Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲ ಕೊರಳಿಗೆ ತಾಳಿಯನೂ ಬಿಗಿಯಲಿಲ್ಲ ಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲ ಮದುವೆಯ ಹಂದರವು ಹರಿವಿರಲಿಲ್ಲ ಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆ ಹೆಣ್ಣೆಂದು ಅವಕಾಶವಾದಿಯಾಗದೆ ಅಲ್ಲಮರ ಮಂಟಪದ ಜ್ಯೋತಿಯಾದೆ ಉಡತಡಿ ಉಡುಗೊರೆಯಾಗಿ ಉದಯಿಸಿದೆ ಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನ ಅಲ್ಲಮರ ಸಮ ಸಂವೇದನಶೀಲಳು ಅನುಭಾವಿಯುಕ್ತ ಮೇರು ಸಾಹಿತಿ ವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿ ಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆ ಮನವು […]

ಕಾವ್ಯಯಾನ

ಅಪ್ಪಣ್ಣನಿಗೊಂದು ಮನವಿ ಎ.ಎಸ್. ಮಕಾನದಾರ ಗದಗ ಅಪ್ಪಣ್ಣ ಎಷ್ಟೊಂದು ಕತ್ತಿಗಳು ಸೇರಿಕೊಂಡಿವೆ ನಿನ್ನ ಹಸಬಿಯೊಳು ಆ ಕತ್ತಿಗಳೇ ಮಾಡಿದ ಕ್ಷೌರ ಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದು ಆ ಜುಟ್ಟು ಬ್ರಾಹ್ಮಣನನದೆಂದು ಆ ಕೆಳದಾಡಿ ಸಿಖ್ಖನದೆಂದು ಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿ ಕೇಶ ಬಿಟ್ಟರೊಂದು ಜಾತಿ ಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿ ಎಲ್ಲವನು ಬೋಳಿಸಿಟ್ಟು ಹೊಸದೊಂದು ವ್ಯವಸ್ಥೆ ನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನು ಅಣ್ಣ ಅಕ್ಕ ಅಲ್ಲಮರೊಂದಿಗೆ ಅನುಭವ ಮಂಟಪದ […]

ಕಾವ್ಯಯಾನ

ಗಝಲ್ ಕಾಫಿ಼ಯಾನಾ…………. ಎ.ಹೇಮಗಂಗಾ ಮಧುಪಾನದ ನಶೆಯಲ್ಲಿ ಭೂತವನ್ನು ಮರೆಯಬೇಕಿದೆ ಬೆಂಬಿಡದೇ ಕಾಡುವ ಕಹಿಕ್ಷಣಗಳಿಗೆ ಗೋರಿ ಕಟ್ಟಬೇಕಿದೆ ಮರೆಯಲಾಗದ ನೋವ ಮರೆವುದಾದರೂ ಹೇಗೆ ಸಾಕಿ? ಅಂತರಂಗದ ಬಿಕ್ಕುಗಳನ್ನು ಅಲ್ಲಲ್ಲಿಯೇ ಹೂಳಬೇಕಿದೆ ನೋವು, ಯಾತನೆಗಳು ಹೊಸದಲ್ಲ ಎಲ್ಲ ಅವಳಿತ್ತ ಕೊಡುಗೆ ಅವಳಿಗೆಂದೇ ಪ್ರತಿಕ್ಷಣ ಮಿಡಿದ ಧಮನಿಗಳ ಸಂತೈಸಬೇಕಿದೆ ಬಾಳು ಪಾಳು ಬಿದ್ದ ಮನೆಯಂತೆ ಭಣಗುಡುತ್ತಲೇ ಇದೆ ಸಾಕಿ ಅವಳನ್ನೇ ಬಯಸುವ ಹುಚ್ಚುಮತಿಗೆ ಅರಿವಳಿಕೆ ನೀಡಬೇಕಿದೆ ಗರಿ ಚಾಮರಗಳು ತೊನೆದಂತೆ ಕಂಡಿವೆ ಮಧುಪಾತ್ರೆಯಲ್ಲಿ ಭ್ರಮೆಯನ್ನೇ ನಿಜವೆಂದು ನಂಬಿದ ಮನಕೆ ತಿಳಿಹೇಳಬೇಕಿದೆ ಕಾಣದ […]

