ಗಜಲ್
ರತ್ನರಾಯಮಲ್ಲ
ಬೆಳಕಿನಲಿ ಇರುವ ಮಡಿವಂತಿಕೆಯು ಕತ್ತಲಿನಲಿ ಏಕಿಲ್ಲ
ಮುಟ್ಟುವುದರಲಿ ಇರುವ ಜಾತಿ ಹಾಸಿಗೆಯಲಿ ಏಕಿಲ್ಲ
ಹಸಿವು-ಬಡತನ ಅದೆಷ್ಟು ಅಪಾಯಕಾರಿ ಜಗದೊಳಗೆ
ಹೆಣ್ಣನ್ನು ಪೂಜಿಸುವ ಮನಸ್ಥಿತಿ ಅತ್ಯಾಚಾರದಲಿ ಏಕಿಲ್ಲ
ಆಚಾರ-ಅನಾಚಾರಗಳು ಪಲ್ಲಟವಾಗುತಿವೆ ನಮ್ಮೊಳಗೆ
ತಕ್ಕಡಿಯ ನ್ಯಾಯ ಹಸಿ ಮಾಂಸದ ಅಂಗಡಿಯಲ್ಲಿ ಏಕಿಲ್ಲ
ಕೆಂಪು ದೀಪದ ಕತ್ತಲು ಕೋಣೆ ದುಡಿಮೆ ಆಗುತಿದೆ ಇಂದು
ಹೊತ್ತಿಗೆಯಲ್ಲಿ ಇರುವ ಮೌಲ್ಯಗಳು ಜೀವನದಲ್ಲಿ ಏಕಿಲ್ಲ
ಧರೆ ಹೊತ್ತಿ ಉರಿಯುತಿದೆ ಇಲ್ಲಿ ಯಾರಿಗೆ ದೂರಲಿ ‘ಮಲ್ಲಿ’
ಪ್ರಾಣಿಗಳಲ್ಲಿ ಕಾಣುವ ಅಂತಃಕರಣವು ಮನುಷ್ಯನಲ್ಲಿ ಏಕಿಲ್ಲ
*************
ತುಂಬು ಹೃದಯದ ಧನ್ಯವಾದಗಳು ಸರ್ ಜೀ, ಪ್ರಕಟಣೆಗಾಗಿ…
V.nice jee.
ಸಕಾಲಿಕ ಗಜಲ್. ಚಂದ