ಕಾವ್ಯಯಾನ
ಸುಡುಗಾಡು ರಾಜು ದರಗಾದವರ ಸುಡುಗಾಡು ನೀನೆಷ್ಟು ಸಹೃದಯಿ, ಭೇದಭಾವವಿಲ್ಲದ ನಿನ್ನಲ್ಲಿ ಅದೆಂತಹ ತಿಳಿಮೌನ. ಮೇಲುಕೀಳು ಕಾಣದ ನಿನ್ನಲ್ಲಿ ಹೋಲಿಕೆಗೆ ಸಿಗದ ಐಕ್ಯತೆ. ದೊಡ್ಡವ ಚಿಕ್ಕವ ಅನ್ನೋ ತಾರತಮ್ಯವಿಲ್ಲದ, ಎಲ್ಲರನ್ನು ಸಮಾನಭಾವದಿಂದ ಸ್ವಾಗತಿಸುವ ನಿನ್ನದು ಅದೆಂತಹ ಧರ್ಮ…! ವೀರರನ್ನು ,ಹೇಡಿಗಳನ್ನು ಪುಣ್ಯವಂತರನ್ನು,ಪಾಪಿಗಳನ್ನು ಬೇರ್ಪಡಿಸುವ ಬುದ್ಧಿಯೆಂತು ಇಲ್ಲ. ಹೆಣ್ಣು,ಗಂಡು ಒಂದೇ ಎಂದು ಸಮಾನಕಾಣೋ ಹೃದಯವಂತಿಕೆ ನಿನ್ನಲ್ಲಿ ಬಿಟ್ಟು ಮತ್ತ್ಯಾರಲ್ಲಿ ಬರಲು ಸಾಧ್ಯ ಹೇಳು…? ಓ ಸ್ಮಶಾನವೇ…ನಿನಗೆ ನೀನೇ ಆದರ್ಶ…! ********
ಕಾವ್ಯಯಾನ
ಕೊನೆಯೂ ಅಲ್ಲ! ರೇಖಾ ವಿ.ಕಂಪ್ಲಿ ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ ಮೊದಲಾದೊಡೆ ಮೊದಲಿಗರು ಕೊನೆಯಾದಡೆ ಕೊನೆಗಿರುವ ಎಮ್ಮ ಜೀವದಾಟದಲ್ಲಿ ನಾವೇ ಮೊದಲಿಗರು, ಕೊನೆಯವರು ಎಮ್ಮ ದುಃಖ ಎಮಗೆ ಹಿರಿದು ತಮಗೆ ಕಿರಿದು ಕಾಲನುರುಳಲಿ ಕವಿಯು ಬರೆಯಲಿ ಮೊದಲು ಕೊನೆಯ ನಡುವಿನಲಿ ಜೀವದೂಟದ ಎಲೆಯಲಿ ಕಾವ್ಯ ಕಥನವು ಉಳಿಯಲಿ ಕವಿ ಕಾಣದೇ ಅಳಿಯಲಿ ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ… ***********************************
ಕಾವ್ಯಯಾನ
ಗಝಲ್ ಲಕ್ಷ್ಮಿಕಾಂತ ಮಿರಜಕರ ಮನೆಗಳು ,ಗದ್ದೆಗಳು ಮಳೆಗೆ ಕೊಚ್ಚಿ ಹೋದವು,ಮುಳುಗಿಲ್ಲ ಬದುಕು ಊರಿಗೆ ಊರುಗಳೇ ನೆರೆಗೆ ನಲುಗಿ ಹೋದವು ಮುಳುಗಿಲ್ಲ ಬದುಕು ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ ಕೆಸರು ತುಂಬಿದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು ಕಣ್ಣಾಲಿ ತುಂಬೆಲ್ಲ ದುಡಿದು ಕೂಡಿಸಿ ಕಾಪಿಟ್ಟ ಬದುಕಾಧಾರಗಳ ಅವಶೇಷಗಳು ಭರವಸೆಯ ಬಣ್ಣ ತುಂಬಿ ವಿಶೇಷ ಮಾಡುವೆವು ಮುಳುಗಿಲ್ಲ ಬದುಕು ಕೈ ಹಿಡಿದಿಲ್ಲ ಪ್ರಭುತ್ವ,ಗಾಳಿಯಲ್ಲೇ ತೇಲಾಡುತ್ತಿವೆ ಸುಳ್ಳು ಆಶ್ವಾಸನೆಗಳು ಬಂದೇ ಬರ್ತಾರೆ ಒಂದಿನ ಬುದ್ಧಿ ಕಲಿಸುವೆವು […]
ಕಾವ್ಯಯಾನ
ಇವನಾರವ ಇವನಾರವ ರಾಜು ದರಗಾದವರ ಅಂದು ಇವ ನಮ್ಮವ, ಇವ ನಮ್ಮವ ಅಂದವನು; ಇಂದು ಇವನಾರವ,ಇವನಾರವ ಎನ್ನುತಿರುವನಲ್ಲ….! ಅಂದೇ ಕೇಳಿದ್ದರೆ ? ನಮ್ಮ ಅಜ್ಜನೋ ಅವರ ಅಜ್ಜನೋ ಗುನುಗುತ್ತಿದ್ದ. ರಕ್ತ ಚೆಲ್ಲಿದ ಭೂಮಿ ಹೇಳುತ್ತಿತ್ತು. ಕೇಳುವುದಾದರೆ ಜಂಗು ಹಿಡಿದ ಬಂದೂಕು ಕೇಳು, ಎದೆ ಸೀಳಿ ಕುಡಿದ ರಕ್ತದಾವುದು…!? ಹರಿದು ಮೂಲೆ ಸೇರಿದ ಬೂಟನ್ನ ಕೇಳು ವದಿಕೆ ತಿಂದ ಕಾಯದಾವುದು..!? ಅವರಿವರೆನ್ನದೆ ಒಡಲಬಳ್ಳಿ ಹಬ್ಬಿದ ಮೂಲ ಸಿಗುವುದಾದರೂ ಯಾರಿಗೆ..? **************
ಕಾವ್ಯಯಾನ
ಬುದ್ಧನಾಗಲು ರೇಖಾ ವಿ.ಕಂಪ್ಲಿ ಬುದ್ಧನಾಗಲು ಬುದ್ಧನಾಗಲು ಬದ್ಧ ವೈರಾಗಿಯಾಬೇಕಿಲ್ಲ ಬದ್ಧ ವೈರಿಗಳನ್ನು ಕ್ಷಮಿಸಿದರೆ ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ಬೋಧಿ ವೃಕ್ಷದ ನೆರಳುಬೇಕಿಲ್ಲ ನಾನೆಂಬ ಅಂಧಕಾರದರಳು ತೆಗೆದರೆ ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ಶುದ್ಧ ವೈಶಾಖದಲ್ಲಿ ಹುಟ್ಟಬೇಕಿಲ್ಲ ಶುದ್ಧ ಪರಿಶುದ್ಧ ಮನಸ್ಸಿರಲು ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ರಾಜ್ಯ, ಸಂಸಾರ ಬಿಡಬೇಕಿಲ್ಲ ಸತ್ಸಂಗದ ವಿಚಾರಧಾರೆ ಸಾಕು ಬುದ್ಧನಾಗ ಬಹುದಲ್ಲವೇ? ****************
ಕಾವ್ಯಯಾನ
