Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ನಾನು ಕೆಟ್ಟವಳು ಶೀಲಾ ಭಂಡಾರ್ಕರ್ ನಿನ್ನ ಪ್ರೀತಿಯ ಪರಿಮಾಣದಲ್ಲಿಒಂದಿಷ್ಟು ಆಚೆ ಈಚೆಯಾದಾಗನಾನು ಕೆಟ್ಟವಳು. ನನ್ನನ್ನು ಬದಿಗೆ ತಳ್ಳಿಇನ್ಯಾರನ್ನೋ ತಲೆ ಮೇಲೆಕೂರಿಸಿಕೊಂಡಾಗ,ನಾನು ಕೆಟ್ಟವಳು. ಅತಿಯಾಗಿ ಸಿಟ್ಟು ಬಂದಾಗನಿನ್ನ ಚುಚ್ಚಿ ನೋಯಿಸಿಖುಷಿ ಪಡುವಾಗನಿಜವಾಗಲೂನಾನು ಕೆಟ್ಟವಳು. ಇಷ್ಟೇ.. ನಾನು ಕೆಟ್ಟವಳಾಗುವುದುಇವಿಷ್ಟೇ ಸಂದರ್ಭಗಳಲ್ಲಿ. ನಾನು ಕೆಟ್ಟವಳಾದಮರುಕ್ಷಣವೇಮನವರಿಕೆಯಾಗಿಮತ್ತೆ ನಿನ್ನೆಡೆಗೆ ಬಂದಾಗ, ನೀನು ಎಂದಿನಂತೆಮುದ್ದಿಸುವಿಯಲ್ಲ..!ಆಗ ಮಾತ್ರ..ನೀನೇ ಕೆಟ್ಟವನು. ************

ಕಾವ್ಯಯಾನ

ಪ್ರೇಮವೆಂದೂ ಹೇರಲ್ಪಡುವುದಿಲ್ಲ ಪೂರ್ಣಿಮಾ ಸುರೇಶ್ ಪ್ರೇಮವೆಂದೂ ಹೇರಲ್ಪಡುವುದಿಲ್ಲ.ಮತ್ತೆಮತ್ತೆ ನಿನ್ನೆಗಳನುಕರೆತಂದುಎದುರು ನಿಲ್ಲಿಸಿಯುದ್ಧ ಹೂಡುವೆಯೇಕೆ.. ಒಪ್ಪುವೆಜೊತೆ ಸೇರಿಯೇಬುತ್ತಿ ಕಟ್ಟಿದ್ದೆವುನಾಳೆಗೆ ನಡೆವ ನಡೆಎಡವಿದ ಹೆಜ್ಜೆತಿರುವುಗಳುಗಂಧ ಮಾರುತದಸೆಳೆತದಾರಿ ಕವಲಾಗಿನೀನುನೀನಾಗಿ ನಾನು ಒಂಟಿಯಾಗಿಅನಿವಾರ್ಯ ಹೆಜ್ಜೆಗಳು ಅದೆಷ್ಟು ಮಳೆ..ಸುರಿಸುರಿದುಒದ್ದೆ ಒದ್ದೆ ಒಳಕಂಪನ ಹೊರನಡುಕತೊಯ್ದ ಹಸಿವೆಗೆಹಳಸಿಹೋದತಂಗಳು ಬುತ್ತಿಚಾಚಿದ ಕೈ ಬೊಗಸೆಖಾಲಿ ಖಾಲಿ ಹೌದುಅದು ತಿರುವೊಂದರ ಆಕಸ್ಮಿಕಮನಸುಗಳ ಡಿಕ್ಕಿನಡೆದ ಹಾದಿಯ ಬೆವರಿನ ವಾಸನೆಮುಡಿದ ಹೂವಿನ ಘಮತನ್ಮಯತೆಯನುನಮ್ಮೊಳಗೆ ಅರಳಿಸಿತ್ತು ಬಿಗಿದ ತೆಕ್ಕೆ ಸಡಿಲಿಸಲೇ ಬೇಕುಉದುರಿ ಬಿದ್ದ ಹೂ ಎಸಳುಗಳು ಕೊಡವಿಕೊಂಡೆಅಂಟಿದಬೆವರು ಕಳಚುವ ಮಳೆಗೆನಾನೂ ಕಾದೆ ಬೇಡ. ತಂಗಳು ಬಿಡಿಸದಿರುಇರಲಿ ಬಿಡು […]

