Category: ಕಾವ್ಯಯಾನ

ಕಾವ್ಯಯಾನ

ಅರಳುವುದೇಕೋ.. ?ಬಾಡುವುದೇಕೋ

ಕವಿತೆ ಅರಳುವುದೇಕೋ.. ?ಬಾಡುವುದೇಕೋ ಲಕ್ಷ್ಮೀ ಮಾನಸ ಕಾಲದ ಗಾಲಿಯುಉರುಳುತ್ತಾ,ಜವದಿಂದೆಸೆದಅಗಣಿತ ಪ್ರಶ್ನೆಗಳಸರಮಾಲೆಯಲ್ಲಿ,ಮೃದು ಹೃದಯ ಸಿಲುಕಿ,ಅರಳಿ ಮುದುಡುವುದುರಅರ್ಥ ಅರಿಯಲು,ಕಾಲವನ್ನೇ ಮರೆಯುತಿದೆ….. ಕುಸುಮಗಳ ಸರಮಾಲೆಯಲ್ಲಿ,ಸುಮಗಳಿಂದು  ನಲುಗುತಿವೆ,ನೀರವ ಮೌನದಲ್ಲಿ….,ಬಿಸಿಲು -ಮಳೆಯೆನ್ನದೆ,ಬಾಳ ಕೊನೆಯನರಿಯದೆ…… ತಾನಾಗಿಯೂ ಅರಳಲಿಲ್ಲ,ತಾನಾಗಿಯೂ ಮುದುಡಲಿಲ್ಲ,….,ಅರಳುವ ಆಸೆಯೂ ಇರಲಿಲ್ಲ,ಮುದುಡುವ ಬಯಕೆಗೂ ಬರವಿಲ್ಲ…, ಬಿಡಿಸಲಾಗದ ಗಂಟುಗಳಲ್ಲಿ,ಉತ್ತರವಿಲ್ಲದ ಪ್ರಶ್ನೆಗಳಲ್ಲಿ,ಪ್ರಶ್ನೆಗಳಿಗೇ ಪ್ರಶ್ನೆಯಾಗಿ,ಬಾಳುತಿರುವ  ಈ ಕುಸುಮಅರಳುವುದೇಕೋ… ?ಮುದುಡುವುದೇಕೋ… ? ************************

ಗಜಲ್

ಗಜಲ್ ಅರುಣಾ ನರೇಂದ್ರ ನಿನ್ನೆದೆಗೆ ಒರಗಿ ವೇದನೆ ಮರೆಯಬೇಕೆಂದಿರುವೆ ದೂರ ಸರಿಸದಿರುನಿನ್ನ ಮಡಿಲ ಮಗುವಾಗಿ ನಗೆ ಬೀರಬೇಕೆಂದಿರುವೆ ದೂರ ಸರಿಸದಿರು ಬೀಸುವ ಗಾಳಿ ಸೆರಗೆಳೆದು ನಕ್ಕು ಕಸಿವಿಸಿಗೊಳಿಸುತ್ತಿದೆನಿನ್ನ ತೋಳ ತೆಕ್ಕೆಯಲಿ ಚುಕ್ಕಿಗಳ ಎಣಿಸಬೇಕೆಂದಿರುವೆ ದೂರ ಸರಿಸದಿರು ಕಡಲ ಮೊರೆತ ಕಿವಿಗೆ ಅಪ್ಪಳಿಸಿದಾಗ ಜನ್ಮ ಜನ್ಮದ ವಿರಹ ಕೇಕೆ ಹಾಕುತ್ತದೆಮೈ ಬೆವರ ಗಂಧದಲಿ ರಾತ್ರಿಗಳ ಕಳೆಯಬೇಕೆಂದಿರುವೆ ದೂರ ಸರಿಸದಿರು ಉಕ್ಕೇರುವ ಯೌವನದ ಮಧು ಬಟ್ಟಲು ನಿನ್ನ ತುಟಿ ಸೋಕಲು ಕಾಯುತ್ತಿದೆನಶೆ ಏರಿದ ನಿನ್ನ ಕಣ್ಣ ಕೊಳದಲ್ಲಿ ಈಜಾಡಬೇಕೆಂದಿರುವೆ ದೂರ […]

ನಿನ್ನ ಪಾಪದ ಹೆಣ

ಕವಿತೆ ನಿನ್ನ ಪಾಪದ ಹೆಣ ಬೆಂಶ್ರೀ. ರವೀಂದ್ರ ಹೇಳಿ ಬಿಡಬಹುದಿತ್ತು ಈ ಮಾತುಗಳಪ್ರತಿಮೆ ರೂಪಕಗಳಲ್ಲಿಕತೆಯೊಂದರ ಮುಸುಕಿನಲ್ಲಿಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿಅಥವಾಆಧುನಿಕತೆಯ ಹೆಸರಿನಲಿಎಲ್ಲೆ ಮುರಿದಿದ್ದನ್ನು ತರ್ಕಿಸಿ ಸುಸಂಬದ್ಧಗೊಳಿಸಬಹುದಿತ್ತು.ಪ್ರಾಣಿಗಳ ಹುಟ್ಟುಗುಣವಿದು ಎಂದು ಮನಶ್ಶಾಸ್ತ್ರದ ಮೆರಗನೀಯಬಹುದಿತ್ತು ಹೇಳಿಬಿಡುತ್ತೇನೆ ಎಲ್ಲವೀಗಬಟಾಬಯಲಲ್ಲಿ ನಿಂದುನಿನಗೆ ನಿನ್ನಂತವರಿಗೆ ಹಿಂದಿನವರಿಗೆ ಮುಂದಿನವರಿಗೆ ಸಾಕು ಸಾಕಾಗಿದೆನಿಶಸ್ತ್ರಿಯ ಮೇಲೆ ದುರಹಂಕಾರದ ನಿನ್ನ ಶಸ್ತ್ರವ ತೂರಿ ಆಕ್ರಮಿಸುವುದನ್ನು ಸಹಿಸಹಿಸಿ. ಮತ್ತಿಂದುಪೋಲಿಸು ಠಾಣೆಗಳಲ್ಲಿ, ಪತ್ರಿಕೆಗಳಲಿ, ಮುಗಿಲಿಗೆ ಲಗ್ಗೆ ಹಾಕಿದ ಭುಗಿಲುಮಾಧ್ಯಮಗಳಲಿಗುಪ್ತ ವಿಚಾರಣೆಗಳಲಿ ನ್ಯಾಯಾಲಯಗಳಲಿ ಮತ್ತೆನನ್ನ ನಗ್ನಗೊಳಿಸಿ ಹುರಿದು ಮುಕ್ಕುವ ನಿನಗೆ ಹಳೆಯದು,ಹೊಸದಾಗಿ ಹೊಸೆದ ಹಳೆಯಶಾಸ್ತ್ರಗಳ ಧಿಕ್ಕರಿಸಿ […]

