆ ಭರತ ಭೂಮಿ ನಿತ್ಯ ನಿನ್ನ ನೆನೆದು ಹೆಜ್ಜೆ ಇಡುತ್ತಿದೆ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಧನ್ಯ ಸಾರ್ಥಕತೆ ಮೆರೆದಿದೆ ನೀನುಹಾಕಿಕೊಟ್ಟ ದಾರಿಯಲ್ಲೇ ಇಂದು ದೇಶ ಸಾಗಿದೆ ನಿನ್ನ ಜ್ಞಾನ ಪಾಂಡಿತ್ಯಕ್ಕೆ ವಿಶ್ವವೇ ತಲೆದೂಗಿದೆ ಸಮಾನತೆಯ ಭಾವದಲ್ಲಿ ಸಂವಿಧಾನ ರಚಿಸಿದೆ ಶ್ರೇಷ್ಠ ಸಂವಿಧಾನ ರಚಿಸಿದ ಶಿಲ್ಪಿ ಎಂದೆನಿಸಿದೆ ಭಾರತೀಯರ ಎದೆಯಲ್ಲಿ ನಿನ್ನ ಪ್ರತಿಮೆ ನಿಂತಿದೆ ಅಂಬೇಡ್ಕರ್ ಎಂಬ ನಾಮ ಅಜರಾಮರವಾಗಿದೆ ಭೀಮನೆಂಬ […]

ಕಾವ್ಯಯಾನ

ಬಡವರ ಆಕರ ರಾಹು ಅಲಂದಾರ ಓ ಬಡವರ ಆಕಾರ ದೀನ ದಲಿತರ ಸಾಹುಕಾರ ಜಗಜ್ಯೋತಿ ಅಂಬೇಡ್ಕರ್ ಹಾಕುವೆ ನಿಮಗೆ ನಮಸ್ಕಾರ ಬಡವರ ಉತ್ತರಕ್ಕಾಗಿ ದುಡಿದೆ ದೀನ ದಲಿತರ ಹಿತಕ್ಕಾಗಿ ನಡೆದೆ ಸಮಾನತೆಯನ್ನೇ ನುಡಿದೆ ಜನತೆಯ ಏಳಿಗೆಗಾಗಿ ಮಡಿದೆ ರಚಿಸಿದೆ ನೀ ಸಂವಿಧಾನ ಆಯಿತು ಸರ್ವರಿಗೂ ಅನುದಾನ ಕನಸಿಟ್ಟೆ ನೀ ಎಲ್ಲರಲ್ಲೂ ಸಮಾನ ನಮಗೆಲ್ಲಾ ನೀ ಆಶಾಕಿರಣ ಉಳಿದೆ ಎಲ್ಲರ ಮನದಲ್ಲಿ ಸಮಾನತೆಯನ್ನೋ ಬೆಳಕು ಚೆಲ್ಲಿ ನೆನಪಿಸುವರು ಜನತೆ ಬಾಳಲ್ಲಿ ಹುಟ್ಟಿ ಬಾ ಇನ್ನೊಮ್ಮೆ ಜಗದಲ್ಲಿ **********

ಕಾವ್ಯಯಾನ

ನನ್ನದಲ್ಲ ಬಿಡು ನೀ.ಶ್ರೀಶೈಲ ಹುಲ್ಲೂರು ಭಾರವಾದ ಹೆಜ್ಜೆಗಳಿಗೆ ಗೆಜ್ಜೆ ಏತಕೋ ನೊಂದುಬೆಂದ ಜೀವಕೀಗ ಅಂದವೇತಕೋ? ಕೋಪ ತಾಪ ಎಲ್ಲ ಬಿಡು ರೋಷವೇತಕೋ ನಮ್ಮ ಹಾಗೆ ಪರರ ತಿಳಿ ವಿರಸವೇತಕೋ? ನಮ್ಮ ನಡುವೆ ಕೊಳ್ಳಿ ಇಡುವ ಸುಳ್ಳು ಏತಕೋ ಅರಿತು ಬೆರೆವ ಮನಕೆ ಇರಿತ ದುರಿತವೇತಕೋ? ಅಳುವಿನಲೇ ನಲಿವ ಬದುಕು ಚಿಂತೆ ಏತಕೋ ನಾಕವಿಲ್ಲಿ ನರಕವಿಲ್ಲಿ ಕೊರಗು ಏತಕೋ? ನಾನು ನನದು ಎನುವ ಜನುಮ ಇನ್ನು ಏತಕೋ ಅವನ ಜೀವ ಅವನ ಕಾಯ ನನಗೆ ಏತಕೋ? *******

