Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಜೀವಾತ್ಮ ಕೊಟ್ರೇಶ್ ಅರಸೀಕೆರೆ ಯಾವುದೋ ಹಕ್ಕಿ ಹಾಕಿರುವ ಈ ಹಿಕ್ಕೆ ಈಗ ಸಸಿಯಾಗಿದೆ! ಉದರಾಂಬರದ ಕಾರಣ ನುಂಗಿ,ನೀರು ಕುಡಿದುದೆಲ್ಲಾ ಏನೆಲ್ಲಾ ಸಕಾರಣಗಳಿಗೆ ಕಾರಣ!! ಜಗಕ್ಕೆ ಬಿದ್ದ ಕಿರಣ,ಮೇಲಿಂದ ಬಿದ್ದ ನೀರ ಬಿಂದು,ಸುಯ್ಯನೇ ಬೀಸುವ ಗಾಳಿ…… ಯಾವ ಯಾವುದಕ್ಕೆ ಸಂಬಂಧ!! ಅಲ್ಲೊಂದು ಜೋಡಿ ಹಕ್ಕಿ, ಇಲ್ಲೊಂದು ಮಿಲನ, ನಳ ನಳಿಸುತ್ತಿರುವ ಹೂ… ಒಂಟಿಯಾಗಿ ಯಾವುದೋ ಶಿಖರ ತೇಲಿ ಹೋಗುತ್ತಿರುವ ಮೋಡಗಳು ಯಾವ ದಂಡಯಾತ್ರೆಗೆ……. ಜೀವ ಇರಲೇಬೇಕಿಲ್ಲ ಚಲನೆಗೆ ಸೃಷ್ಟಿಯ ಸಾರ ಯಾರು ಹೀರಿದ್ದಾರೆ? ಯಾರೋ ಮೇಲೋ ಯಾರ ವಿಜಯ? […]

ಕಾವ್ಯಯಾನ

ಮಲ್ಲಿಗೆ-ಸಂಪಿಗೆ ಅನು ಮಹಾಲಿಂಗ ಅಂಗಳದಿ ಹರಡಿತ್ತು ಹಸಿರಿನ ಮಲ್ಲಿಗೆ ಚಪ್ಪರ ಮಳೆಹೊಯ್ದು ತಂಪಾಗೆ ಸೊಂಪಾದ ಹಂದರ ಬಳ್ಳಿಯ ತುಂಬೆಲ್ಲ ಮಲ್ಲಿಗೆ ಹೂ ರಾಶಿ ಸಂಜೆಗೆ ಕೊಯ್ದರೆ ಮನೆತುಂಬ ಘಮ ಸೂಸಿ ಮನದೊಡೆಯ ತಂದಿರುವನು ಘಂಗುಡುವ ಮಲ್ಲಿಗೆ ನಾರಿಯ ಮುಡಿಯೇರಿ ನಗುತಿರಲು ಮೆಲ್ಲಗೆ ಹಿತ್ತಲ ಮರದಲ್ಲಿ ಬಿರಿದಾಳು ಸಂಪಿಗೆ ಘಮನವಾ ಸೂಸ್ಯಾಳು ಸುತ್ತೆಲ್ಲಾ ಸುಮ್ಮಗೆ ಬಾಲೆಯ ಮನ ಸೆಳೆಯೊ ಗಗನದ ಸಂಪಿಗೆ ಮುಡಿಸೇರಿಸಲು ಪರದಾಟ ಪಕ್ಕದ ಮನೆ ಕೆಂಪನಿಗೆ ಮಲ್ಲಿಗೆ ಸಂಪಿಗೆ ಪ್ರತ್ಯೇಕ ರಾಣಿಯರುಅವರವರ ಕಕ್ಷೆಯಲಿ ಅವರವರೆ ಬೀಗುವರು. […]