ಕಾವ್ಯಯಾನ

ನೇಪಥ್ಯ ಎಮ್ . ಟಿ . ನಾಯ್ಕ.ಹೆಗಡೆ ಆ ನೀಲಿ ಬಾನು, ಮಿನುಗು ತಾರೆಬೆಳೆದು ಕರಗುವ ಚಂದ್ರಈ ಭೂಮಿ – ಅದರ ಕಣಿವೆಮೊರೆವ ಕಡಲು….ಆ ತಂಗಾಳಿ, ಮುಂದೆ ಬಿರುಗಾಳಿನದಿಯ ಓಟ, ಆ ನಾದದುಂಬಿ ಗಾನಗಾಳಿಗಂಟಿದ ಬದುಕಿನಎಕ್ಕೆ ಬಿತ್ತಗಳೆಲ್ಲಾಬಿತ್ತುತ್ತಾ ಹೊರಟದ್ದುಯಾವ ಕತೆ ? ಯಾರ ಕತೆ ? ಗತಿಸಿದ ಸಾಮ್ರಾಜ್ಯಕರಗಿದ ಅರಮನೆಉರುಳಿದ ಕಿರೀಟಕ್ಕೆ–ಲ್ಲ, ಹಿನ್ನೆಲೆ ಏನು ಕತೆ ? ಬಂದ ಗುರುತುಗಳಿಹುದುನಿಂದ ಗುರುತುಗಳಿಹುದುಹೋದ ಗುರುತುಗಳಿಹುದುಆದರೆ —ಬಂದವರು ಬಂದಂತೆಹೋದುದು ಯಾಕೆ ? ಆ ಬಾನು , ಈ ಭೂಮಿ ,ಅದರ […]

ಕಾವ್ಯಯಾನ

ರಸಧಾರೆ, ಮತ್ತಿತರೆ ಕವನಗಳು ವಸುಂಧರಾ ಕದಲೂರು ಹಸಿರೆಲೆ ಕಾನನಹಸುರಲೆ ಮಲೆಯೋ ಹೊಸ ಬಗೆ ನರ್ತನಹರುಷದ ನೆಲೆಯೋ ಹುಮ್ಮಸಿನ ಮನವೋಹುರುಪಿನ ಚೆಲುವೋ ಹರಸುವ ಖುಷಿಗೆಹಾತೊರೆವ ಕ್ಷಣವೋ ಸಂಭ್ರಮ ಸಂತಸಮಳೆ ಹನಿ ಜೊತೆಗೆ ಸುರಿದಿದೆ ಹರಿದಿದೆಜೀವರಸಧಾರೆಚೈತನ್ಯದೆಡೆಗೆ ‘ಮತ್ತಿತರೆ’ ಅತ್ತಲೂ ಇತ್ತಲೂಸುತ್ತಲೂ ಕತ್ತಲೆ ಬತ್ತಿದ ಹೊಳೆಬಾರದ ಮಳೆಬಿತ್ತದ ಇಳೆಕಟ್ಟಿದೆ ಕೊಳೆಸುಟ್ಟಿದೆ ಕಳೆ ಕದಡಿದ ಕನಸಿಗೆಹೊಸತರ ಕನವರಿಕೆ ಬೇಸರದ ಭಾರಕೆಬರಿ ಭಾವ ನಿಸೂರ ಇತ್ತಲಾಗಿ ಹೊತ್ತೂಹೋಗದು ಅತ್ತಲಾಗಿಚಿತ್ತವೂ ಸ್ವಸ್ಥವಾಗದು ಹಾಗಾಗಿಬೇಕಿಲ್ಲ ಯಾವುವೂಇತರೆಇನ್ನಿತರೆ ಮತ್ತಿತರೆ. ************

