ವಿಪರ್ಯಾಸ
ಸಂಬಂಧಗಳ ಗೊಂದಲದಲ್ಲಿ ಒದ್ದಾಡುವ
ಮಮತೆ ಆಸರೆಗಾಗಿ ಹುಡುಕಾಡುವ ಜನಗಳ ನಡುವೆ
ದೇಹಗಳ ಬಿಸಿರಕ್ತ ಬಗೆಯಲು ಬಾಯಾರುತ
ಹದ್ದಿನಂತೆ ಕಾಯುವ ಮಂದಿ
ಗಜಲ್
ನೆಲ ನುಂಗಿದ ಬೇರುಗಳನು ನೀರು ನುಂಗಿರಬಹುದೇ
ವಾಸ್ತವ ಅರಿಯಲು ದಡಕ್ಕೆ ಕರೆತರಬಹುದು ಜನಗಳು
ಗಜಲ್
ಆಳ ನಿಲುಕದ ಆಂತರ್ಯ ಗಂಭೀರ ಮಂದಾರವದನ
ಎದುರಿನ ಮೊಗದಲಿ ನಗು ತರಿಸಿ ಒಲವು ಮೂಡಿತು
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್
ರಾತ್ರಿ ಮುರುಟಿ ಗಿಡದಿಂದ ಬಿದ್ದ ಸುಮ ಗೊಬ್ಬರವಾಗಿ ಅರಳಿ
ಮೊಗ್ಗಾಗಿ ಕೊಂಬೆಯಲಿ ಕೊನರಿ ಹೂವಾಗೋ ನಾಳೆಗೂ ಕಾದಿದೆ
ಗಜಲ್
ಅಮಾವಾಸ್ಯೆ ಆಭೀಲ ಛಾಯೆಗೆ ಚಂದ್ರ ಮರೆಯಾಗಿರಬಹುದು
ಜಗದಗಲ ನಸುನಗಲು ಶಶಿಗೂ ಕಾಲ ಪಕ್ವವಾಗುತ್ತಿದೆ ಅಂಜಬೇಡ
ಗಜಲ್
ಇರುಳ ಏಕಾಂತವಿಂದು ದುರ್ಭರವೆನಿಸದೇ ಹಿತ ನೀಡಿದೆ
ರಸಘಳಿಗೆಗಳ ಕನಸಲ್ಲೂ ನಾನಿನ್ನು ನೆನೆಯಲಾರೆ ಸಾಕಿ
ಗಜಲ್
ಕೆಂಪು ದೀಪದ ಕತ್ತಲು ಕೋಣೆ ದುಡಿಮೆ ಆಗುತಿದೆ ಇಂದು
ಹೊತ್ತಿಗೆಯಲ್ಲಿ ಇರುವ ಮೌಲ್ಯಗಳು ಜೀವನದಲ್ಲಿ ಏಕಿಲ್ಲ
ಗಜಲ್
ಮೂರು ದಿನದ ಸಂತೆಯಲ್ಲಿ ಎಂತ ನಾಟಕದ ತಾಲೀಮು ಕನ್ನಡಿಯ ಮುಂದೆ ರೂಪ ಮಾಸಿದೆ
ತಲೆಯಿಡುವ ತೊಡೆ ನೇವರಿಸುವ ಕರಗಳಿಗೂ ಭಂಗವಿದೆಯಿಲ್ಲಿ ಅವನು ಹೋದ ಮೇಲೆ
ನೆನಪುಗಳೆಂದರೆ
ನೆನಪುಗಳೆಂದರೆ…
ಉರಿವ ಸೂರ್ಯನೆದೆಗೆ ಒದ್ದು ನಿಂತ
ಅಂಗಳದ ಹೊಂಗೆ ಮರವು
ಹಾಸಿದ ನೆರಳ ಹಾಸಿಗೆಯು…!