ಕಾವ್ಯಯಾನ

ಗಝಲ್ ಉಮೇಶ ಮುನವಳ್ಳಿ ನೀನು ಬಯಸಿದಂತೆ ಬದಲಾಗಿರುವೆ, ಅದಲುಬದಲಾದದ್ದು ನಿನಗೆ ನೆಮ್ಮದಿಯೇ? ನೀನು ಅಂದುಕೊಂಡಂತೆ ಸಾಕಾರಗೊಂಡಿರುವೆ, ಗುರಿ ನೆರವೇರಿದ್ದು ನಿನಗೆ ನೆಮ್ಮದಿಯೇ? “ನಿನ್ನ ಜೊತೆಗಿನ ಕೆಲಸ ಮುಗಿದು ಹಳೆಮಾತಾಗಿದೆ ಮತ್ತೆ ಪೀಡಿಸದಿರು” ಇದು ನಿನ್ನ ಕೋರಿಕೆ ದುಃಖ ಉಮ್ಮಳಿಸಿ ಕತ್ತು ಹಿಸುಕುತಿದೆ, ಹನಿಯಾಗಿಸದೆ ನಕ್ಕಿದ್ದು ನಿನಗೆ ನೆಮ್ಮದಿಯೇ? “ಪ್ರೀತಿ ಎಂದರೆ ಇದು ಮಾರುಕಟ್ಟೆಯಲ್ಲ, ನನ್ನಲ್ಲಿ ನಿನಗೆ ನಿರೀಕ್ಷೆ ಬೇಡ” ಇದು ನಿನ್ನ ಅಳಲು ಪ್ರೀತಿಯಲಿ ಒಂದಿಷ್ಟು ಸಲುಗೆ ಬೇಡವೆ, ನಾನು ಪರಿಷ್ಕರಣಗೊಂಡಿದ್ದು ನಿನಗೆ ನೆಮ್ಮದಿಯೇ? “ಮಾತು ಮಿತವಾಗಿರಲಿ […]

ಕಾವ್ಯಯಾನ

ಜುಲ್ ಕಾಫಿ಼ಯಾ ಗಜ಼ಲ್ ಎ.ಹೇಮಗಂಗಾ ನೀ ಒಪ್ಪಿಗೆಯ ನಗೆ ಬೀರುವವರೆಗೂ ಮನದ ಕಳವಳಕೆ ಕೊನೆಯಿಲ್ಲ ನೀ ಅಪ್ಪುಗೆಯ ಬಿಸಿ ನೀಡುವವರೆಗೂ ಹೃದಯದ ತಳಮಳಕೆ ಕೊನೆಯಿಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಮಳೆ ಸುರಿದು ಇಂದ್ರಚಾಪ ಮೂಡಿತೇಕೆ ? ನೀ ಬರಡು ಬಾಳಿಗೆ ಹಸಿರಾಗುವವರೆಗೂ ಅಂತರಂಗದ ಹೊಯ್ದಾಟಕೆ ಕೊನೆಯಿಲ್ಲ ಗೋರಿ ಸೇರಿದ ಕನಸುಗಳು ಬಿಡದೇ ಬೇತಾಳನಂತೆ ಹೆಗಲೇರಿವೆ ನೀ ಹೊಸ ಬಯಕೆಗಳ ಬಿತ್ತುವವರೆಗೂ ಅಂತರಾಳದ ನರಳಾಟಕೆ ಕೊನೆಯಿಲ್ಲ ಅಗಲಿಕೆಯ ನೋವೇ ದಾವಾನಲವಾಗಿ ಉಸಿರು ಬಿಸುಸುಯ್ಯುತಿದೆ ನೀ ಸಿಹಿಚುಂಬನದಿ ಕಸುವು ತುಂಬುವವರೆಗೂ ಜೀವದ […]

