ಕಾವ್ಯಯಾನ

ನೇಪಥ್ಯ

Ocean Waves Crashing on Shore

ಎಮ್ . ಟಿ . ನಾಯ್ಕ.ಹೆಗಡೆ

ಆ ನೀಲಿ ಬಾನು, ಮಿನುಗು ತಾರೆ
ಬೆಳೆದು ಕರಗುವ ಚಂದ್ರ
ಈ ಭೂಮಿ – ಅದರ ಕಣಿವೆ
ಮೊರೆವ ಕಡಲು….
ಆ ತಂಗಾಳಿ, ಮುಂದೆ ಬಿರುಗಾಳಿ
ನದಿಯ ಓಟ, ಆ ನಾದ
ದುಂಬಿ ಗಾನ
ಗಾಳಿಗಂಟಿದ ಬದುಕಿನ
ಎಕ್ಕೆ ಬಿತ್ತಗಳೆಲ್ಲಾ
ಬಿತ್ತುತ್ತಾ ಹೊರಟದ್ದು
ಯಾವ ಕತೆ ? ಯಾರ ಕತೆ ?

ಗತಿಸಿದ ಸಾಮ್ರಾಜ್ಯ
ಕರಗಿದ ಅರಮನೆ
ಉರುಳಿದ ಕಿರೀಟಕ್ಕೆ–
ಲ್ಲ, ಹಿನ್ನೆಲೆ ಏನು ಕತೆ ?

ಬಂದ ಗುರುತುಗಳಿಹುದು
ನಿಂದ ಗುರುತುಗಳಿಹುದು
ಹೋದ ಗುರುತುಗಳಿಹುದು
ಆದರೆ —
ಬಂದವರು ಬಂದಂತೆ
ಹೋದುದು ಯಾಕೆ ?

ಆ ಬಾನು , ಈ ಭೂಮಿ ,
ಅದರ ಹೊನ್ನು
ಮತ್ತೆ ಮುಕುಟ
ಎಲ್ಲಾ ತೊರೆದೇ
ಹೋದುದು ಯಾಕೆ ?
ಇಲ್ಲ … ಮರೆತೇ ಹೋದರೆ ?

ಈ ಬಯಲಲಿ ಬದುಕ ಹರಡಿ
ಕತೆ ಬರೆದವರು ಯಾರು ?
ಬರೆವವರು ಯಾರು …?

*********

One thought on “ಕಾವ್ಯಯಾನ

Leave a Reply

Back To Top