ಗಜಲ್
ಯ.ಮಾ.ಯಾಕೊಳ್ಳಿ
ಬಂಧಿಖಾನೆಯೊಳಗೆ ಬಂಧಿಯಾದ ಖೈದಿ ಗೂ ಆಸೆಯಿದೆ
ಹೊರಬಂದು ಹೊಸ ಬದುಕು ಕಟ್ಟಬೇಕೆಂದು ಅವನಿಗೂ ಕನಸಿದೆ
ಸೋತು ಪಾತಾಳಕಿಳಿದರೂ ಮತ್ತೆ ಪುಟಿದೇಳುವ ಹಂಬಲ
ಕಲಿಗೆ, ಆಟದಂಗಳದಿ ಕಂಡ ಪ್ರತಿ ಅಪಜಯದ ಗೋಳಿಗೂ ಕೊನೆಯಿದೆ
ಸಾವಿನ ಹಾಸಿಗೆಯ ಮೇಲೆ ದಿನ ಎಣಿಸುತ್ತಾ ಮಲಗಿದ್ದಾನೆ
ವೈದ್ಯ ನ ದುವಾ ಮರು ಜೀವ ಕೊಡುವದೆಂದು ರೋಗಿ ಗೂ
ಆಸೆಯಿದೆ
ರಾತ್ರಿ ಮುರುಟಿ ಗಿಡದಿಂದ ಬಿದ್ದ ಸುಮ ಗೊಬ್ಬರವಾಗಿ ಅರಳಿ
ಮೊಗ್ಗಾಗಿ ಕೊಂಬೆಯಲಿ ಕೊನರಿ ಹೂವಾಗೋ ನಾಳೆಗೂ ಕಾದಿದೆ
ಸಾಲ ಸಂಕಟ ಯಾರಿಗಿಲ್ಲ ಇಲ್ಲಿ,ಮಿಶ್ರನವ ಉನ್ನುತ್ತಲೇ
ಬಾಳ ಡೋಣಿ ಹುಟ್ಟು ಹಾಕಬೇಕಿದೆ ಇಲ್ಲಿ “ಯಯಾ”, ಯಾರಿಗೂ ಕಾಯದೆ
*********************