ನಾವು ಮತ್ತು ಅವರು

ಕವಿತೆ

ನಾವು ಮತ್ತು ಅವರು

ರೇಶ್ಮಾ ಗುಳೇದಗುಡ್ಡಾಕರ್

Planet, Moon, Orbit, Solar System, Space

ಇಳೆಯಿದು ಬುದ್ದನು
ಬದುಕಿ ಬಾಳಿದ ಬೆಳಕಿರುವದು

ಭುವಿಯಿದು ಅಲ್ಲಮನ
ಬಯಲಿಗೆ ಬೆರಗಾದ ತಾಣವಿದು

ಧರಣಿಯಿದು ಅಣ್ಣ ಬಸವಣ್ಣನ
ಕ್ರಾಂತಿಗೆ ಸಾಕ್ಷಿಯಾದ ನೆಲವಿದು

ಭಾರತವಿದು ಗಾಂಧಿಯ
ಅಹಿಂಸೆಯ ಒಲುಮೆಯಲಿ
ಮಿಂದೆದ್ದ ಸತ್ಯವಿದು

ಕತ್ತಿಯ ಅಂಚಿಗೆ ಬಲಿಯಾಗುವವೆ
ಇವರೆಲ್ಲ ಮಾರ್ಗಗಳು ?
ಉಳಿದಿಲ್ಲವೆ ಅಥವಾ ಉಳಿಸುವದು
ಬೇಡವೇ ನೆಮ್ಮದಿಯ ನಾಳೆಗಳನು‌?

ಹಸಿದ ಒಡಲಿಗೆ ದ್ವೇಷ
ಅನ್ನ ನೀಡುವದೇ?
ಸ್ನೇಹ ಬೆಸೆಯುವದೇ?
ಬಾಳಿಗೆ ಹೆಗಲಾಗುವದೇ?

ಸಾಮರಸ್ಯ ಅಲೆ ಇಲ್ಲದ
ಸೌಹಾರ್ದದತೆಯ ಕಡಲು ಇರುವುದೇ?
ಸಂಕೋಲೆಗಳ ಕಿತ್ತೊಸೆದು
ಸಂಬಂಧಗಳ ಹೊಸೆದು
ನಡೆಯುವ ಬನ್ನಿರಿ
ನಮ್ಮ ಗಳ ದಾರಿಗೆ ನಾವೇ
ಮುಳ್ಳಾಗಿ ಭಾವನೆಗಳು
ಕೃಷವಾಗಿ ಜೀವಿಸುವದು ಬೇಕೆ?

*******************************************

Leave a Reply

Back To Top