ಕಾವ್ಯಯಾನ

ಪ್ರಶ್ನೋತ್ತರ ರತ್ನನಂದಿನಿ (ಲತಾ ಆಚಾರ್ಯ) ಪ್ರೀತಿ ಅಂದರೇನು ಕೇಳಿದಳು ಅವಳು ಉತ್ತರಿಸದೆ ನಾನು ಸೊಸೆಯ ಕಡೆಗೊಮ್ಮೆ ಕೈಯ ತೋರಿಸುತ ಮುಗುಳ್ನಗೆಯ ಬೀರಿದೆ ಅರ್ಥವಾಗಿರಬೇಕು ಈಗ  ಆಕೆಗೆ  ಅಮ್ಮ ಮಗುವಿಗೆ ತುತ್ತು ಉಣ್ಣಿಸುತ್ತಿದ್ದಳು. ಸ್ನೇಹವೆಂದರೇನು ಮತ್ತೊಂದು ಪ್ರಶ್ನೆ ಈಗಲೂ ನಾನು ಮೌನ ದಿಟ್ಟಿಸಿದಳು ನನ್ನ  ಗೆಳೆಯನೋರ್ವನು ಬಂದು ಹೇಗಿರುವೆ ಎಂದನು ಮತ್ತದೇ ಅಸೌಖ್ಯ ತೋರಿದರೆ ಹೆದರದಿರು ನಾನಿರುವೆ ಜೊತೆಯಲ್ಲಿ ಎಂದಾಗ ಆಕೆ ಮೌನವಾಗಿದ್ದಳು. ಬೆಸುಗೆ ಎಂದರೇನು ಕೇಳಿದಳು ಈ ಬಾರಿ ಏನು ಹೇಳಲಿ ನಾನು ಮಾತು ಬಾರದು ನನಗೆ […]

ಕಾರ್ಟೂನ್ ಕೋಲ್ಮಿಂಚು

ಡಾ.ಎನ್.ಸುಧೀಂದ್ರ ಪರಿಚಯ: ಕನ್ನಡ  ಸ್ನಾತಕೋತ್ತರ ಪದವಿ. .”ಕನ್ನಡ ರೇಡಿಯೋ ನಾಟಕಗಳು” ವಿಷಯದಲ್ಲಿ ಕುವೆಂಪುವಿ,ವಿ ಯಿಂದ ಡಾಕ್ಟರೇಟ್. ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿ ಯಾಗಿ ಸೇವೆ. ಈಗ ವಿಶ್ರಾಂತ ಸ್ಪಂದನಟೀವಿಚಾನಲ್ ಶಿವಮೊಗ್ಗ ,ಇದರಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ  ಸೇವೆ. ಮಲೆನಾಡು ಮೀಡಿಯ ವೆಬ್ ಪೋರ್ಟಲ್ ಸಂಪಾದಕರಾಗಿ ಸೇವೆ

ಕಾವ್ಯಯಾನ

ಕಾಡುಹರಟೆ ಮತ್ತು ಕವಿಗೋಷ್ಠಿ. ವಿಜಯಶ್ರೀ ಹಾಲಾಡಿ ವಾರವಿಡೀ ಕಾಡುಮುನಿಯ ಹಕ್ಕಿಗಳು ಮರಿಗಳಿಗೆಂದು ಗೂಡುನೇಯುತ್ತಿದ್ದವು ಕಟ್ಟಿರುವೆಗಳು ಹುಲ್ಲಿನ -ಬೀಜಕ್ಕಾಗಿ ಜಗಳಾಡಿದವು ಗೋಡೆಗಳನ್ನು ಕಾಲುದಾರಿ ಮಾಡಿಕೊಂಡ ಅಳಿಲು ಮುಂಗುಸಿ ಮತ್ತದರ ಮಗು ಪಕ್ಕದ ಖಾಲಿ ಸೈಟಿನಲ್ಲಿ ವಿಹರಿಸುತ್ತಿದ್ದವು.. ಹುಲ್ಲುಗಾವಲಲ್ಲಿ ಕಿವಿಗಳು ಕಂಡದ್ದಷ್ಟೇ ಬೆಚ್ಚನೆಯ ಪಾದವನ್ನು ಎದೆಯೊಳಗೆ ಊರಿ ಮೊಲವೊಂದು ನಾಗಾಲೋಟ ಹೂಡಿತು ಹಿಂದಿನ ಮನೆಯ ಕಿಟಕಿ ಗಾಜನ್ನು ಮರಕುಟಿಕವೊಂದು ಬಡಿದದ್ದೇ ಬಡಿದದ್ದು ಅದರ ತಲೆಯೊಳಗೆ ಮೆದುಳು ಕದಡಲೇ ಇಲ್ಲವಲ್ಲ ಎಂದು ಅಚ್ಚರಿಪಡುತ್ತ ಕಾಲಹರಣಮಾಡಿದೆ.. ನನ್ನ ರಜಾದಿನಗಳು ಹೀಗೇ ಕವಿತೆ ಹುಟ್ಟಿಸುತ್ತ […]

