Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಹನಿಮೂನ್ ಗಿರೀಶ ಜಕಾಪುರೆ, ಮೈಂದರ್ಗಿ ಹನಿಮೂನ್ ಈ ಬಿಕನಾಶಿ ಚಂದ್ರನಿಗೆ ಬುದ್ಧಿಯಿಲ್ಲ ಸುರಿಯುತ್ತಾನೆ ವಿರಹದ ಅಗ್ನಿಗೆ ತುಪ್ಪ..! ಲಾಲ್‌ಬಾಗ್‌ಗೆ ಹೊರಟಿದ್ದವು  ಎರಡು ಹಕ್ಕಿಗಳು ಹನಿಮೂನ್‌ಗೆಂದು  ಸಮುದ್ರತೀರದ ಕಾಂಕ್ರೀಟ್ ಕಾಡಿನಿಂದ, ಒಂದೇಸಮನೆ ಧಾವಿಸುತ್ತಿತ್ತು ಎದೆಯಲ್ಲಿ ನಿಗಿನಿಗಿ ಕೆಂಡವಿರಿಸಿಕೊಂಡು ಉಸಿರಿನಿಂದ ಬಿಸಿಹೊಗೆ ಚಿಮ್ಮುವ ಉಗಿಬಂಡಿ.., ನಾನೋ ಅಲೆಮಾರಿ, ಹತ್ತಿದೆ ರೈಲು ಅವಳು ನನ್ನ ತೊರೆದುಹೋದ ನಿಲ್ದಾಣದಲಿ ಕಾಲಿಡಲೂ ಅವಕಾಶವಿರದಷ್ಟು ರಶ್ಶು ಆದರೂ ನನಗೆ ರೈಲಿನ ಮೇಲೆ ಏನೋ ಕ್ರಶ್ಶು ಅವರು ಇಬ್ಬರು, ಎರಡು ಬರ್ಥಗಳು ನಾನು ಎಂದಿನಂತೆಯೇ ವೇಟಿಂಗ್ ಲಿಸ್ಟು..! […]

ಕಾವ್ಯಯಾನ

ಮೌನ ಮತ್ತು ಕವಿ ಕೊಟ್ರೇಶ್ ಅರಸಿಕೆರೆ ಅದು ಹಾರಾಡುವ ರೀತಿಗೆ, ರೆಕ್ಕೆಗಳಿವೆ ಎಂಬ ಖುಷಿಗೆ , ಮನ ಸೋತಿದ್ದೆ ಆ ಚಿಟ್ಟೆಗೆ! ಇತ್ತೀಚೆಗೆ….. ಯಾಕೋ ಕಿರಿಕಿರಿ ಎನಿಸಿತು ಭಾರೀ ಶಬ್ದ ಎಂದೆನಿಸಿತು; ಮೌನ ನಾಶಮಾಡುತ್ತಿದೆ ಅನಿಸಿತು ಈಗ ಸರಿಯಾಗಿ ನೋಡಲೆತ್ನಿಸಿದೆ ಚಮಕ್ ಬೆಳಕಿಗೆ ಅದು ಆಕರ್ಷಿತ ಆಗುತ್ತಿತ್ತು! ನೋಡಿದೆ…ಪರಿಶೀಲಿಸಿದೆ…ಅಯ್ಯೋ ಅದು ಏರೋಪ್ಲೇನ್ ಚಿಟ್ಟೆ!! ಮೌನ ಅರಿಯದ ಕವಿಯೊಬ್ಬ ಕವಿಯೇ? ವರ್ತಮಾನಕ್ಕೆ ಸ್ಪಂದಿಸುವ ನೆಪ ಎಷ್ಟೆಲ್ಲಾ ಕೂಳತನ! ಹಡೆದವ್ವನ ಝಾಡಿಸಿ ಒದೆಯುವ ದುಷ್ಟತನ!! ಆಗ…. ಕವಿಯೊಬ್ಬ ಹಾಡಿದನೆಂದರೆ ದೇಶವೇ […]