ಕಾವ್ಯಯಾನ

ಕವಿತೆ. ದೀಪಾ ಗೋನಾಳ ಏಷ್ಟವಸರಅದೆಷ್ಟು ಗಡಿಬಿಡಿಎಷ್ಟೇ ಬೇಗ ಎದ್ದರೂತಿಂಡಿತಿನ್ನಲೂ ಆಗುವುದೆ ಇಲ್ಲಅನುಗಾಲ ಒಳ ಹೊರಗೆ ಗುಡಿಸಿಹಸನ ಮಾಡುವುದರಲ್ಲೆಅರ್ಧಾಯುಷ್ಯ ,,,ತಿಂದರೊ ಇಲ್ಲವೊ..!?ಕಟ್ಟಿಕೊಟ್ಟ ಡಬ್ಬಿ ಇಟ್ಟುಕೊಂಡರೊ ಇಲ್ಲವೊ..!?ತೊಳೆದ ಬಾಟಲಿಗೆ ನೀರು ತುಂಬಿದ್ದೆ ಒಯ್ದರೊ ಇಲ್ಲವೊ..!?ಹಾಲಿನ ಪಾತ್ರೆಗೆ ಮುಚ್ಚಿದೆನೊ ಇಲ್ಲವೊ..!?ಮೊಸರು ಫ್ರಿಜ್ಜಿಗೆ ದಬ್ಬಿದೆನೊ ಇಲ್ಲವೊ..!?ಬದುಕೆಲ್ಲ ಉದ್ಘರಾದ ಹಾರ..ದಾರಿಯ ತುಂಬ ಹೋಯ್ದಾಟಮನಸ್ಸಿನ ಮಾತು ಕಿವಿಗೆ ಕೇಳುವಷ್ಟು ದೀರ್ಘ ಆಲೋಚನೆ ಒಳಗೊಳಗೆ..ಜೋಲಿ ಹೊಡಿಯುವ ಬಸ್ಸಿನಲ್ಲಿ ಎದುರಿಗೆ ನನ್ನಂತೆ ಅವಸರಕ್ಕೆಎದ್ದೋಡಿ ಬಂದವಳು ಹೇಳುತ್ತಾಳೆ,ಕುಂಕುಮ ಹಚ್ಚೆ ಇಲ್ಲ!!ಓಹ್! ಹೌದು ಕನ್ನಡಿ ಮುಂದೆ ನಿಲ್ಲಲೇ ಇಲ್ಲ, ನನ್ನ ನಾನು […]

ಕಾವ್ಯಸಂಗಾತಿ

ಗಝಲ್ ಬಾಗೇಪಲ್ಲಿ ಕೃಷ್ಣಮೂರ್ತಿ ಬ್ರಹ್ಮಾಂಡದಿ ನೀನು ತೃಣಅದಕೆ ನೀ ಇರುವೆ ಋಣ ಹೇಗೆ ತೀರಿಸುವೆ ಅದನುಯೋಚಿಸು ಒಂದು ಕ್ಷಣ ಸದಾ ಸಲಹಲು ನಿನ್ನಬದಲಾಗಿಸು ನಿನ್ನ ಗುಣ ಅತಿಯಾಸೆಯಿಂದ ನೀನುಮಾಡಿರುವೆ ಎಲ್ಲಾ ರಣ ಸಿಕ್ಕ ಸಿಕ್ಕಲ್ಲೆಲ್ಲಾ ಅಗೆದುಮಾಡಿರುವೆ ಅದಕೆ ವ್ರಣ ಪರಿಸರ ರಕ್ಷಣೆ ಆಗಬೇಕುಸೇರು ನೀನು ಅದರ ಬಣ ಕ್ಷಮೆ ಎನೆ ಭೂಮಿ’ಮಂಕೇ’ಸಕಲರೂ ತೊಡಬೇಕು ರಕ್ಷಣೆಗೆ ಪಣ (ಚೋಟಿ ಬೆಹರ್ ರಚಿಸುವ ಯತ್ನ) **********

