ಹೃದಯ ಕೇಳದು

ವೀಣಾ ರಮೇಶ್

ತಿಳಿಯದೆ
ಕಳೆದು ಹೋಗಿದೆ ಹೃದಯ
ಮನಸ್ಸಿಗೂ ಸಿಗದು
ಕೇಳದು ಕರೆಯ,
ಪ್ರೀತಿ, ಹೃದಯಕ್ಕೂ
ಅಂಟಿದೆ
ಅದೇನು ನಂಟಿದೆ
ಗೊತ್ತಿಲ್ಲ ಗೆಳತಿ
ಮನಸ್ಸಿಗೂ
ಭಾವನೆ ಗಳಿಗೂ ಕದನ
ನಡೀತಿದೆ ಸದ್ದಿಲದೆ,
ಮುನಿಸು ಬಿಡಲು
ಭಾವನೆಗಳ ತಕರಾರು
ನೀನು ಒಳಗೆ ಕರೆಯುತ್ತಿಲ್ಲ
ಹಿಂತಿರುಗಲು ಮನಸು
ಒಪ್ಪುತ್ತಿಲ್ಲ
ಒಮ್ಮೆ ನನ್ನ ಹೆಸರು
ಕರೆದು ಬಿಡು ನೀನು
ಮರತೇ ಬಿಡುವೆ
ನಿನ್ನ ನೆನಪುಗಳಿಂದ
ಕಟ್ಟಿಹಾಕಿದ ನನ್ನ ನೋವುಗಳನು
ನೀನಿಲ್ಲದಿರುವಾಗಲೆ ಭಾವನೆಗಳು
ಕರಗುತ್ತಿವೆ,
ಕಡಲಿಗೆ ಚುಂಬಿಸುವ
ಅಲೆಗಳಲಿ
ನೆನಪಾಗುತ್ತಿವೆ
ಯಾಕೋ ಮುತ್ತಿಕ್ಕದ
ನಿನ್ನ ನೆನಪುಗಳು ಸುಮ್ಮನಿವೆ.
ನೀನಿಲ್ಲದಿರುವಾಗಲೆ
ಪೆನ್ನು ಹಾಳೆಗಳು
ಮುಷ್ಕರ ಹೂಡಿವೆ
ನಿಶ್ಚಲ ಕಡಲಿನಲೂ
ಬೋರ್ಗೆರೆವ ನಿನ್ನ
ನೆನಪುಗಳು,
ಅಪ್ಪಳಿಸುವ ಭಾವನೆಗಳು
ನೀನಿಲ್ಲದಿರುವಾಗಲೆ
ಬರಿ ಕವಿತೆಗೆ ಸಾಲಾದೆ
********