ಕಾವ್ಯಯಾನ

ಮೌನ ಮಾರಾಟಕ್ಕಿದೆ ತನುನಯ ಮೌನದ ಜೊತೆ ಮಾತು ಬಿಡುವ ಮನಸಾಗಿದೆ ಮೌನವೂ ಸಮ್ಮತಿಸಿ ಟೂ ಬಿಟ್ಟು ನಡೆದಿದೆ ಹಾಳು ಮಳೆಯ ಜೊತೆ ಕಾಡು ಹರಟೆ ಜೋರಾಗಿದೆ ನಿಲ್ಲುತ್ತಿಲ್ಲ ಮಾತಿನ ಮಳೆ ಮುಗಿಸುವ ಮನಸಿಲ್ಲದೆ ಮಳೆಗೂ ಮನಸಿಗೂ ಮಾತಿಲ್ಲದ ಜೊತೆಗಾರರಿಲ್ಲದೆ ಮಳೆಯೂ ಕೂಡ ಮೌನವನು ಮಾರಿಬಿಡು ಎನ್ನುತಿದೆ ಮಾತು ಮುಗಿಯುತ್ತಿಲ್ಲ  ಮೌನವಿಂದು ಮಾರಾಟಕ್ಕಿದೆ ಮಾತಿನ ಸಂತೆಯಲಿ ಕೊಳ್ಳುವವರಿಲ್ಲದೆ ಮೌನ ಮರುಗುತ್ತಿದೆ ಕೊಳ್ಳುವೆಯ ಮೌನವನು ನಿನ್ನ ಮಾತು ಮರೆತು ಬರೆಯುವೆನು ಕವಿತೆಯ ನಿನ್ನೊಲವ ಅರಿತು… =====================

ಕಾವ್ಯಯಾನ

ವ್ಯತ್ಯಾಸ ಪ್ರಮೀಳಾ ಎಸ್.ಪಿ. ಎದೆಯ ಮೇಲೊಮ್ಮೆ ಕಿವಿಯಿಡು ನಿನ್ನೆಸರೇ ನನ್ನುಸಿರಲಿ ಎಂದಿದ್ದವ ಗೊರಕೆ ಸದ್ದುಸಹಿಸಲಾರೆ ದೂರ ಮಲಗುವೆಯಾ ಎನ್ನುತ್ತಿದ್ದಾನೆ ಬೈಕ್ ಮೇಲೆ ನಿನ್ನಬಾಡಿ ಲೈಟ್ ವೈಟ್,ಹಾರೀಯೆ ಎಂದಿದ್ದವ ಕಾರಿಗೂ ಮುಂಬಾರ ಹಿಂದೆ ಕೂರುವೆಯಾ ಎನ್ನುತ್ತಿದ್ದಾನೆ. ನಿನ್ನ ಮುಡಿಗೆ ಮಲ್ಲಿಗೆ ತಂದಿರುವೆ ಮುಡಿಯಲೇ ಬೇಕು ಎಂದಿದ್ದವ ಮಾರೀಗ ರೂಪಾಯಿ ನೂರು ಖಾಲಿ ಜಡೆಯೆ ಚೆನ್ನ ಎನ್ನುತ್ತಿದ್ದಾನೆ ಮಸಾಲೆ ದೋಸೆ ನಿನ್ನಿಷ್ಟ ತಿನ್ನು ನೀ ಎಷ್ಟಾದರೂ ಎಂದಿದ್ದವ ಅನ್ನ ಸಕ್ಕರೆ ಬೇಡ ಸಿರಿಧಾನ್ಯ ತಿನ್ನಲಾರೆಯಾ ಎನ್ನುತ್ತಿದ್ದಾನೆ. ಸೀರೆಯಲಿ ನೀ ಸುಂದರಿ […]