ಕಾವ್ಯಯಾನ

ಬದುಕು ಮತ್ತು ಬಣ್ಣಗಾರ ನೂರುಲ್ಲಾ ತ್ಯಾಮಗೊಂಡ್ಲು ಬದುಕು ಮತ್ತು ಬಣ್ಣಗಾರ ಹೊರಗೆ ಎಷ್ಟೊಂದು ಗೊಂದಲ, ಗಲಭೆ, ಚೀರಾಟ ಹುಟ್ಟು ಹಾಕಿದೆಪಾರ್ಲಿಮೆಂಟ್ ನ ಕೊಣೆಗಳು ಮೌನದ ಜಪದಲ್ಲಿ ಮುಳುಗಿವೆಯೋ ?ಇಲ್ಲ , ಹಾಗೆ ಆಗಲು ಸಾಧ್ಯವಿಲ್ಲಜೀವಮಿಡಿತದ ಸದ್ದು ಅಷ್ಟು ಬೇಗ ಅಳಿದುಹೋಗದುನಾನು ನನ್ನಂಥಹ ಲಕ್ಷ ಲಕ್ಷ ಎದೆಗಳಲಿ ಜೀಕುತ್ತಿರುವ ರಕ್ತ, ದಂಗೆ ,ಕ್ರಾಂತಿ ,ಬಂಡಾಯ ದನಿ ಕಮರಿ ಹೋಗದು ಕಾಲಭೈರನ ಹಾದಿ ಮುಗಿಲು ಹರಿಯೊವರೆಗೂ ಹಾದಿದೆರಂಗದ ಮರೆಯಲಿ ನಿನ್ನ ಮುಖವಾಡದ ವ್ಯಂಗ್ಯ ನಗೆಬೋಳೆ ಶಂಕರನ ಕಥಿತ ಕಥನ !ನಾಟಕಾಂಕಕ್ಕೆ […]

ಕಾವ್ಯಯಾನ

ಗಝಲ್ ದೀಪಾಜಿ ಬದುಕು ಬಯಲಾಗಿದೆ ಬಾಳು ಹಣ್ಣಾಗಿದೆ ಬೇಕೆ ನಿನಗೀಗ ದೀಪದೇಹ ಬೆಂಡಾಗಿದೆ ಮನವೂ ಮಾಗಿಹೋಗಿದೆ ಬೇಕೆ ನಿನಗೀಗ ದೀಪ ಸುತ್ತಲು ಆವರಿಸಿ ನಿಂತ ಮಬ್ಬುಗತ್ತಲಿಗೆ ಎಷ್ಟೆಣ್ಣೆ ಸುರಿವೆಬಾಯ್ತುಂಬಿಕೊಂಡ ಗಾಳಿ ಉದುವ ದ್ವೇಷಿಗಳಿಗೆ ನಂಜಿದೆ ಬೇಕೆ ನಿನಗೀಗ ದೀಪ ಒಂದಿಷ್ಟು ಮೆಟ್ಟಿಲಾಚೆ ಬಾಗಿಲಿಲ್ಲದ ಬದುಕೊಂದಿದೆಸುತ್ತೆಲ್ಲ ಸಣ್ಣಗೆ ಮಳೆ ಇದೆ ದೀವಟಿಗೆ ಕುಡಿ ಮೇಲೆ ಅಂಗೈ ಹಿಡಿದೆ ಬೇಕೆ ನಿನಗೀಗ ದೀಪ.. ಕೂಸೆರಡು ಕೈಹಿಡಿದು ಪ್ರೇಮದಾರಿ ತೋರಿಸುತಿವೆಮುಳ್ಳ ಕಣಿವೆಯ ಮೇಲೆ ಮಮತೆಯ ಸೇತುವೆ ಕಟ್ಟಲಾಗಿದೆ ಬೇಕೆ ನಿನಗೀಗ ದೀಪ.. […]

