ಕಾವ್ಯಯಾನ

ಬಾಬಾರವರ ನೆನಪಲ್ಲಿ

Bhimrao Ramji Ambedkar | Columbia Global Centers

ಹೆಚ್ ರಾಠೋಡ

ಬಾಬಾ ನಿನ್ನ ನೆರಳಿನಲ್ಲಿಭರತಖಂಡ ನಡೆದಿದೆ
ಶ್ರೇಷ್ಠ ಭಾರತದೇಶ ಎಂಬ ಹೆಗ್ಗಳಿಕೆಯು ಪಡೆದಿದೆ


ಭರತ ಭೂಮಿ ನಿತ್ಯ ನಿನ್ನ ನೆನೆದು ಹೆಜ್ಜೆ ಇಡುತ್ತಿದೆ
ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಧನ್ಯ ಸಾರ್ಥಕತೆ ಮೆರೆದಿದೆ

ನೀನುಹಾಕಿಕೊಟ್ಟ ದಾರಿಯಲ್ಲೇ ಇಂದು ದೇಶ ಸಾಗಿದೆ
ನಿನ್ನ ಜ್ಞಾನ ಪಾಂಡಿತ್ಯಕ್ಕೆ ವಿಶ್ವವೇ ತಲೆದೂಗಿದೆ

ಸಮಾನತೆಯ ಭಾವದಲ್ಲಿ ಸಂವಿಧಾನ ರಚಿಸಿದೆ
ಶ್ರೇಷ್ಠ ಸಂವಿಧಾನ ರಚಿಸಿದ ಶಿಲ್ಪಿ ಎಂದೆನಿಸಿದೆ

ಭಾರತೀಯರ ಎದೆಯಲ್ಲಿ ನಿನ್ನ ಪ್ರತಿಮೆ ನಿಂತಿದೆ
ಅಂಬೇಡ್ಕರ್ ಎಂಬ ನಾಮ ಅಜರಾಮರವಾಗಿದೆ

ಭೀಮನೆಂಬ ನಾಮ ಸ್ಮರಣೆ ನಾಲಿಗೆಯಲಿನಲಿತಿದೆ
ದೀನ ದಲಿತರುಳವಿಗಾಗಿ ಕಾನೂನು ರೂಪ ನೀಡಿದೆ

ಹಲವು ದೇಶ-ಕೋಶ ಓದಿ ಜ್ಞಾನ ಕಣಜ ಎನಿಸಿದೆ
ಲೆಕ್ಕವಿಲ್ಲದಷ್ಟು ಪದವಿ ಪುರಸ್ಕಾರ ಗಳಿಸಿದೆ

ತೋರು ಬೆರಳು ತೋರಿ ಪ್ರತಿಮೆ ಕೈ ಎತ್ತಿ ನಿಂತಿದೆ
ತಮ್ಮ ಪಡೆದ ಭರತಮಾತೆ ವಿಶ್ವಮಾತೆಯ ಎನಿಸಿದೆ

ಪುಟಕ್ಕಿಟ್ಟ ಬಂಗಾರವಾಗಿ ಭಾರತ ರತ್ನ ಎನಿಸಿದೆ
ಸದಾ ಜೈ ಭೀಮ ಎಂಬ ಘೋಷವಾಕ್ಯ ಮೊಳಗಿದೆ

********

Leave a Reply

Back To Top