ಕಾವ್ಯಯಾನ

ರಸಧಾರೆ, ಮತ್ತಿತರೆ ಕವನಗಳು

Umbrella, Rain, Weather, Water

ವಸುಂಧರಾ ಕದಲೂರು

ಹಸಿರೆಲೆ ಕಾನನ
ಹಸುರಲೆ ಮಲೆಯೋ

ಹೊಸ ಬಗೆ ನರ್ತನ
ಹರುಷದ ನೆಲೆಯೋ

ಹುಮ್ಮಸಿನ ಮನವೋ
ಹುರುಪಿನ ಚೆಲುವೋ

ಹರಸುವ ಖುಷಿಗೆ
ಹಾತೊರೆವ ಕ್ಷಣವೋ

ಸಂಭ್ರಮ ಸಂತಸ
ಮಳೆ ಹನಿ ಜೊತೆಗೆ

ಸುರಿದಿದೆ ಹರಿದಿದೆ
ಜೀವರಸಧಾರೆ
ಚೈತನ್ಯದೆಡೆಗೆ

     ——

‘ಮತ್ತಿತರೆ’

ಅತ್ತಲೂ ಇತ್ತಲೂ
ಸುತ್ತಲೂ ಕತ್ತಲೆ

ಬತ್ತಿದ ಹೊಳೆ
ಬಾರದ ಮಳೆ
ಬಿತ್ತದ ಇಳೆ
ಕಟ್ಟಿದೆ ಕೊಳೆ
ಸುಟ್ಟಿದೆ ಕಳೆ

ಕದಡಿದ ಕನಸಿಗೆ
ಹೊಸತರ ಕನವರಿಕೆ

ಬೇಸರದ ಭಾರಕೆ
ಬರಿ ಭಾವ ನಿಸೂರ

ಇತ್ತಲಾಗಿ ಹೊತ್ತೂ
ಹೋಗದು ಅತ್ತಲಾಗಿ
ಚಿತ್ತವೂ ಸ್ವಸ್ಥವಾಗದು

ಹಾಗಾಗಿ
ಬೇಕಿಲ್ಲ ಯಾವುವೂ
ಇತರೆ
ಇನ್ನಿತರೆ ಮತ್ತಿತರೆ.

************


Leave a Reply

Back To Top