ಕಾವ್ಯಯನ

ಕಾಪಾಡಬೇಕಿದೆ ರಾಮಕೃಷ್ಣ ಸುಗತ ನೀವು ಆಯ್ಕೆ ಮಾಡಿದ್ದೀರಿ ಫಲವತ್ತಾದ ಮಣ್ಣನ್ನುಅಷ್ಟೇ ಆಸ್ಥೆಯಿಂದ ಬೆಳೆಸಿದ್ದೀರಿ ಹೂವಿನ ತೋಟವನ್ನುಕರೆಸಿದ್ದಿರೇನು ನಿಮ್ಮದೇ ದೇವಲೋಕದ ವರ್ಣಕರನ್ನುಎಷ್ಟು ಬಣ್ಣ ಬಣ್ಣದ ಹೂಗಳುತಿಳಿಯುತ್ತಿಲ್ಲ ಅವುಗಳ ವಾಸನೆನೀವು ಆಯುವಂತರು ಸ್ವಾಮಿಎಂದೋ ಕೊಯ್ದು ಬಿಟ್ಟಿದ್ದೀರಿ ನಮ್ಮ ಮೂಗನ್ನು ಮನೆಯ ಹಿಂಭಾಗದಲ್ಲಿ ಹುಲ್ಲು ಬೆಳೆದಿದ್ದಕ್ಕೆನೀವು ದೂರು ಕೊಡುತ್ತೀರಿನೀವು ಪುಣ್ಯವಂತರು ಸ್ವಾಮಿನೀವು ಕಾಲಿಟ್ಟು ಹೋದ ನಮ್ಮದೇ ಓಣಿಗಳಲ್ಲಿಎಲ್ಲೋ ಮೂಲೆಯಲ್ಲಿ ಚಿಗುರುವ ಚಿಗುರಿಗೂಅರ್ಜಿ ಹಾಕುತ್ತಿದ್ದೇವೆ ಅನ್ಯಗ್ರಹ ಜೀವಿಗಳಂತೆ ಪ್ರೀತಿಯೆಂದರೆ ಕುದಿಯುವ ನಿಮ್ಮನ್ನುಚಳಿಗಾಲದ ತಂಪು ರಾತ್ರಿಗಳು ಏನೆಂದು ಕಾಡಿಯಾವುನೀವು ಆರೋಗ್ಯವಂತರು ಸ್ವಾಮಿನಾವು ಬೆಚ್ಚಗೆ ಮಲಗಿದರೆನಿದ್ರಾಹೀನತೆಯಿಂದ […]

ಕಾವ್ಯಯಾನ

ನಿನ್ನ ನೆನಪೆಂದರೆ… ವಸುಂಧರಾ ಕದಲೂರು ಆಗ ನಿನ್ನ ನೆನಪೆಂದರೆ, ಬೇಕಾದ ಮಳೆಯಂತೆತುಂಬಿಕೊಳ್ಳಲು ಹಳ್ಳಕೊಳ್ಳಜಲಾಗರ ಸಾಗರ;ಮುತ್ತುಹವಳ ಸಂಗ್ರಹಾಗಾರ. ಅಚ್ಚಬಿಳುಪಿನ ಕಾಗದದಲಿನೆಚ್ಚಿನ ಅರ್ಥ ತುಂಬಿದ ಭಾವಕೋಶಅಚ್ಚುಕಟ್ಟಾಗಿ ಅಚ್ಚು ಮಾಡಿಸಿದಪದಕೋಶ.. ಈಗ ನಿನ್ನ ನೆನಪೆಂದರೆ, ಅಕಾಲದಲ್ಲಿ ಮಳೆಗರೆದು ಆದರಾಡಿ ರಸ್ತೆಅರ್ಥಕೋಶದಲಿ ಸೇರಿಬಿಟ್ಟಖಾಲಿ ಹಾಳೆ ********

Back To Top