ಗಝಲ್
ಬಾಗೇಪಲ್ಲಿ ಕೃಷ್ಣಮೂರ್ತಿ
ಬ್ರಹ್ಮಾಂಡದಿ ನೀನು ತೃಣ
ಅದಕೆ ನೀ ಇರುವೆ ಋಣ
ಹೇಗೆ ತೀರಿಸುವೆ ಅದನು
ಯೋಚಿಸು ಒಂದು ಕ್ಷಣ
ಸದಾ ಸಲಹಲು ನಿನ್ನ
ಬದಲಾಗಿಸು ನಿನ್ನ ಗುಣ
ಅತಿಯಾಸೆಯಿಂದ ನೀನು
ಮಾಡಿರುವೆ ಎಲ್ಲಾ ರಣ
ಸಿಕ್ಕ ಸಿಕ್ಕಲ್ಲೆಲ್ಲಾ ಅಗೆದು
ಮಾಡಿರುವೆ ಅದಕೆ ವ್ರಣ
ಪರಿಸರ ರಕ್ಷಣೆ ಆಗಬೇಕು
ಸೇರು ನೀನು ಅದರ ಬಣ
ಕ್ಷಮೆ ಎನೆ ಭೂಮಿ’ಮಂಕೇ’
ಸಕಲರೂ ತೊಡಬೇಕು ರಕ್ಷಣೆಗೆ ಪಣ
(ಚೋಟಿ ಬೆಹರ್ ರಚಿಸುವ ಯತ್ನ)
**********
Knowledge is hidden in some persons.
ಸೇರು ನೀನು ಹಸಿರು ಬಣ ……..
ಕ್ಷಮೆಯೇ ಭೂಮಿತಾಯಿ ಕಣಾ…..