Category: ಕಾವ್ಯಯಾನ

ಕಾವ್ಯಯಾನ

ಎಲ್ಲ…ತಿರಗಾ-ಮುರಗಾ.

ಕವಿತೆ ಎಲ್ಲ…ತಿರಗಾ-ಮುರಗಾ. ಅಬ್ಳಿ,ಹೆಗಡೆ ಇದ್ದಕ್ಕಿದ್ದಂತೆ ತಲೆಕೆಳಗಾಗಿ ನಿಂತಾಗಿನ     ಅನುಭವ ಇಂದು ಎಲ್ಲ ತಿರಗಾ-ಮುರಗಾ.     ಅಂಗಾಲಿಗೆ ಬಾನು,ನೆತ್ತಿಗೆ ಭೂಮಿ     ಎಲ್ಲ ತಿರಗಾ-ಮುರಗಾ.     ಆಲಯದಲ್ಲಿ ಬಯಲು,ಬಯಲಲ್ಲಿ ಆಲಯ     ಭೃಮೆ ವಾಸ್ತವಗಳ ನಡುವಿನ ಸೆಣಸಾಟ     ಹೋರಾಟವಿಂದು,     ಎಲ್ಲ…..ತಿರಗಾ-ಮುರಗಾ.     ನೀರಿದ್ದೆಡೆ ನೆಲ,ನೆಲವಿದ್ದೆಡೆ ನೀರು     ಬಾಗಿಲಿರುವೆಡೆಯಲ್ಲಿ ಗಟ್ಟಿ ಗೋಡೆ     ಗೋಡೆಯಿರುವೆಡೆ ತೆರೆದ ಬಾಗಿಲು,     ಎಲ್ಲ…..ತಿರಗಾ-ಮುರಗಾ.     ಕಣ್ಣ ತಣಿಸುವ ಹಸಿರ ತಂಪು ಬಸಿರ     ಉಸಿರಲ್ಲಿ ಸುಡು,ಸುಡು ಬೆಂಕಿ, […]

“ಮಾರಿಯ ಗಾಣ”

ಮಾರಿಯ ಗಾಣವೆ ಅವನೋ
ಅವನದೆ ರೂಪದ ವೈದ್ಯನೋ
ಅವನಿಗು ಮೀರಿದ ಕಣವೋ
ನಿಯಮವ ಮೀರಿದ ಗುಣವೋ
ತಿರುತಿರುಗಿದೆ ಗಾಣ

ಅವಳು ಮೈಕೊಡವಿ ಎದ್ದಳು

ನನ್ನ ಅಸ್ಮಿತೆಯ ಹರಾಜಿಗಿಟ್ಟ
ಆತ್ಮಗೌರವವ ಸುಡಲು ಹೊರಟ
ಮುಂಡಾಸು‌ ಬೈರಾಸು
ಗಂಡನೆಂಬವನಿಗೆ ಇನ್ನು ಬಿಡಬಾರದು.

ನೆಲವೇ ಶ್ರೇಷ್ಠವೆನುತ ನೊಸಲಿಗೆ ವಿಭೂತಿ ಧರಿಸುವನು
ಜಲವನು ಅರಿಯದವರಿಗೆಲ್ಲ ತಿಳಿಸಿದವನು ನಮ್ಮ ಧಣಿ

ಶ್ರೀಕೃಷ್ಣನ ಬೀಳ್ಕೊಡುಗೆ

ಕಾಣದಂತೆಯೆ ಮುರುಳಿ ಲೋಲನ ಕೊಳಲ ಲೀನದಲಿ|
ಬಾಣದಂತಯೆ ಬೀಸಿ ಬಂದಿಹ
ಜಾಣ ನೆನಪಿನ ಮಾಲೆ ಹೊದ್ದುತ

ಕಾಮಿ೯ಕ

ದಿನಪೂತಿ೯ ದುಡಿದು ಕೊನೆಯಲ್ಲಿ
ಉಳಿಯುವುದು ತುಸುವು ಜೇಬಲ್ಲಿ
ಸೇರುವುದು ಮಿಕ್ಕ ಹಣ ಮನೆಗೆ
ಹೆಂಡತಿ ಮಕ್ಕಳ ಗಂಜಿಪಾಲಿಗೆ

ನೆತ್ತಿಯ ಮೇಲೆ ಕೆಂಡಕಾರುವ ಸೂರ್ಯ ಪಾದದಡಿ ಕಾದ ಬುವಿ
ಸವೆದ ದೇಹ ಕಳೆದುಹೋದ ಯೌವನದ ಕನಸುಗಳು ಕಾಡುತಿವೆ

ಗಜ಼ಲ್

ಕಣ್ಣೀರು ಕಡಲಾಗಿ ಹರಿದು ಹೋದಾಗ ಈಜಿ ದಡ ಸೇರಿದ್ದೇವೆ
ಬದುಕು ನೊಂದು-ಬೆಂದು ಕತ್ತಲಾದಾಗ ಚಿಮ್ಮಣಿ ಹಿಡಿದಿದ್ದೇವೆ

ಈಗವಳು ಮಲಗಿದ್ದಾಳೆ

ಕಿವಿ, ಕರುಳುಗಳನ್ನು ಕೊಯ್ದರೂ
ಮತ್ತೆ ಜೋಡಿಸಿ, ಜೀವ ಬಿಗಿ ಹಿಡಿದವಳು
ಒಂದು ಯುಗದ ಅಂತ್ಯದಂತೆ
ಈಗ ತಣ್ಣಗೆ ಮಣ್ಣಲ್ಲಿ ಮಲಗಿದ್ದಾಳೆ

Back To Top