ಒಂದಲ್ಲ—— ಎರಡು
ಸೌಜನ್ಯ ದತ್ತರಾಜ
ಹೇಳುತ್ತಾರೆಲ್ಲರೂ ನಾನು ನೀನು ಒಂದೇ ಎಂದು
ಹೌದೆನಿಸುತ್ತದೆ ನೋಡಲು ಎದುರಿಗೆ
ಇಬ್ಬರಿಗೂ ಇದೆ ಎರಡು ಕಣ್ಣು’
ಒಂದು ಮೂಗು ಒಂದು ಬಾಯಿ
ಆದರೆ ಬಾಯೊಳಗಿನ ಹಲ್ಲುಗಳ ಲೆಕ್ಕ ಸಿಗುತ್ತಿಲ್ಲ
ಮೆದುಳೊಳಗಿನ ಹುಳುಕುಗಳದ್ದು ಸಹ.
ಈಗ ಹೇಗೆ ಹೇಳುವುದು ಮತ್ತೆ ಮತ್ತೆ
ನಾನು ನೀನು ಒಂದೇ ಎಂದು!?
ನಾನು ನೀನೂ ಒಂದೇ ಎನ್ನುತ್ತಲೇ
ಇಬ್ಬರೂ ಒಂದಾಗಿ ಎರಡಾದವರು ನಾವು!….
ಇಬ್ಬರೂ ಒಂದಾಗಿದ್ದಾಗ ಸುತ್ತಲಿನವರೆಲ್ಲಾ ಹೇಳಿದರು
ಇಬ್ಬರೂ ಒಂದಲ್ಲ ಬೇರೆ ಬೇರೆ ಎಂದರು
ಈಗ ಹೇಳುತ್ತಿದ್ದಾರೆ ಬೇರೆ ಬೇರೆಯಾದರೂ
ನೀವಿಬ್ಬರೂ ಒಂದೇ ಎಂದು.
ನಾನು ಒಪ್ಪಿಸಲಾರೆ ಜಗದ ಜನತೆಯನ್ನು
ಸಹಿಸಲಾರೆ ನಿನ್ನೊಳಗಿನ ನಿರ್ದಯತೆಯನ್ನು
ಈಗ ಹೇಳುತ್ತಿದ್ದೇನೆ ಕೂಗಿ ಕೂಗಿ ಕೇಳು
ಜಗದ ಹಂಗು ತೊರೆದು’ ಬಿಗುಮಾನವನ್ನು ಬಗೆದು
ನಾನು ನೀನು ಎಂದೆಂದಿಗೂ ಒಂದಲ್ಲ ಎರಡೆಂದು
*****
Truth beautifully opened
Epitome of reading between the lines. Well written.
ಮನಸ್ಸಿನಾಳದಲ್ಲಿ ಹೂಳಲಾಗದ ತಾಕಲಾಟಗಳು. ಗಡಿಯಾರದ ಟಿಕ್ ಟಿಕ್ ಶಬ್ದದ ಹಾಗೆ. ಒಮ್ಮೊಮ್ಮೆ ತಲೆ ಸಾವಿರ ಹೋಳಾಗುವಷ್ಟು ಅಸಹನೀಯ..
ಮನ್ವಂತರದ ಸಾಲುಗಳು ನೆನಪಾಗುತ್ತವೆ…
“ಕಣ್ಣೀರೆ ಕಡಲಾಗಿ ಭಾವಗಳೋ ಬರಡಾಗಿ
ಮನದ ಮರಳ ತುಂಬಾ ನೋವಿನಲೆಯ ಬಿಂಬ
ನೀಡು ಬಾ ಮನ್ವಂತರವೇ ಭಾವಕೆ ಉಸಿರನ್ನು
ಬರಡು ಹೃದಯಗಳಿಗೆ ಜೀವದ ಹಸಿರನ್ನು”