ಕಾವ್ಯಯಾನ

ಹೆರಳನ್ನೊಮ್ಮೆ ಬಿಚ್ಚಿಬಿಡು ವಿಜಯಶ್ರೀ ಹಾಲಾಡಿ ಆ ಬೆಚ್ಚನೆ ರಾತ್ರಿಗಳಲ್ಲಿಈ ತಣ್ಣನೆ ಹಗಲುಗಳಲ್ಲಿನಿನ್ನ ಪಾದಕ್ಕೆ ತಲೆಯೂರಿಮಲಗಿದ ಬೆಕ್ಕನ್ನೊಮ್ಮೆನೋಡು …. ಕರುಣೆಯ ಕತ್ತಲುಹಣ್ಣುತುಂಬಿದ ಮರಹಗುರ ತುಂಬೆ ಹೂ..ಹೆರಳನ್ನೊಮ್ಮೆ ಬಿಚ್ಚಿಬಿಡು ಸುತ್ತುವ ಭೂಮಿಯನ್ನುನಿಲ್ಲಿಸು ಅಥವಾಮತ್ತಷ್ಟು ವೇಗವಾಗಿಸುತ್ತಿಸುಹೊಸ ಹೆಜ್ಜೆಕಚ್ಚಿಕೊಳ್ಳಬೇಕಿದೆ ನಿಹಾರಿಕೆ ಉಲ್ಕೆಗಳುಸಾಗರ ಸುನಾಮಿಗಳುಅಪ್ಪಳಿಸಲಿಇಲ್ಲವೇಬ್ರಹ್ಮಾಂಡದಾಚೆಕರೆದೊಯ್ಯಲಿ …. ಮಧುಶಾಲೆಗೂ ನನಗೂಸಂಬಂಧವಿಲ್ಲನೋವನ್ನೇ ಬಟ್ಟಲಿಗಿಳಿಸಿಗಟಗಟನ ಕುಡಿಯುತ್ತಿದ್ದೇನೆ ………! *******************

ಕಾವ್ಯಯಾನ

ಕೊಂದು ಕೊಳ್ಳುವೆ ವಿಜಯಶ್ರೀ ಹಾಲಾಡಿ ಕಣ್ಣೀರು ಕೆನ್ನೆಗಿಳಿವಾಗಲೇನಗುತ್ತೇನೆ ಮಣ್ಣ ಘಮಕ್ಕೆ ಸೋತಾಗಅರಳುವುದೇ .. ಕಡಲು ಸೋಕಬೇಕೆಂದಿಲ್ಲಜೀವಕೋಶದೊಳಗಿದೆ ಅಪರಿಚಿತನೆಂದು ಬೀಗಬೇಡಮಾತು ಸುಮ್ಮನೇ ಗೋರಿ ಮೇಲೆ ಹೂ ಅರಳಿದ್ದುಲೋಕರೂಢಿ ಸಾಯುವೆನೆಂದು ಗೋಳಿಡಬೇಡಬೇಕಾದರೆ ಕೊಂದುಕೊಳ್ಳುವೆ  **************************

ಕಾವ್ಯಯಾನ

ಕರಿನೆರಳು ಪ್ಯಾರಿಸುತ ಕರಿನೆರಳು ಕರಿಯ ನೆರಳು ಕಾಡುತಿತ್ತು ರಾತ್ರಿ ಹಗಲಿನಲ್ಲಿ ಹಗಲಿನಲ್ಲಿ ಸುಡು ನೆಲದ ಮೇಲೆ ರಾತ್ರಿಯಲ್ಲಿ ಕಪ್ಪು ನೆಲದಮೇಲೆ ಹೆಜ್ಜೆಗೊಂದು ಹಜ್ಜೆ ಹಾಕಿ ಅಷ್ಟು ಬೈದರೂ ಲಜ್ಜೆ ಹೊಸಕಿ ಇಣುಕುತಿತ್ತು,ಕೆಣಕುತಿತ್ತು ಬೆನ್ನ ಹಿಂದೆ ದೂಡಿದಷ್ಟು ಕಾಡುತ್ತಿತ್ತು ,ಬಾಗಿದಷ್ಟು ಬಳಕುತಿತ್ತು ಎತ್ತ ಹೋದರು ಭೂತದಂತೆ..! ದೇಗುಲಕೂ, ಆಶ್ರಮಕೂ ಬರುತಲಿತ್ತು ಕೇಳುತ್ತಿತ್ತು ಹೇಳುತ್ತಿತ್ತು ದೇವರೆದರು ನಾನು ಏಕೆ ಇವರಿಗೆ ಅಂಟು…? ನನಗೂ ಇವರಿಗೂ ಯಾವ ನಂಟು…? ಜೀವ ಇರುವ ನೀನು ಭಾವ ಮೆರೆವ ನಾನು ಜೀವಕೊಂದು ಜೀವವಿರಲು ನನಗೂ […]