ಕಾವ್ಯಯಾನ

ಹೃದಯ ಕೇಳದು ವೀಣಾ ರಮೇಶ್ ತಿಳಿಯದೆ ಕಳೆದು ಹೋಗಿದೆ ಹೃದಯ ಮನಸ್ಸಿಗೂ ಸಿಗದು ಕೇಳದು ಕರೆಯ, ಪ್ರೀತಿ, ಹೃದಯಕ್ಕೂ ಅಂಟಿದೆ ಅದೇನು ನಂಟಿದೆ ಗೊತ್ತಿಲ್ಲ ಗೆಳತಿ ಮನಸ್ಸಿಗೂ ಭಾವನೆ ಗಳಿಗೂ ಕದನ ನಡೀತಿದೆ ಸದ್ದಿಲದೆ, ಮುನಿಸು ಬಿಡಲು ಭಾವನೆಗಳ ತಕರಾರು ನೀನು ಒಳಗೆ ಕರೆಯುತ್ತಿಲ್ಲ ಹಿಂತಿರುಗಲು ಮನಸು ಒಪ್ಪುತ್ತಿಲ್ಲ ಒಮ್ಮೆ ನನ್ನ ಹೆಸರು ಕರೆದು ಬಿಡು ನೀನು ಮರತೇ ಬಿಡುವೆ ನಿನ್ನ ನೆನಪುಗಳಿಂದ ಕಟ್ಟಿಹಾಕಿದ ನನ್ನ ನೋವುಗಳನು ನೀನಿಲ್ಲದಿರುವಾಗಲೆ ಭಾವನೆಗಳು ಕರಗುತ್ತಿವೆ, ಕಡಲಿಗೆ ಚುಂಬಿಸುವ ಅಲೆಗಳಲಿ ನೆನಪಾಗುತ್ತಿವೆ […]

ಕಾವ್ಯಯಾನ

ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ!!! ಸರೋಜಾ ಶ್ರೀಕಾಂತ್ ಅಮಾತಿ ಇಬ್ಬನಿಯ ಹನಿಯೊಂದು ಲಜ್ಜೆ ಬಿಟ್ಟು ಗೆಜ್ಜೆನಾದದ ಹೆಜ್ಜೆ ಹೇಗಿಡಲೆಂತಂತೆ!? ಹರಸುತ ಮೋಡಗಳೆಲ್ಲ ಮತ್ತೇ ತುಸು ಕತ್ತಲವ ಹೊತ್ತು ತಂದು ಹಾರೈಸಿದವಂತೆ! ಹಬ್ಬಿದ ಮಬ್ಬನ್ನೇ ನೆವ ಮಾಡಿಕೊಂಡಿಬ್ಬನಿ ಗರಿಕೆಯ ತಬ್ಬಿಕ್ಕೊಂಡಿತಂತೆ! ಅರಸಿ ಬಂದ ಸವಿಗಾಳಿಯು ಸರಸವ ನೋಡಿ ಸುಮ್ಮನೆ ದೂರ ಸರಿಯಿತಂತೆ! ಸ್ಪರ್ಶದುಸಿರು ಹರ್ಷದರಸಿಗೆ ಹೊಸದಿರಿಸ ನೆಪದಿ ಹನಿಹನಿ ನೀರನೇ ಪೋಣಿಸಿ ಸೀರೆಯಾಗಿಸಿತಂತೆ! ನಾಚಿ ಇಬ್ಬನಿ ಮುತ್ತಿಗೆ ಹಾಕಿದೆ ಮುತ್ತೀನಿಂದಲೇ…. ಬಾಚಿ ಅಪ್ಪಿದ ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ….!!! ***********

ಕಾವ್ಯಯಾನ

ಅಗುಳಿಯಿಲ್ಲದ ಕದ ಶಶಿಕಲಾ ವೀ ಹುಡೇದ ಬೀಸುವ ಆಷಾಢ ಗಾಳಿ ಬೀದಿಬೀದಿಯಲಿ ಗಂಡು ನಾಯಿಗಳ ದಂಡ ನಡುವೆ ಒಂದೇ ಒಂದು ಹೆಣ್ಣುನಾಯಿ ಅವಕ್ಕೆ ನಾಚಿಕೆಯಿಲ್ಲ ಎಂದಿರಾ? ಇತ್ತಿತ್ತಲಾಗಿ ನಾಚುವ ಸರದಿ ನಿಮ್ಮದೇ ಯಾಕೆಂದರೆ ಅವುಗಳನೂ ಮೀರಿಸಿದ್ದೀರಿ ನೀವು? ಗದ್ದೆ ಕೆಸರು ಬಯಲು ಹೊಲ ಮನೆ ಗುಡಿಸಲು ಕೊನೆಗೆ ಬಸ್ಸು ರೈಲು ಹೊಟೇಲು ಲಿಫ್ಟು ಹಾಳು ಗೋದಾಮುಗಳು ಎಲ್ಲುಂಟು ಎಲ್ಲಿಲ್ಲ? ಅಪ್ಪನ ಕೂಸಿಗೆ ಮಗಳೇ ತಾಯಿ ಅಣ್ಣ ತಮ್ಮ ಗೆಳೆಯ ಹಳೆಯ ಮಾವ ಭಾವ ಮುದೀಯ ಸರೀಕ ಸಹೋದ್ಯೋಗಿ […]