ಹೆದರುವುದಿಲ್ಲ! ವಿಜಯಶ್ರೀ ಹಾಲಾಡಿ ಹೆದರುವುದಿಲ್ಲ ನಿಸರ್ಗದೊಂದಿಗೆ ದುಡಿಯುವುದುಬೆವರಿನ ತುತ್ತು ತಿನ್ನುವುದುಇದೇ ಬದುಕೆಂದು ತಿಳಿದನನ್ನ ಪೂರ್ವಜರ ಕಾಲವದುನನಗಾಗಲಿ ನನ್ನ ಓರಗೆಯಮಂದಿಗಾಗಲಿ ಜನನ ಪತ್ರಗಳಸರಕಾರಿ ದಾಖಲೆಗಳಹೊಳಹೂ ತಿಳಿದಿರಲಿಲ್ಲ ಇಲ್ಲದ ಪ್ರಮಾಣ ಕಾಗದಗಳತಂದುಕೊಡಿರೆಂದು ಆಜ್ಙಿಸುವವರೆಹೂವು ಅರಳಿದ್ದಕ್ಕೆ ಸಾಕ್ಷಿಹೇಳಲು ಒತ್ತಾಯಿಸದಿರಿಶತಮಾನಗಳಿಂದ ಇದೇನೀರು ಮಣ್ಣು ಗಾಳಿಉಸಿರಾಡಿದ್ದೇವೆ- ಇನ್ನೂ ಇಲ್ಲೇಇದ್ದು, ಸತ್ತು ನೆಲದಋಣವ ಸಲ್ಲಿಸುತ್ತೇವೆ…ನೀವು ಬಂದೂಕಿಗೆಮಾತು ಕಲಿಸಿರುವಿರಿಲಾಠಿ ಬಡಿಗೆ ದೊಣ್ಣೆಗಳಕೆತ್ತಿ ಹರಿತಗೊಳಿಸಿರುವಿರಿಆದರೆರಕ್ತದ ಹಾದಿಯಲ್ಲಿ ಬೀಜ– ಮೊಳೆಯುವುದಿಲ್ಲ ಮಳೆಬೀಳುವುದಿಲ್ಲ- ಹಸಿವಿಗೆಅನ್ನ ಬೆಳೆಯುವುದಿಲ್ಲ ಇಲ್ಲದ ಕಾಗದಪತ್ರಗಳಜಾಗದಲ್ಲಿ ನಮ್ಮ ದೇಹಗಳಿವೆಈ ನೆಲದ ಸಾರಹೀರಿದ ಜೀವಕೋಶಗಳಿವೆಮನಸ್ಸುಗಳಿವೆಆತ್ಮಗಳಿವೆಕನಸುಗಳಿವೆನಂಬಿ….ಇದಕ್ಕೂ ಮೀರಿಬದುಕಿಬಾಳಿದ ಹೊಲ- ಮನೆ-ಗಳ ಅಗಲಿ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಗಜಲ್ ಸತ್ಯ ಎಂದಿನಂತೆ ಬೆತ್ತಲೆಯಾಗೇ ಇದೆ ಸುಳ್ಳು ವೇಷ ಕಳಚುವ ಕಾಲ ಬಂದಿದೆ ಸುಳ್ಳೀಗ ಸತ್ಯವಾಯಿತು ಎಂದರ್ಥವಲ್ಲ ಹುಸಿಯ ಅಸಲಿಯತ್ತು ಸಾಬೀತಾಗಿದೆ ಎಷ್ಟೊಂದು ಬಣ್ಣಬಣ್ಣದ ವೇಷಗಳು ಇಲ್ಲಿ ತೊಗಲುಗೊಂಬೆಗಳಿಗೆ ಜೀವ ಬಂದಂತಿದೆ ಹೊಸ್ತಿಲಲ್ಲಿ ಹುಲ್ಲು ತುಂಬಿದೆ ಎಂದರು ಅಣ್ಣ ಮಾಡುವುದೇನು ಕಣ್ಣಲ್ಲೂ ರಜ ತುಂಬಿದೆ ನೆರಳಿನೊಂದಿಗೆ ಎಷ್ಟೆಂದು ಗುದ್ದಾಟ ಗೆಳೆಯ ನಿಜದ ನೇರಕೆ ತೆರೆದು ಎದೆಯ ನಡೆಸಬೇಕಿದೆ ***********
ಕಾವ್ಯಯಾನ
ಮಾನವರು ಮಾಲತಿ ಹೆಗಡೆ ಮಾನವರು! ತಾಳು ಅರಳಿಸಿ ನಗಿಸುವೆ ನನ್ನೊಡಲ ಮಗುವೆ ಎನುವ ಗಿಡಗಳ ಸಂಭ್ರಮದರಿವೆಲ್ಲಿದೆ ಹೂವಾಡಗಿತ್ತಿಗೆ.. ನಾಳೆಗರಳುವ ಹೂವ ಇಂದೇ ಕೊಯ್ದ ಬಳ್ಳಿಯಲಿ ಕಟ್ಟಿ ಮಾಲೆ,ದಂಡೆಯನ್ನಾಗಿಸಿ ಬುಟ್ಟಿ ತುಂಬಿ ಬೆಳಂಬೆಳಿಗ್ಗೆ ಅದನು ನೆತ್ತಿಗೇರಿಸಿ ‘ಮೊಲ್ಲೆ ಮಲ್ಗಿ ಮಾಲೇರಿ’ ರಾಗವೆಳೆಯುತ್ತ ಊರೆಲ್ಲ ಸುತ್ತದಿದ್ದರೆ ಅವಳ ಮನೆಯೊಲೆ ಉರಿಯುವುದಿಲ್ಲ… ಕೆಚ್ಚಲು ತುಂಬಿದ ಹಾಲ ಕರುವಿಗುಣಿಸಬೇಕೆಂಬ ಹಸುವಿನ ಮಮತೆಯ ಹಂಬಲದರಿವೆಲ್ಲಿ ಗೋವಳನಿಗೆ ಹಿಡಿಹುಲ್ಲು ಕರುವಿಗಿತ್ತು ಹಸುವಿನ ಹಾಲನೆಲ್ಲ ಹಿಂಡಿ ಕ್ಯಾನು ತುಂಬಿ ‘ಹಾಲರೀ ಹಾಲ’ ಎನ್ನುತ್ತ ವರ್ತನೆ ಮನೆಗಳ ಪಾತ್ರೆಗಳಿಗೆ […]
ಕಾವ್ಯಯಾನ
ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಡಾ.ಗೋವಿಂದ ಹೆಗಡೆ ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಇಂಗುತ್ತಿರುವ ಒರತೆಯಿಂದ ಗುಟುಕುಗಳ ಮೊಗೆಯುತ್ತಲೇ ಇದ್ದೆ ನದಿಯೊಂದು ದಿಕ್ಕು ಬದಲಿಸಿ ತಂಪೆರೆಯುವುದೆಂದು ಊಹಿಸಿರಲಿಲ್ಲ ಈ ಸಾಲುಗಳು ( ದ್ವಿಪದಿ) ರೇಖಾರ ಗಜಲ್‌ಯಾನವನ್ನು ಸಮರ್ಥವಾಗಿ ಹೇಳುತ್ತವೆ ಎಂದು ಅನಿಸುತ್ತದೆ. ನಾನು ರೇಖಾ ಭಟ್ಟರನ್ನು ಮೊದಲು ಕಂಡಿದ್ದು ಸಾಹಿತ್ಯ ಸಮ್ಮೇಲನವೊಂದರ ಕವಿಗೋಷ್ಠಿಯಲ್ಲಿ.ಯಾರು ಯಾರೋ ಬಂದು ಬಾಲಿಶ ಸಾಲುಗಳನ್ನು ಕವನವೆಂದು ಓದಿದ ಅಲ್ಲಿ ರೇಖಾರ ಕವನ, ಮೆಲುದನಿಯ ಅವರ ವಾಚನ ‘ ಪರವಾಗಿಲ್ಲ , ಈ ಸಾಲುಗಳಲ್ಲಿ […]
ಕಾವ್ಯಯಾನ
ಬಡವರ ಸ್ವಾತಂತ್ರ್ಯ ರಾಜು ದರ್ಗಾದವರ ಬಡವರ ಸ್ವಾತಂತ್ರ್ಯ ಇನ್ನೆಷ್ಟು ಜೀವಬೇಕು ಕೇಳು ಸ್ವಾತಂತ್ರ್ಯವೊಂದು ಸಿಗಲಿ, ನಾಡಮಕ್ಕಳ ಬದುಕಿಗೆ; ಬೀಸಿರಕ್ತ ನಿನ್ನ ಬೇಡಿಕೆಯಾದರೆ ತಗೆದು ಬಿಡು ಖಡ್ಗವನ್ನು ತುಂಡರಸಿ ಕೊಡುವೆ ನಿನ್ನ ಪಾದಗಳಿಗೆ ಸ್ವಾತಂತ್ರ್ಯ ಸಿಗದ ಬದುಕು ಬೇಡವಾಗಿ ನರಕವೇ ಕಂಣ್ತುಂಬಿ ಹರಿದಿದೆ; ಬಡವನ ಮರಗು ತರುವುದಲ್ಲ ಮೆರಗು ಆಳಿದ್ದು ಸಾಕು,ಅರಸನಾಗಬೇಡ ಬಡವರ ಬದುಕಾಗು.. **********