ಕಾವ್ಯಯಾನ

ಬದುಕು ಮತ್ತು ಬಣ್ಣಗಾರ

Jade Mask

ನೂರುಲ್ಲಾ ತ್ಯಾಮಗೊಂಡ್ಲು

ಬದುಕು ಮತ್ತು ಬಣ್ಣಗಾರ

ಹೊರಗೆ ಎಷ್ಟೊಂದು ಗೊಂದಲ, ಗಲಭೆ, ಚೀರಾಟ ಹುಟ್ಟು ಹಾಕಿದೆ
ಪಾರ್ಲಿಮೆಂಟ್ ನ ಕೊಣೆಗಳು ಮೌನದ ಜಪದಲ್ಲಿ ಮುಳುಗಿವೆಯೋ ?
ಇಲ್ಲ , ಹಾಗೆ ಆಗಲು ಸಾಧ್ಯವಿಲ್ಲ
ಜೀವಮಿಡಿತದ ಸದ್ದು ಅಷ್ಟು ಬೇಗ ಅಳಿದುಹೋಗದು
ನಾನು ನನ್ನಂಥಹ ಲಕ್ಷ ಲಕ್ಷ ಎದೆಗಳಲಿ ಜೀಕುತ್ತಿರುವ ರಕ್ತ, ದಂಗೆ ,ಕ್ರಾಂತಿ ,ಬಂಡಾಯ ದನಿ ಕಮರಿ ಹೋಗದು

ಕಾಲಭೈರನ ಹಾದಿ ಮುಗಿಲು ಹರಿಯೊವರೆಗೂ ಹಾದಿದೆ
ರಂಗದ ಮರೆಯಲಿ ನಿನ್ನ ಮುಖವಾಡದ ವ್ಯಂಗ್ಯ ನಗೆ
ಬೋಳೆ ಶಂಕರನ ಕಥಿತ ಕಥನ !
ನಾಟಕಾಂಕಕ್ಕೆ ನೂರೆಂಟು ನೆಪದ ಪಾತ್ರ ಈಗ ನಿನ್ನಿಂದ ಸಾಧ್ಯ…

ದೂರಿದಷ್ಟು ದುಬಾರಿಯಾದ ಬೈಗಳು
ಆದರೆ ಪೆಟ್ರೋಲ್ , ಗ್ಯಾಸ್, ಈರುಳ್ಳಿಗಿಂತ ಹೆಚ್ಚೇನಲ್ಲ
ಜನರ ಸಂಕಟ ,ತಾಳ್ಮೆ , ಸಾವು ನೋವುಗಳ ಪಾತ್ರ ನಿಜದ ರಂಗದಲ್ಲಿ ರಣ ರಣಿಸುತ್ತಿವೆ
ನೀನು ಮಾತ್ರ ಗೋಸುಂಬೆ ಬಣ್ಣಧಾರಿ !
ನಿನಗೆ ಮಣ್ಣ ಕುಲದ ಬದುಕಿನ ಪಾತ್ರ ತಿಳಿಯದು
ಏಕೆಂದರೆ
ನೀನು ಬಣ್ಣ ಕಲಸಿ ವರೆಸಿ ಈಗ
ನೀನೇ ಮೆತ್ತುಕೊಂಡವನು
ಬಣ್ಣಗಳ ಬಣ್ಣನಿಯ ಮಾತಷ್ಟೇ ಆಡುವ ನೀನೇನು
ಸೂತ್ರಧಾರನೇನಲ್ಲ
ನಿನ್ನ ಬಣ್ಣ ಬಣ್ಣ ತರ್ಕದ ಮುಖವಾಡ ಕಳಚಿ
ಸಾಧ್ಯವಾದರೆ ಹೊರಗೆ ಬಾ
ಇಲ್ಲ ಬಣ್ಣ ಬಳಿದುಕೊಂಡೇ ಉಳಿ…
ನಾಳೆ ಮುಂಗಾರಲಿ ಬಣ್ಣ ಕೊಚ್ಚಿಹೋಗುವವರೆಗೂ
ಈಗ, ಬಣ್ಣಗಾರನ ನಿಜದ ಬಣ್ಣ ಬಯಲಾಗಿದೆ

***********

2 thoughts on “ಕಾವ್ಯಯಾನ

  1. ಕವನ ಪ್ರಕಟಿಸಿದಕ್ಕೆ ತುಂಬ ಧನ್ಯವಾದಗಳು ಮಧು ಸರ್…

  2. ವಾಸ್ತವದ ಸಾಲುಗಳು… ಅಲ್ಲಲ್ಲಿ ಅಕ್ಷರ ದೋಷಗಳು ನುಸುಳಿವೆ..

Leave a Reply