ಕಾವ್ಯಯಾನ

ನಿಶೆಯನರಿಸಿ ಶಾಲಿನಿ ಆರ್. ನಿಶೆಯರಸಿ ನೇಸರ ಹೊಂಟ್ಯಾನ ನಿಶೆಯರಸಿ ಬಂದಾಳಾ ಸಂತೆಯೊಳಗೆ ಸದ್ದಿಲ್ಲದಂತೆ            ಬದುಕ ಅಡವಿಯಿದು            ಬೆತ್ತಲಾಗಿಹುದಿಲ್ಲಿಮನದ            ಭಾವಗಳು ಗುಟ್ಟುರಟ್ಟಾಗಿ            ಹರಿದಿಹುದಿಲ್ಲಿ ಈ ಹೊತ್ತು ಸರಸ ವಿರಸಗಳ ಸಮ ರಸ ಸಮ್ಮಿಳಿತದ ಭಾವ ಆ ಸುಖದ ನೋವ ಅನುಭವಿಸಿ ಅರಗಿಸಿ ಕನವರಿಸಿ ಮಾನಿನಿ ಸರಸಿ             ಅಂಚಿಲ್ಲದ ಸೆರಗಿಲ್ಲದ             ಸವಿನೆನಪ ಪಾಚಿಯ ಹೊದ್ದು             ಅಂಟಿಯು ಅಂಟದಿಹ ಬಾಳ             ಗದ್ದುಗೆಯಲಿ ನೆಮ್ಮದಿಯ  ನಿದಿರೆಗೆ ಮರುಳಾಗಿ ಮಲಗಿಹಳಿಲ್ಲಿ ಸುಖನಾಶಿನಿ… ******

ಕಾವ್ಯಯಾನ

ಬದುಕಿನ ಬಣ್ಣದಲ್ಲಿ ಅನಾಥ ಪ್ರೀತಿ ವೀಣಾ ರಮೇಶ್ ಪ್ರೀತಿ ಸಿಗದ ಒಂದಷ್ಟು ಮನಸುಗಳು ನಮ್ಮ ನಡುವೆ ಇವೆ ನೀವೇನು ಮಾಡಬೇಕಿಲ್ಲ ವಾತ್ಸಲ್ಯದ ಪ್ರೀತಿಗೆ ಬಣ್ಣ ತುಂಬಿದರೆ ಸಾಕು. ಆ ಮನಸ್ಸಿನೊಳಗೆ ಕನಸು ಕಟ್ಟಿದ ಬಣ್ಣ ಸುಂದರ ಬದುಕಿನ ಬಣ್ಣ ಯಾವ ಕಲ್ಮಶವು ಇಲ್ಲದ ತಿಳಿನೀರಿನ ಬಣ್ಣ. ಪ್ರೀತಿ ಸಿಗದ ,ಹೃದಯ ಭಾರವಾಗಿದೆ ,ಬಿಟ್ಟರೆ ಮನಸು ಹೂವಿನಷ್ಟು ಹಗುರ,ನೀವೇ ಎತ್ತಿ ನೋಡಿ ಅಷ್ಟೇನು ಭಾರವಿಲ್ಲ,ಎದೆಯೊಳಗೆ ನೋವು ತುಂಬಿದ ಭಾರ ವಷ್ಟೇ. | ಆ ಮನಸುಗಳಿಗೆ ನೀವೇ ರಂಗು ತುಂಬಿ […]

Back To Top