ಕೊಡಲಾಗದ್ದು – ಪಡೆಯಲಾಗದ್ದು

ಮರೀಚಿಕೆಯಾದ ಪ್ರೀತಿಗಾಗಿ ಹಂಬಲವೋ
ದೂರ ಸರಿದವರಿಗಾಗಿ ಬೇಡುವಿಕೆಯೋ
ಪ್ರಶ್ನಿಸಿದ ಮನಕೆ
ಅವಳದು ನಿರುತ್ತರ

ಸಿಲುಕಬಾರದು

ದುಡಿದು ಕಾಯಸವೆಸಿ ಕಾಲ‌ವನೂ ದೂಡಿಬಿಡಬಹುದೇನೋ
ನೆನಪುಗಳ‌ ಅಬ್ಬರದ ಅಲೆಗಳ
ಒಳಗೆ ನುಸುಳಿಕೊಳ್ಳಬಾರದು

ಹುಡುಕಾಟ

ಆಡಿದ ಮಾತು ಮರಳಿ ನೋಯಿಸುತಿವೆ
ಮರೆಯಲಾಗದೆ ನೆನಪು ಕಾಡುತ್ತಿವೆ
ಶೃಂಗರಿಸಿ ಕೊಂಡು ಮಾಸಿದೆ ನೀಬಾರದೆ
ಅದೆಂತ ನಿನ್ನ ಶಕ್ತಿ ಕಾಣದೆ ಹಿಂಡುತಿದೆ

ನಾವಿಲ್ಲದಿದ್ದರೂ

ಬಾಳ ಉಯ್ಯಾಲೆಯಲಿ ಜೀಕುತ್ತ
ನಲಿ ನಲಿದು ಕುಣಿದು ಕುಪ್ಪಳಿಸಿದ
ಭಾವ ಕ್ಷಣಗಳ ಸ್ಮರಿಸಿ ಮುದಗೊಳ್ಳಬಾರದೇ

ನಾವು ಮತ್ತು ಅವರು

ಕವಿತೆ ನಾವು ಮತ್ತು ಅವರು ರೇಶ್ಮಾ ಗುಳೇದಗುಡ್ಡಾಕರ್ ಇಳೆಯಿದು ಬುದ್ದನುಬದುಕಿ ಬಾಳಿದ ಬೆಳಕಿರುವದು ಭುವಿಯಿದು ಅಲ್ಲಮನಬಯಲಿಗೆ ಬೆರಗಾದ ತಾಣವಿದು ಧರಣಿಯಿದು ಅಣ್ಣ ಬಸವಣ್ಣನಕ್ರಾಂತಿಗೆ ಸಾಕ್ಷಿಯಾದ ನೆಲವಿದು ಭಾರತವಿದು ಗಾಂಧಿಯಅಹಿಂಸೆಯ ಒಲುಮೆಯಲಿಮಿಂದೆದ್ದ ಸತ್ಯವಿದು ಕತ್ತಿಯ ಅಂಚಿಗೆ ಬಲಿಯಾಗುವವೆಇವರೆಲ್ಲ ಮಾರ್ಗಗಳು ?ಉಳಿದಿಲ್ಲವೆ ಅಥವಾ ಉಳಿಸುವದುಬೇಡವೇ ನೆಮ್ಮದಿಯ ನಾಳೆಗಳನು‌? ಹಸಿದ ಒಡಲಿಗೆ ದ್ವೇಷಅನ್ನ ನೀಡುವದೇ?ಸ್ನೇಹ ಬೆಸೆಯುವದೇ?ಬಾಳಿಗೆ ಹೆಗಲಾಗುವದೇ? ಸಾಮರಸ್ಯ ಅಲೆ ಇಲ್ಲದಸೌಹಾರ್ದದತೆಯ ಕಡಲು ಇರುವುದೇ?ಸಂಕೋಲೆಗಳ ಕಿತ್ತೊಸೆದುಸಂಬಂಧಗಳ ಹೊಸೆದುನಡೆಯುವ ಬನ್ನಿರಿನಮ್ಮ ಗಳ ದಾರಿಗೆ ನಾವೇಮುಳ್ಳಾಗಿ ಭಾವನೆಗಳುಕೃಷವಾಗಿ ಜೀವಿಸುವದು ಬೇಕೆ? *******************************************

Back To Top