ಕವಿತೆ
ಅರಳುವುದೇಕೋ.. ?ಬಾಡುವುದೇಕೋ
ಲಕ್ಷ್ಮೀ ಮಾನಸ
ಕಾಲದ ಗಾಲಿಯು
ಉರುಳುತ್ತಾ,
ಜವದಿಂದೆಸೆದ
ಅಗಣಿತ ಪ್ರಶ್ನೆಗಳ
ಸರಮಾಲೆಯಲ್ಲಿ,
ಮೃದು ಹೃದಯ ಸಿಲುಕಿ,
ಅರಳಿ ಮುದುಡುವುದುರ
ಅರ್ಥ ಅರಿಯಲು,
ಕಾಲವನ್ನೇ ಮರೆಯುತಿದೆ…..
ಕುಸುಮಗಳ ಸರಮಾಲೆಯಲ್ಲಿ,
ಸುಮಗಳಿಂದು ನಲುಗುತಿವೆ,
ನೀರವ ಮೌನದಲ್ಲಿ….,
ಬಿಸಿಲು -ಮಳೆಯೆನ್ನದೆ,
ಬಾಳ ಕೊನೆಯನರಿಯದೆ……
ತಾನಾಗಿಯೂ ಅರಳಲಿಲ್ಲ,
ತಾನಾಗಿಯೂ ಮುದುಡಲಿಲ್ಲ,….,
ಅರಳುವ ಆಸೆಯೂ ಇರಲಿಲ್ಲ,
ಮುದುಡುವ ಬಯಕೆಗೂ ಬರವಿಲ್ಲ…,
ಬಿಡಿಸಲಾಗದ ಗಂಟುಗಳಲ್ಲಿ,
ಉತ್ತರವಿಲ್ಲದ ಪ್ರಶ್ನೆಗಳಲ್ಲಿ,
ಪ್ರಶ್ನೆಗಳಿಗೇ ಪ್ರಶ್ನೆಯಾಗಿ,
ಬಾಳುತಿರುವ ಈ ಕುಸುಮ
ಅರಳುವುದೇಕೋ… ?
ಮುದುಡುವುದೇಕೋ… ?
************************
ಸುಂದರವಾದ ಕವನ ಕುಮಾರಿ ಲಕ್ಷ್ಮಿ ಮಾನಸ್ ಅವರಿಗೆ ಅಭಿನಂದನೆಗಳು
ಬರವಣಿಗೆ ನಿರಂತರವಾಗಿ ಸಾಗಲಿ