ಕಾವ್ಯಯಾನ
ಎಲ್ಲಿದಿಯ ಗೆಳೆತಿ?
ರಾಘವೇಂದ್ರ ದೇಶಪಾಂಡೆ
ಎಲ್ಲಿದಿಯ ಗೆಳೆತಿ? ನನ್ನ ಬಿಟ್ಟು ನೀ ಸಂತೋಷದಿಂದರುವೆಯ ?
ಆಳವಾಗಿ ಅರಿತಾದ ಮೇಲೆ
ಹೇಗೆ ಸಾಧ್ಯ? ಏಕಾಏಕಿ ದೂರವಾಗಲು…
ಹೇಗೆ ಬಂತು ಮನಸ್ಥಿತಿ ನಿನಗೆ
ಗ್ರಹಿಸಿರುವೆಯಾ ನನ್ನ ಮನದ ನೋವನ್ನು ಹಾತೊರಿಯುತಿದೆ ನಿನಗಾಗಿ ಈ ಮನ
ಹಸಿರಾಗಿಯೇ ಇದೆ ನಿನ್ನ ಮುಖಭಾವ
ನನ್ನ ಹೃದಯದಕ್ಷಿಯಲ್ಲಿ…
ಬದುಕುವಂತೆಯೇ ಮಾಡಿದೆ ನೀ ಗಾಯವಿಲ್ಲದೆಯೇ ನೋಯುತಿರುವೆ ಯಾರಲ್ಲಿ ಹೇಳಲಿ ಹೃದಯ ವೇದನೆಯನು
ಕಾಯುತಿರುವೆ ಕೊನೆಯ ಮಾತಿಗಾದರೂ
ಯಾಕೆ ಈ ಜೀವನ ಎಂದೆನಿಸಿದೆ!
ಹೃದಯ ನೋವಿನಿಂದ ಅಳುತ್ತಿರುವಾಗ
ನೋವು ಕಣ್ಣಿರಾಗಿ ಹರಿದರೂ
ನೀನು ಮಾತ್ರ ದೂರಾವಾಗಿರುವೆ…
ಇಷ್ಟೇನಾ ಅರ್ಥೈಸಿಕೊಂಡಿದ್ದು
ಯಾಕೆ ನನ್ನ ಭಾವನೆಗಳಿಗೆ ಘಾಸಿ ಮಾಡಿ ದೂರಾದೆ?
ನನ್ನ ಹೃದಯ ಹೇಳುತ್ತಿದೆ ಒಂದೇ.
ಲೀಲಾಜಾಲದ ಪ್ರೀತಿ ಮಾತುಗಳು…
ನೂರಾರು ಸಾರಿ ಹಾಡಿ, ನೀನೇನೆ ಜೀವ ಎಂದು…
ಕಾರಣವೇ ಹೇಳದೆ ಯಾಕೆ ನನ್ನ ಬಿಟ್ಟು ಹೋದೆ ?
ಈ ಲೀಲೆ…ಭಗವಂತನದೋ!ಭಗವತಿಯದೋ
*****************************************