ಗಝಲ್
ಮರುಳಸಿದ್ದಪ್ಪ ದೊಡ್ಡಮನಿ
ನಾವೆಲ್ಲ ಕಂದಿಲ ಮಂದತೆಯಲಿ ಹೊಸ ಕನಸುಗಳ ಕಂಡಿರುವೆವು
ಕತ್ತಲ ಕೂಪದಿಂದ ಹೊರಬರಲು ಕಂದಿಲು ಹಿಡಿದು ಬಂದಿರುವೆವು
ನಾಳೆಗಳು ನಮಗೂ ಬರಬಹುದೆಂಬ ಹೊಸ ಆಸೆಯ ಹೊತ್ತು
ಬದುಕು ಬೆಳಕಿನಾಟದಲಿ ಕಳೆದು ಹೋದ ದಿನಗಳ ನೊಂದಿರುವೆವು
ಮರೆಯಲಾಗದು ಹಚ್ಚಿಟ್ಟ ಕಂದಿಲು ಆರುವ ಮುನ್ನ ಉಂಡ ದಿನಗಳ
ಎಣ್ಣೆ ಮುಗಿದಿತೆಂಬ ಭಯದಿಂದ ದಿನವು ನೊಂದ್ದಿದ್ದು ಕಂಡಿರುವೆವು
ಬಡತನ ಸಿರಿತನ ಹಂಗುಗಳಿಲ್ಲದ ಕಂದಿಲು ಕತ್ತಲೆಯ ಕಳೆದಿದೆ
ಮುಸ್ಸಂಜೆಯ ಗುಡಿಸಲು ಅರಮನೆಗಳಲಿ ಚೆಲ್ಲುವುದ ನೋಡಿರುವೆವು
ಭರವಸೆಯೊಂದಿಗೆ ಕರಿ ಕತ್ತಲೆಯ ಕಳೆದು ಬಿಡುವೇಯಾ ಸಾಕಿ
ನಿನ್ನೊಂದಿಗೆ ನಮ್ಮ ಸಂಭಂಧ ಉಸಿರಿರುವ ತನಕ ಇರುವುದೆಂದು ನಂಬಿರುವೆವು
******