ಕಾವ್ಯಯಾನ

ನಾ ಮನುಷ್ಯಾ ಅದೀನಿ ಚಂರಾನನ ದು:ಖ ಆದಾಗ ಅತ್ತೇನಿ ಸಂತೋಷ ಆದಾಗ ನಕ್ಕೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ಮನಸ್ನ್ಯಾಗೊಂದು, ಮಾತ್ನ್ಯಾಗೊಂದು, ಕೆಲಸ್ದಾಗೊಂದು ಮಾಡಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ…. ಮುಖವಾಡ ಇಟ್ಕೊಂಡ್ ನೋಡಿಲ್ಲ ಮುಖವಾಡ ಹಾಕ್ಕೊಂಡ್ ಆಡಿಲ್ಲ ಯಾಕಂದ್ರ ನಾ ಮನುಷ್ಯಾ ಅದೀನಿ….. ಇದ್ರ ಕೊಟ್ಟೀನಿ,ಇಲ್ಲಾಂದ್ರ ಬಿಟ್ಟೀನಿ ಮುಂದ್ ಹೊಗಳಿಲ್ಲ,ಹಿಂದ್ ಬೈದಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ….. ಕಷ್ಟ ಅಂದ್ರ ಕರಗೀನಿ,ಇಷ್ಟ ಅಂದ್ರ ಹಿಗ್ಗೀನಿ ಏನೂ ಇಲ್ಲಾಂದ್ರ ಸುಮ್ಮನದೀನಿ ಯಾಕಂದ್ರ ನಾ ಮನಷ್ಯಾ ಅದೀನಿ…… ಬದಕಾಕ […]

ಕಾವ್ಯಯಾನ

ಗಝಲ್ ದೀಪಾಜಿ ಮನದಬಾಗಿಲ ಕದಲಿಸಿದರೆ ಏನರ್ಥ ಸಾಕಿ, ಒಳನುಸುಳುವ ಇಚ್ಛೆ ಇಲ್ಲದವರು ಬಯಲ ದಾಟಿ ಬರಬಾರದಿತ್ತು.. ಅಂಗಾತ ಮಲಗಿದ ರಸ್ತೆ ದಾಟಿ ಬಾಗಿಲ ವರೆಗೂ ಬಂದು ಕದತಟ್ಟದೆ ಹಿಂತಿರುಗುತ್ತೇನೆಂದರೆ ಏನರ್ಥ ಸಾಕಿ.. ಮೊಗ ನೋಡಿ ಮಾತನಾಡಲಾಗದವರು ಕಾರ್ಮೋಡದ ಮಧ್ಯದ ಕೊಲ್ಮಿಂಚಿನಂತ ಮಾತು ಆರಂಭಿಸಲು ಬರಬಾರದಿತ್ತು..ಬಿದಿಗೆ ಚಂದಿರನಂತೆ ಬಂದು ನಿಂತು ಕಾಯ್ದು,ಕದ ತೆರೆಯುವಾಗ ಬೆನ್ನುಮಾಡಿ ಹೊರಟರೆ ಏನರ್ಥ ಸಾಕಿ.. ಬೆರಳಿಗೆ ಬೆರಳ ಕಸಿಮಾಡಿದಾಗ ಹುಸಿ ಮುನಿಸಮಾಡಿ ಕೊಸರಾಡಲು ಬರಬಾರದಿತ್ತು.. ಮರುಳ ಮಾಡಿ ಕರುಳ ಹಿಂಡಿ,ಮಂಡಿ ಹಚ್ಚಿ ಕುಳಿತು ಬೆರಳ‌ […]

ಕಾವ್ಯಯಾನ

ಜಾಗವೊಂದು ಬೇಕಾಗಿದೆ! ಪ್ರಮೀಳಾ ಎಸ್.ಪಿ. ಬೇಕಿದೆ ನನಗೊಂದು ಜಾಗ ಮನೆ ಮಂದಿರ ಕಟ್ಟಲಲ್ಲ! ಮಸೀದಿ ಚರ್ಚು ಕಟ್ಟಿ ವಿವಾದ ಹುಟ್ಟು ಹಾಕಲಲ್ಲ! ಬ್ಯಾಂಕು ಬಂಕು ಮಾಲ್ ಹಾಲ್ ನಿರ್ಮಿಸಲಲ್ಲ! ಒಂದಿಷ್ಟು ಕುಳಿತು ಅಳಲು ಏಕಾಂತ ಸಿಗುವ ಜಾಗ! ಮನೆಯಲ್ಲಿ ಮಕ್ಕಳು ನೋಡಿಯಾರು ಬೀದಿಯಲಿ ಜನ ನಕ್ಕಾರು! ಗುಡಿಯ ಪೂಜಾರಿದುರುಗುಟ್ಟಿಯಾನುಕಚೇರಿಯಲ್ಲಿ ನಗೆಗೆಆಹಾರವಾದೇನು! ಅದಕೆಯಾರೂ ನೋಡದ, ಯಾರಿಗೂಕಾಣದ ಏಕಾಂತದ ಜಾಗವೊಂದು ಬೇಕಿದೆಕಣ್ಣೀರ ಕಟ್ಟೆ ಒಡೆಯಲು.

Back To Top