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಾವೆಲ್ಲ ಕಂದಿಲ ಮಂದತೆಯಲಿ ಹೊಸ ಕನಸುಗಳ ಕಂಡಿರುವೆವು ಕತ್ತಲ ಕೂಪದಿಂದ ಹೊರಬರಲು ಕಂದಿಲು ಹಿಡಿದು ಬಂದಿರುವೆವು ನಾಳೆಗಳು ನಮಗೂ ಬರಬಹುದೆಂಬ ಹೊಸ ಆಸೆಯ ಹೊತ್ತು ಬದುಕು ಬೆಳಕಿನಾಟದಲಿ ಕಳೆದು ಹೋದ ದಿನಗಳ ನೊಂದಿರುವೆವು ಮರೆಯಲಾಗದು ಹಚ್ಚಿಟ್ಟ ಕಂದಿಲು ಆರುವ ಮುನ್ನ ಉಂಡ ದಿನಗಳ ಎಣ್ಣೆ ಮುಗಿದಿತೆಂಬ ಭಯದಿಂದ ದಿನವು ನೊಂದ್ದಿದ್ದು ಕಂಡಿರುವೆವು ಬಡತನ ಸಿರಿತನ ಹಂಗುಗಳಿಲ್ಲದ ಕಂದಿಲು ಕತ್ತಲೆಯ ಕಳೆದಿದೆ ಮುಸ್ಸಂಜೆಯ ಗುಡಿಸಲು ಅರಮನೆಗಳಲಿ ಚೆಲ್ಲುವುದ ನೋಡಿರುವೆವು ಭರವಸೆಯೊಂದಿಗೆ ಕರಿ ಕತ್ತಲೆಯ ಕಳೆದು […]

ಕಾವ್ಯಯಾನ

ಒಂದಲ್ಲ—— ಎರಡು ಸೌಜನ್ಯ ದತ್ತರಾಜ ಹೇಳುತ್ತಾರೆಲ್ಲರೂ ನಾನು ನೀನು ಒಂದೇ ಎಂದು ಹೌದೆನಿಸುತ್ತದೆ ನೋಡಲು ಎದುರಿಗೆ ಇಬ್ಬರಿಗೂ ಇದೆ ಎರಡು ಕಣ್ಣು’ ಒಂದು ಮೂಗು ಒಂದು ಬಾಯಿ ಆದರೆ ಬಾಯೊಳಗಿನ ಹಲ್ಲುಗಳ ಲೆಕ್ಕ ಸಿಗುತ್ತಿಲ್ಲ ಮೆದುಳೊಳಗಿನ ಹುಳುಕುಗಳದ್ದು ಸಹ. ಈಗ ಹೇಗೆ ಹೇಳುವುದು ಮತ್ತೆ ಮತ್ತೆ ನಾನು ನೀನು ಒಂದೇ ಎಂದು!? ನಾನು ನೀನೂ ಒಂದೇ ಎನ್ನುತ್ತಲೇ ಇಬ್ಬರೂ ಒಂದಾಗಿ ಎರಡಾದವರು ನಾವು!…. ಇಬ್ಬರೂ ಒಂದಾಗಿದ್ದಾಗ ಸುತ್ತಲಿನವರೆಲ್ಲಾ ಹೇಳಿದರು ಇಬ್ಬರೂ ಒಂದಲ್ಲ ಬೇರೆ ಬೇರೆ ಎಂದರು ಈಗ […]

