ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ತೋರೀಕಿಗಾಗಿ ಹೃದಯ ಲಬ್ ಡಬ್ ಎನ್ನುತ್ತದೆ ನನಗಾಗಿ
ಅರಿವಿದೆ ಎನಗೆ ಅದು ನಿಜದಿ ಬಡಿಯುತ್ತಿದೆ ನಿನಗಾಗಿ

ಹೃದಯ ಬಡಿತವ ಯಾರೂ ನಿಯಂತ್ರಿಸೆ ಆಗದು
ಹಿಡಿದಿರಿಸಿಹ ಮನ ನನ್ನ ಬೇಡುತ್ತಿದೆ ಬಿಡುಗಡೆಗಾಗಿ

ಕಣ್ಣು ಮುಚ್ಚೆ ನಿನ್ನ ಚಂದ ಸ್ವರೂಪ ಮಾತ್ರ ಕಂಡಿದೆ
ಅದಕೂ ಹಿಂದೆ ಕಾಣುವ ಪ್ರಯತ್ನವಿದೆ ಸತತವಾಗಿ

ತಾಳ್ಮೆಗೆಟ್ಟ ಕೌಶಿಕ ಸುಟ್ಟ ಒಂದು ಪುಟ್ಟ ಹಕ್ಕಿಯ ಕೋಪದಿ
ಚಿತ್ತ ತಾ ವಿಶ್ವಾಮಿತ್ರನಂತೆ  ಬಯಸುತ್ತಿದೆ ದೇಹ ಮಿಲನಕಾಗಿ

ಕೃಷ್ಣಾ! ಎಲ್ಲಾ ಹೆಂಡರಿಗೂ  ಹಂಚಿದೆಯಾ ಸಮ ಪ್ರೀತಿಯ!
ಚಿತ್ತಮಾತ್ರ ಪತ್ನಿಗೆ ಮೋಸವೆಂದು ತಡೆಯುತಿದೆ ವಿವೇಕವಾಗಿ


About The Author

Leave a Reply

You cannot copy content of this page

Scroll to Top