ಕಾವ್ಯ ಸಂಗಾತಿ
ಬಾಗೇಪಲ್ಲಿ
“ಗಜಲ್ (ಜುಲ್ ಕಾಫಿಯಾ )”


ತೋರೀಕಿಗಾಗಿ ಹೃದಯ ಲಬ್ ಡಬ್ ಎನ್ನುತ್ತದೆ ನನಗಾಗಿ
ಅರಿವಿದೆ ಎನಗೆ ಅದು ನಿಜದಿ ಬಡಿಯುತ್ತಿದೆ ನಿನಗಾಗಿ
ಹೃದಯ ಬಡಿತವ ಯಾರೂ ನಿಯಂತ್ರಿಸೆ ಆಗದು
ಹಿಡಿದಿರಿಸಿಹ ಮನ ನನ್ನ ಬೇಡುತ್ತಿದೆ ಬಿಡುಗಡೆಗಾಗಿ
ಕಣ್ಣು ಮುಚ್ಚೆ ನಿನ್ನ ಚಂದ ಸ್ವರೂಪ ಮಾತ್ರ ಕಂಡಿದೆ
ಅದಕೂ ಹಿಂದೆ ಕಾಣುವ ಪ್ರಯತ್ನವಿದೆ ಸತತವಾಗಿ
ತಾಳ್ಮೆಗೆಟ್ಟ ಕೌಶಿಕ ಸುಟ್ಟ ಒಂದು ಪುಟ್ಟ ಹಕ್ಕಿಯ ಕೋಪದಿ
ಚಿತ್ತ ತಾ ವಿಶ್ವಾಮಿತ್ರನಂತೆ ಬಯಸುತ್ತಿದೆ ದೇಹ ಮಿಲನಕಾಗಿ
ಕೃಷ್ಣಾ! ಎಲ್ಲಾ ಹೆಂಡರಿಗೂ ಹಂಚಿದೆಯಾ ಸಮ ಪ್ರೀತಿಯ!
ಚಿತ್ತಮಾತ್ರ ಪತ್ನಿಗೆ ಮೋಸವೆಂದು ತಡೆಯುತಿದೆ ವಿವೇಕವಾಗಿ
ಬಾಗೇಪಲ್ಲಿ.