ಕಾವ್ಯಯಾನ

ಬದಲಾಗದ ಕ್ಷಣಗಳು… ಶಾಲಿನಿ ಆರ್. ಬದಲಾಗದ ಕ್ಷಣಗಳು, ನೀ’ ಬಂದು ಹೋದ ಘಳಿಗೆಗಳು, ಅದೇ ಚಳಿಗಾಳಿಯ ಇರುಳುಗಳು, ಚಂದ್ರಿಕೆಯ ಸುರಿವ ಬೆಳದಿಂಗಳು, ನಿನ್ನರಸುವ ಕಣ್ಣರೆಪ್ಪೆಗಳು, ಹ್ಞಾಂ, ಕಣ್ಣಂಚಿನಾ ಕೊನೆಯಲಿ ಕಂಡು ಕಾಣದ್ಹಾಂಗೆ ಜಿನುಗಿದ ಹನಿಗಳು, ಮತ್ತೇನಿಲ್ಲ,! ಮೌನದುಯ್ಯಾಲೆಯಲಿ ಬಿಗಿದ ಕೊರಳು, ಒಣನಗೆ , ದಾಹ! ಅಷ್ಟೇ, ಸಂಜೆಯ ಚಳಿಗಾಳಿಯಿರುಳಲಿ ನೀ ನಡೆದ ದಾರಿಯುದ್ದಕ್ಕೂ ಮಂಜುಮುಸುಕಿದ ಧೂಳ ಕಣಗಳು, ಮನದಾಳದಲ್ಲಿ ಅಲ್ಲ, ಮತ್ತೆ! ಯಾವುದು ಬದಲಾಗಿಲ್ಲ ನೀ ಬಂದು ಹೋದ ಘಳಿಗೆಗಳು, ಅದೇ ಚಳಿಯ ಇರುಳುಗಳು, ಚಂದ್ರಿಕೆಯ ಸುರಿವ […]

ಕಾವ್ಯಯಾನ

ಪ್ರೀತಿಯ ಗೆಳೆಯರೇ ಮೂಗಪ್ಪ ಗಾಳೇರ ಪ್ರೀತಿಯ ಗೆಳೆಯರೇ……. ನಿಮಗೊಂದು ಕತೆ ಹೇಳಬೇಕೆಂದಿರುವೆ ಎರೆಮಣ್ಣ ಕರಿ ಚೆಲುವು ಸುಳಿಗಾಳಿಯ ಅಲೆಮಾರಿಯ ನಡಿಗೆ ಬೈಕೊಂಡು ಹುರ್ಕೊಂಡು ಸರಿಯಾಗಿ ಕೇಳಿ ನಾ ಹೇಳುವ ಕಥೆಯಾ……..! ಪ್ರೀತಿಯ ಗೆಳೆಯರೇ……. ನಿಮಗೊಂದು ಪತ್ರ ಬರೆಯುವೆ ನಿಟ್ಟುಸಿರು ಬಿಡದೆ ಬಿಟ್ಟ ಕಣ್ಣುಗಳ ಮುಚ್ಚದೆ ಓದಿ ಅಲ್ಲಲ್ಲಿ ಹುಡುಕಿ ತಡಕಿ ಭಯಬಿದ್ದ ಮನಸ್ಸುಗಳನ್ನು ಪತ್ರದಲ್ಲಿ ಬಚ್ಚಿಟ್ಟಿರುವೆ……..! ಪ್ರೀತಿಯ ಗೆಳೆಯರೇ…… ನಿಮಗೊಂದು ಗುಟ್ಟು ಹೇಳಬೇಕೆಂದಿರುವೆ ಬಾರದ ದಿನಗಳಲ್ಲಿ ಕಳೆದ ಕಂಬನಿಯ ಕನಸುಗಳು ಚಿರತೆ ನಡಿಗೆ ಕದ್ದ ಪೂರ್ವಜರ ಉಸಿರು […]

Back To Top