ಗಜಲ್
ಜ್ಯೋತಿ ಬಿ ದೇವಣಗಾವ.
ನೋಟದೊಳಗೆ ನೋಟ ಬೆರೆಸಿ ಒಲವು ಮೂಡಿತು
ಮಾತು ಮಾತಿನಲಿ ಜೇನು ಸುರಿಸಿ ಒಲವು ಮೂಡಿತು
ಘಳಿಗೆಗೊಮ್ಮೆ ಕೊರಳು ಕೊಂಕಿಸಿ ಚಿತ್ತ ಸೆಳೆಯುವೆ
ಹೋದ ಕಡೆಗೆ ಕಡೆಗಣ್ಣು ಹಾಯಿಸಿ ಒಲವು ಮೂಡಿತು
ನೀಲಿ ಸೀರೆಯ ತುಂಬಾ ಹೂ ಗೊಂಚಲ ಚಿತ್ರ ಪರಿಷೆ
ಉಲಿದ ಮಧುರ ದನಿ ಮನ ತಣಿಸಿ ಒಲವು ಮೂಡಿತು
ಆಳ ನಿಲುಕದ ಆಂತರ್ಯ ಗಂಭೀರ ಮಂದಾರವದನ
ಎದುರಿನ ಮೊಗದಲಿ ನಗು ತರಿಸಿ ಒಲವು ಮೂಡಿತು
ಬಗೆ ಬಗೆಯಲಿ ಕಾಡುವೆ ಏಕೆ “ಚಿಜ್ಜ್ಯೋತಿ”ಯೆ
ನಿನ್ನ ಗೈರುಕೂಡ ನೆನಪು ಸ್ಪುರಿಸಿ ಒಲವು ಮೂಡಿತು
************************
Excellent