ಕಾವ್ಯಯಾನ

ಬಂದು ಹೋಗು ಡಾ.ಗೋವಿಂದ ಹೆಗಡೆ ಬಾ ಶಂಭು, ಬಾ ಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು! ನಿನ್ನ ಆ ಹಳೆಯ ಹುಲಿಯದೋ ಆನೆಯದೋ ಚರ್ಮ ಹರಿದುಹೋದೀತು! ಹೊಸದು ಸಿಗುವುದು ಸುಲಭವಲ್ಲ ಮಾರಾಯ! ನಮ್ಮ ಮಂಗಮಾಯ ಕಲೆ ನಿನಗೂ ತಿಳಿಯದೇನೋ ಮತ್ತೆ ಅರಣ್ಯ ಇಲಾಖೆಯವರ ಕೈಯಲ್ಲಿ ಸಿಕ್ಕೆಯೋ ನಿನ್ನ ಕತೆ -ಅಷ್ಟೇ! ಆ ಕೊರಳ ಹಾವು ಆ ಜಟೆ ಅದಕ್ಕೊಂದು ಚಂದ್ರ ಸಾಲದ್ದಕ್ಕೆ ಗೌರಿ! ಕೈಯ ಭಿಕ್ಷಾಪಾತ್ರೆ ತ್ರಿಶೂಲ ಕಪಾಲ ಮಾಲೆ ಯಾಕಯ್ಯ ನಿನಗೆ ಈ ಯುಗದಲ್ಲೂ ಅದೆಲ್ಲ?! ನರಮನುಷ್ಯರಂತೆ […]

ಕಾವ್ಯಯಾನ

ನಿರೀಕ್ಷೆ ಅಪೇಕ್ಷೆ ರೇಖಾ ವಿ.ಕಂಪ್ಲಿ ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ… ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ…. ಬರುತಲಿವೇ ಕಷ್ಟಗಳು ಅನಿರೀಕ್ಷಿತ… ಆದರೂ ಕಾದಿರುವೆ ಒಳಿತನು ನಿರೀಕ್ಷಸುತ…. ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ…. ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ…. ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ.. *******

ಕಾವ್ಯಯಾನ

ಕೊಡುವುದಾದರೂ ಯಾರಿಗೆ? ವಿಜಯಶ್ರೀ ಹಾಲಾಡಿ ಹೌದು ಈ ಪ್ರೀತಿಯನ್ನು ಮೊಗೆಮೊಗೆದು ಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆ ಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದ ಮುಖ –ಮುಖವಾಡಗಳು … ರಾತ್ರಿ -ಹಗಲುಗಳನ್ನು ಗೆಜ್ಜೆಕಾಲಿನಲ್ಲಿ ನೋಯಿಸಲೆ … ಯಾತನೆಯನ್ನು ನುಂಗುತ್ತಿರುವೆ ಸಂಜೆಯ ಏಕಾಂತಗಳಲ್ಲಿ ಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆ ಮಂಡಿಯೂರಿದ್ದೇನೆ ಹಟಮಾರಿ ಕಡಲಾಗಿದ್ದೇನೆ.. ತರ್ಕಕ್ಕೆ ನಿಲುಕದ ಗಳಿಗೆ -ಗಳಲ್ಲಿ ಒಂಟಿಹೂವಂತೆ ನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆ ಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನು ಮತ್ತೆ ಹುಟ್ಟಿಸಿಕೊಳ್ಳಲು […]

ಕಾವ್ಯಯಾನ

ತುಮುಲ ಬಿ.ಎಸ್.ಶ್ರೀನಿವಾಸ್ ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು ತನ್ನಷ್ಟಕ್ಕೆ ತಾನೇ ತಿಳಿಯಾಗಿ ಪ್ರತಿಬಿಂಬ ತೋರಿಸುವವರೆಗೂ ಹರಿಯಬಿಡಬೇಕು  ಯೋಚನೆಗಳ ಕಡಿವಾಣವಿಲ್ಲದ ಕುದುರೆಯನ್ನು ಓಡಲಾಗದೆ ತಾನೇ ನಿಲ್ಲುವವರೆಗೂ ಸುರಿಸಿಬಿಡಬೇಕು ಕಂಬನಿ ಮನದ ಬೇಗುದಿಯೆಲ್ಲ ಕರಗಿ ಶಾಂತಿ ನೆಲೆಸುವವರೆಗೂ ನಡೆದು ಹೋಗಲಿ ಪ್ರಳಯ ಪರಶಿವನ ತಾಂಡವ ನೃತ್ಯ ಭ್ರಮೆಗಳೆಲ್ಲ ಭಸ್ಮವಾಗುವವರೆಗೂ ಕರಗಿದಾ ಕತ್ತಲಲಿ ಬಸವಳಿದ ಮೈಮನಕೆ ಗಾಢನಿದ್ರೆಯು ಆವರಿಸಬೇಕು ಮುಂಜಾನೆ ಹಕ್ಕಿ ಚಿಲಿಪಿಲಿ ಅರುಣೋದಯ ರಾಗದಲಿ ಹೊಸಬೆಳಕು ಮೂಡಬೇಕು ********

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********

Back To Top